ಕರಾವಳಿ

ಪುದೀನ ಸೊಪ್ಪಲ್ಲಿ ಮನುಷ್ಯರಿಗೆ ಬೇಕಾದ ಈ 12 ವಿಶೇಷ ಗುಣಗಳಿರೋದು ಕೇಳಿ ಸಕ್ಕತ್ ಆಶ್ಚರ್ಯ ಪಡ್ತೀರಿ

Pinterest LinkedIn Tumblr

ರಿಫ್ರೆಶಿಂಗ್ ಮಿಂಟ್ ಅಂತ ಜಾಹಿರಾತ್ಗಳಲ್ಲಿ ಕೇಳ್ತಾನೆ ಇರ್ತಿರಿ. ಅದು ಬೇರೆ ಏನೂ ಅಲ್ಲ, ಪುದೀನ! ಇದರ ಸಸಿ ಎಲ್ಲಿ ಹಾಕಿದರೂ ಬೆಳೆಯುತ್ತೆ!
ಮಾರ್ಕೇಟ್ನಲ್ಲಿರೋ ಟೂತ್ ಪೇಸ್ಟು, ಬಬಲ್ ಗಮ್ಮು, ಬಾಯಿ ವಾಸನೆ ಹೋಗಿಸಿಕೊಳ್ಲಕ್ಕೆ ತಿನ್ನೋ ಫ್ರೆಶ್ನರ್, ಕ್ಯಾಂಡಿ ಮತ್ತೆ ಮೂಗು ಕಟ್ಟಿದ್ದಾಗ ತೊಗೊಳೊ ಇನ್ಹೇಲರ್ ಕೂಡ ಪುದಿನ ಫ್ಲೇವರ್ದೇ ಇರತ್ತೆ.
ಬೇಸಿಗೆಯಲ್ಲಿ ಪುದೀನ ಬಳಕೆ ಮಾಡೊದ್ರಿಂದ ದೇಹ ತಂಪಾಗತ್ತೆ, ಉಷ್ಣತೆ ಸಮತೋಲನದಲ್ಲಿ ಇರತ್ತೆ. ಪಿತ್ತ ಪ್ರಕೋಪ ಕಡಿಮೆಯಾಗತ್ತೆ ಅಂತ ಆಯುರ್ವೇದದಲ್ಲಿ ಹೇಳಿದೆ.
ನಾವಂತೂ ಅನಾದಿ ಕಾಲದಿಂದ ಪುದಿನ ಚಟ್ನಿ, ಪುದಿನ ಬಾತ್, ಪುದಿನ ತಂಬ್ಳಿ, ಪುದಿನ+ನಿಂಬೆ ಪೇಯನ ಮಾಡೊ ಪದ್ದತಿ ಅನುಸರಿಸುತ್ತಾ ಇದ್ದೀವಿ.

ಪುದೀನ ಮಹತ್ವನ ಇನ್ನು ಹೆಚ್ಚಾಗಿ ತಿಳ್ಕೊಬೇಕಾದ್ರೆ ಮುಂದೆ ಓದಿ.

1. ಆಸಿಡಿಟಿ ಕಡಿಮೆ ಮಾಡುತ್ತದೆ.
ಪುದಿನ ಎಲೆನ ಗ್ರೀನ್ ಟೀ ಜೊತೆ ಮಿಕ್ಸ್ ಮಾಡಿ ಕುಡಿಯೋದ್ರಿಂದ ಜೀರ್ಣಶಕ್ತಿ ಹೆಚ್ಚತ್ತೆ. ಗ್ಯಾಸ್ಟ್ರಿಕ್ ನಿಂದ ಉಂಟಾಗೋ ಹೊಟ್ಟೆನೋವು ಮತ್ತು ವಾಂತಿನ ದೂರ ಮಾಡತ್ತೆ.

