ಕರಾವಳಿ

ವಿದ್ಯಾರ್ಥಿಗಳಿಗೆ ಗಿಡ ವಿತರಿಸಿ ಉಡುಪಿಯಲ್ಲಿ ಜಯಕರ್ನಾಟಕದಿಂದ ಪರಿಸರ ದಿನ ಆಚರಣೆ

Pinterest LinkedIn Tumblr

ಉಡುಪಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಯಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿಯವರ ನೇತೃತ್ವದಲ್ಲಿ ಚೇತನಾ ಪ್ರೌಢಶಾಲೆ ಹಂಗಾರಕಟ್ಟೆಯಲ್ಲಿ ಪರಿಸರ ದಿನ ಆಚರಿಸಲಾಯಿತು . ಈ ಕಾರ್ಯಕ್ರಮದಲ್ಲಿ 200 ಕ್ಕೂ ಮಿಕ್ಕಿ ಶಾಲಾ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಪರಿಸರ ದಿನಾಚರಣೆಯ ಮಹತ್ವ ಸಾರಲಾಯಿತು.

ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪಾತ್ರ ಮಹತ್ವವಾಗಿದ್ದು ಪರಿಸರ ಕಾಳಜಿ ಮೂಲಕ ಭವ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಗಣೇಶ್ ಜಿ, ಸಂಘಟನೆಯ ಗೌರವ ಸಲಹೆಗಾರ ಸುಧಾಕರ ರಾವ್ ಬಾರ್ಕೂರು, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್, ಕಾರ್ಯಾಧ್ಯಕ್ಷ ಶರತ್ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಸತೀಶ್ ಶೆಟ್ಟಿ ಮುಟ್ಲುಪಾಡಿ, ಮಾರ್ಕ್ ಡಿಸೋಜ, ಕರುಣಾಕರ ಪೂಜಾರಿ, ಅಕ್ಬರ್ ಪಾಷಾ, ಗಿರೀಶ್ ಕಲ್ಮಾಡಿ, ಎಸ್ ಎಸ್ ತೋನ್ಸೆ, ವಿವೇಕ ಕಲ್ಮಾಡಿ, ವಿಶ್ವನಾಥ ವಾರಂಬಳ್ಳಿ, ನಿತಿನ್ ಕೋಟ, ಶಾಲಾ ಅಧ್ಯಾಪಕ ವ್ರಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Comments are closed.