ಕರಾವಳಿ

ಬೋಳೂರು ಅಮೃತ ವಿದ್ಯಾಲಯಂನಲ್ಲಿ “ಯೋಗ ಶಿಬಿರ”ಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು : ಬೋಳೂರಿನ ಅಮೃತ ವಿದ್ಯಾಲಯಂನ ನೇತೃತ್ವದಲ್ಲಿ ಜೂನ್ 3ರಿಂದ 21ರ ವರೆಗೆ ಅಮೃತ ವಿದ್ಯಾಲಯಂನ ಮಠದಲ್ಲಿ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಧುಸೂಧನ್ ಭಟ್ ಇವರು ದೀಪ ಬೆಳಗಿಸುವ ಮೂಲಕ ಯೋಗ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು.

ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಮಧುಸೂಧನ್ ಭಟ್ ಅವರು ಜ್ಞಾಪಕ ಶಕ್ತಿ ವರ್ಧಿಸಲು ಯೋಗವು ಬಹಳ ಉಪಯೋಗವಾಗುವುದು ಮತ್ತು ಇದರಿಂದ ಆತ್ಮ ವಿಶ್ವಾಸ ಹೆಚ್ಚುವುದು ಎಂದು ಹೇಳಿದರು.

ಯೋಗ ಶಿಕ್ಷರಾದ ರಾಜೇಶ್ ನ್ಯಾಕ್ ಹಾಗೂ ಮಹಿಳಾ ಯೋಗ ಶಿಕ್ಷಕಿ ಭಾರತೀ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯೋಗದ ಪ್ರತ್ಯಕ್ಷಿಕೆಯನ್ನು ಮಾಸ್ಟರ್ ಪ್ರಥಮ್ ಕಿಣಿ ಹಾಗೂ ಕುಮಾರಿ ಅದಿಥಿ ಕಾಮತ್ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಯೋಗದ ಮಹತ್ವವನ್ನು ಶಾಲಾ ಪ್ರಾಂಶುಪಾಲರಾದ ಶ್ರೀಯುತ ರಾಮಚಂದ್ರ ಭಟ್ ರವರು ಮಕ್ಕಳಿಗೆ ತಿಳಿಯ ಹೇಳಿದರು. ಶ್ರೀಮತಿ ನಳೀನಿಯವರು ಯೋಗ ಶಿಬಿರದ ಮಹತ್ವದ ಕುರಿತು ವಿವರ ನೀಡಿದರು.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಭಾರತೀ ಶೆಟ್ಟಿ ಹಾಗು ಯೋಗ ಗುರು ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕಿ ನಯನಾ ಶೆಟ್ಟಿ ಸ್ವಾಗತಿಸಿದರು. ಶ್ರುತಿಯವರು ಕಾರ್ಯಕ್ರಮ ನಿರೂಪಿಸಿದರು. ಶ್ವೇತಾರವರು ವಂದಿಸಿದರು.

Comments are closed.