2. ತಿಂದ ತಕ್ಷಣವೇ ಬಾಯಲ್ಲಿ ಲಾಲಾರಸ ಹೆಚ್ಚಾಗಿ ಬರುತ್ತದೆ.
ಜೀರ್ಣಕ್ರಿಯೆಗೆ ಬೇಕಾಗೋ ಕಿಣ್ವಗಳು ಸರಿಯಾಗಿ ಉತ್ಪತ್ತಿಯಾಗಿ ಮುಂದೆ ತಿನ್ನೋ ಆಹಾರ ಅರಗಿಸಿಕೊಳ್ಲಕ್ಕೆ ರೆಡಿ ಆಗತ್ತೆ ನಮ್ಮ ಹೊಟ್ಟೆ. ಊಟದ ಮುಂಚೆ ಪುದಿನ ಎಲೆ ಶರ್ಬತ್ ಕುಡಿಯೋದು ಪಾಶ್ಚಾತ್ಯ ದೇಶಗಳಲ್ಲಿ ಜನಪ್ರಿಯ ಅಭ್ಯಾಸ ಆಗಿದೆ.

3. ಪುದಿನದ ವಾಸನೆಯಿಂದ ತಲೆನೋವು ಮಾಯವಾಗತ್ತೆ
ಅದಕ್ಕೆ ತಾನೆ ವಿಕ್ಸ್, ಟೈಗರ್ ಬಾಮ್ ಹಚ್ಚಿಕೊಂಡ್ರೆ ತಕ್ಷಣ ಆಲಸ್ಯ ದೂರ ಆಗೋದು! ಒಂದ್ ತರ ಚುರುಕಾಗ್ತೀವಿ ಅಲ್ವೇ?

4. ಪುದಿನದ ವಾಸನೆಯಿಂದ ಮೂಗು ಕಟ್ಟಿದ್ದು ತೆರೆದು ಕೊಳ್ಳತ್ತೆ
ಶೀತಕ್ಕೆ ಮೂಗು ಕಟ್ಟಿದ್ರೆ ಬಿಸಿ ನೀರಿಗೆ ಒಂದು ಹಿಡಿ ಪುದಿನ ಎಲೆ ಹಾಕಿ ಹಬೆಯಲ್ಲಿ ಬರೋ ವಾಸನೆಯನ್ನ ಮೂಸ್ತಾ ಇದ್ರೆ ಮೂಗು ಕಟ್ಟಿದ್ದು ಬಿಡತ್ತೆ, ತಲೆಭಾರ ಕಡಿಮೆ ಆಗತ್ತೆ.

5. ತಿಂದ ತಕ್ಷಣ ಹೊಟ್ಟೆ ನುಲಿಯೋದು ತಪ್ಪತ್ತೆ.
ಕೆಲವರು ಊಟ ಮಾಡಿದ ತಕ್ಷಣ ಹೊಟ್ಟೆ ಹಿಂಡಿದ ಹಾಗೆ ಆಗಿ ಬಾಥ್ರೂಮ್ಗೆ ಹೋಗ್ತಾರೆ. ಹೀಗೆ ದಿನಾ ಆಗ್ತಿದ್ರೆ ಅದಕ್ಕೆ ಊಟ ಆದ ನಂತರ ಪುದಿನ ಕಷಾಯ ಕುಡಿರಿ.

6. ಅಸ್ತಮಾ ತೊಂದ್ರೆ ಇರೋರಿಗೆ ಪುದಿನ ಕಷಾಯ ಕುಡಿದ್ರೆ ಉಸಿರಾಟದ ಸಮಸ್ಯೆ ಕಡಿಮೆಯಾಗತ್ತೆ.
ಪುದಿನ ಎಲೆ ಜಜ್ಜಿ ರಸ ತೆಗೆದು ಅದಕ್ಕೆ ಸ್ವಲ್ಪ ಶುಂಠಿ ಮತ್ತು ತುಳಸಿ ರಸ ಹಾಗೂ ಜೇನುತುಪ್ಪ ಸೇರಿಸಿ ಮಕ್ಕಳಿಗೆ ನೀಡಿದರೆ ಕಫ ನಿವಾರಣೆಯಾಗಿ ಶೀತ ಗುಣಮುಖವಾಗುತ್ತದೆ.

