
ಮಂಗಳೂರು : ಉಡುಪಿ ಶ್ರೀ ಕೃಷ್ಣನಿಗೆ ಸುವರ್ಣಗೋಪುರ ಸಮರ್ಪಣೆ ಅಂಗವಾಗಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಪ್ರದೀಪ್‌ಕುಮಾರ್‌ಕಲ್ಕೂರ ಪ್ರಾಯೋಜಕತ್ವದಲ್ಲಿ ಅಂಚೆ ಇಲಾಖೆ ವತಿಯಿಂದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ಶುಕ್ರವಾರರಾಜಾಂಗಣದಲ್ಲಿ ನಡೆಯಿತು.
ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀ ಪಾದರು, ಅದಮಾರು ಮಠದಕಿರಿಯಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ದಕ್ಷಿಣಕರ್ನಾಟಕಕ್ಷೇತ್ರ ಅಂಚೆ ಇಲಾಖೆಯ ಸಹಾಯಕ ನಿರ್ದೇಶಕಅನಂತರಾಮ್, ಉಡುಪಿ ವಿಭಾಗದ ಅಂಚೆ ಅಧೀಕ್ಷಕ ಸುಧಾಕರದೇವಾಡಿಗ, ತರಂಗ ಸಾಪ್ತಾಹಿಕದ ವ್ಯವಸ್ಥಾಪಕ ಸಂಪಾದಕಿಸಂಧ್ಯಾ ಪೈ, ಬಿ.ಜಿ. ರವಿಕುಮಾರ್, ಹಿರಿಯ ಪತ್ರಕರ್ತ ಕೆ. ದಾಮೋದರ ಐತಾಳ್, ಪ್ರಕಾಶ್ ಬಿ. ಎಸ್. ಪ್ರದೀಪಕುಮಾರಕಲ್ಕೂರ, ಶೇಷಚಂದ್ರಿಕಾ ಬೆಂಗಳೂರು ಉಪಸ್ಥಿತರಿದ್ದರು.
ಬಿ.ಜಿ. ರವಿಕುಮಾರ್ ಬೆಂಗಳೂರು ಪ್ರಸ್ತಾವನೆಗೈದರು, ನಾಗರಾಜರಾವ್ ವರ್ಕಾಡಿ ಸ್ವಾಗತಿಸಿದರು. ಗೋಪಾಲಕೃಷ್ಣ ಪಾದೂರು ವಂದಿಸಿದರು.
ಲಕೋಟೆ ವಿಶೇಷ:
ಪರ್ಯಾಯ ಪಲಿಮಾರು ಶ್ರೀಪಾದರ ಮೈ ಸ್ಟ್ಯಾಂಪ್, ಸ್ವರ್ಣಗೋಪುರದ ವಿಶೇಷ ಕ್ಯಾನ್ಸಲೇಶನ್, ಸುವರ್ಣಗೋಪುರ ಸಹಿತ ವಜ್ರಕವಚಧಾರಿ ಶ್ರೀ ಕೃಷ್ಣ, ಹಿನ್ನಲೆಯಲ್ಲಿ ಬ್ರಹ್ಮರಥ, ಗರುಡರಥ, ಕನಕ ಗೋಪುರ ಹಾಗೂ ಲಕೋಟೆಯ ಬಲಬದಿಗೆ ಸುವರ್ಣಗೋಪುರ ಬಳಿ ನಿಂತ ಸ್ವಾಮೀಜಿ, ಮೇಲ್ಬಾಗದಲ್ಲಿ ಸ್ವಚ್ಛ ಭಾರತ್ ಸಂಕೇತವಾಗಿ ಗಾಂಧಿಜಿ ಕನ್ನಡಕವಿದ್ದು ಲಕೋಟೆಗೆ 20ರೂ. ದರವಿದೆ.
Comments are closed.