ಮೀನು ತಿಂದ್ಮೇಲೆ ಹಾಲು ಕುಡಿಬಾರದಂತೆ ಹೌದಾ ? ಕುಡಿದ್ರೆ ಏನಾಗುತ್ತೆ ?
ಮೀನುಗಳನ್ನು ತಿಂದ ನಂತರ ಹಾಲು ಅಥವಾ ಹಾಲೀನ ಉತ್ಪನ್ನಗಳನ್ನು ಸೇವಿಸಿದರೆ ಚರ್ಮದ ಮೇಲೆ ಬಿಳಿ ಮಚ್ಚೆಗಳು ಬರುತ್ತವೆ ಎಂದು ಹಿಂದಿನ ಕಾಲದಿಂದಲೂ ಹೇಳಲಾಗುತ್ತಿದೆ.
ಆಧುನಿಕ ವೈದ್ಯರು ಹೀಗೆ ಹೇಳುತ್ತಾರೆ :
ಚರ್ಮದ ಮೇಲೆ ಬಿಳಿ ತೇಪೆಗಳು ಫಂಗಲ್ ಸೋಂಕು ಅಥವಾ ದೇಹದ ಕೆಲವು ಭಾಗಗಳಲ್ಲಿ ಮೆಲನೋಸೈಟ್ಗಳನ್ನು ಕರೆಯುವ ವರ್ಣದ್ರವ್ಯ-ರೂಪಿಸುವ ಕೋಶಗಳು ನಾಶಗೊಂಡು ಉಂಟಾಗುವ ಮಚ್ಚೆಗಳೇ ಆಗಿವೆ , ಹಾಲಿನ ಪದಾರ್ಥ ಮತ್ತು ಮೀನಿನಿಂದ ಸಾಮಾನ್ಯ ಮನುಷ್ಯರಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎನ್ನಲಾಗುತ್ತದೆ .
ನೀವು ಕೆಲವು ವಿಧದ ಮೀನುಗಳಿಗೆ ಮತ್ತು ಲ್ಯಾಕ್ಟೋಸ್ (ಹಾಲಿನ ಪದಾರ್ಥಗಳ ) ಅಲರ್ಜಿ ಹೊಂದಿದ್ದರೆ ವಾಕರಿಕೆ, ತುರಿಕೆ ಅಥವಾ ಹೊಟ್ಟೆ ನೋವಿನಂತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ಮೀನು ಮತ್ತು ಹಾಲು ಒಟ್ಟಿಗೆ ಸೇವಿಸಿದ್ದರೆ ಅಥವಾ ಪ್ರತ್ಯೇಕವಾಗಿ ಅಥವಾ ಯಾವುದೇ ಇತರ ಆಹಾರ ಪದಾರ್ಥಗಳೊಂದಿಗೆ ಸೇವಿಸಿದರೆ ಬಿಳಿ ಮಚ್ಚೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
ಹಾಗೆಯೇ ಮೀನಿನ ಅಡುಗೆಯಲ್ಲಿ ಹೇರಳವಾಗಿ ಮೊಸರನ್ನು ಬಳಸಲಾಗುತ್ತದೆ.
ಆಯುರ್ವೇದದಲ್ಲಿ ಹೀಗೆ ಹೇಳಲಾಗುತ್ತದೆ :
ಹಾಲು ಹಾಗು ಮೀನು ಎರಡು ವಿರುದ್ಧವಾದ ಗುಣಗಳನ್ನು ಹೊಂದಿರುವ ಆಹಾರ ಪದಾರ್ಥಗಳು ಇವುಗಳನ್ನು ಒಟ್ಟಿಗೆ ತಿಂದರೆ ಚರ್ಮದ ಸಮಸ್ಯೆಗಳು ಬಹಳವಾಗಿ ಕಾಡುತ್ತದೆ ಎಂದು ಹೇಳಲಾಗುತ್ತದೆ.