7. ಕರುಳಿನ ಅಲ್ಸರ್ ನಿವಾರಿಸುತ್ತೆ.
ಒಂದು ಹಿಡಿ ಪುದಿನ ಎಲೆನ ರುಬ್ಬಿ ಸೋಸಿಕೊಂಡು ಅದಕ್ಕೆ ಸ್ವಲ್ಪ ಜೀರಿಗೆ+ನಿಂಬೆಹಣ್ಣು+ಜೇನುತುಪ್ಪ ಸೇರಿಸಿ. ಪ್ರತಿದಿನ 3 ರಿಂದ 4 ಕಪ್ ಕುಡಿಯೋದ್ರಿಂದ ರಕ್ತನ ಕ್ಲೀನ್ ಮಾಡತ್ತೆ.ದೇಹದಲ್ಲಿರೋ ನಂಜನ್ನು ಹೊರಹಾಕುತ್ತದೆ.

8. ಚರ್ಮದ ಅಲರ್ಜಿ ಹಾಗೂ ಮೊಡವೆಗಳನ್ನು ಕಡಿಮೆ ಮಾಡತ್ತೆ.
ಪುದಿನ ಎಲೆಲಿ ಇರೋ ಸಾಲಿಸಿಲಿಕ್ ಆಸಿಡ್ ಚರ್ಮನ ಮೃದುಗೊಳಿಸುವುದಲ್ಲದೆ ಕ್ಲೆನ್ಸರ್ ರೀತಿ ಕೆಲಸ ಮಾಡತ್ತೆ.

9. ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗೊ ನೋವನ್ನ ಹೋಗಲಾಡಿಸತ್ತೆ.
ಪುದಿನ ಎಲೆಲಿ ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ವಿಟಮಿನ್ ಸಿ, ಡಿ, ಇ ಹಾಗೂ ವಿಟಮಿನ್ ಬಿ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

10. ಹಲ್ಲು-ಹುಳುಕು ಹೋಗಲಾಡಿಸತ್ತೆ.
ಪುದಿನ ಎಲೆ ಜಗಿದು ತಿನ್ನೋದ್ರಿಂದ ಬಾಯಿಯ ದುರ್ವಾಸನೆ ದೂರವಾಗತ್ತೆ. ವಸಡು ಕ್ಲೀನ್ ಆಗತ್ತೆ. ಬಾಯಲ್ಲಿ ಉಂಟಾಗುವ ಅಲ್ಸರ್ಗೆ ಕೂಡ ಪುದಿನ ಉತ್ತಮ ಔಷಧಿ.

11. ನೆನಪಿನ ಶಕ್ತಿ ಹೆಚ್ಚಿಸತ್ತೆ.
ಪುದಿನ ಎಲೆ ಅಗಿದು ತಿನ್ನೋದ್ರಿಮ್ದ ಅಥವಾ ಮಿಂಟ್ ಇರೋ ಬಬಲ್ ಗಮ್ ಜಗಿತ್ತಾ ಇದ್ರೇ ಮೆದುಳು ಚುರುಕಾಗತ್ತಂತೆ.

12. ಕ್ಯಾನ್ಸರ್ ಸಾಧ್ಯತೆ ಕಡಿಮೆ ಮಾಡುತ್ತೆ.
ಪುದಿನದಲ್ಲಿ ಪೆರಿಲಿಲ್ ಆಲ್ಕೊಹಾಲ್ ಅನ್ನೋ ಸತ್ವ ಚರ್ಮದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಹಾಗೂ ಕರುಳಿನ ಕ್ಯಾನ್ಸರ್ ತಡೆಗಟ್ಟತ್ತೆ.

Comments are closed.