ಕರಾವಳಿ

ಗ್ರಾಹಕನ ಸೋಗಿನಲ್ಲಿ ಬಂದು ಬೆದರಿಸಿ ಕರಿಮಣಿ ಕದ್ದು ಪರಾರಿಯಾದ ಆರೋಪಿ ಸೆರೆ

Pinterest LinkedIn Tumblr

ಉಡುಪಿ: ಉಡುಪಿಯ ಹಾವಂಜೆ ಬಾಣೆಬೆಟ್ಟು ಎಂಬಲ್ಲಿ ಕಳೆದೆರಡು ವಾರಗಳ ಹಿಂದೆ ಗ್ರಾಹಕನ ಸೋಗಿನಲ್ಲಿ ಬಂದು ಮಹಿಳೆಯನ್ನು ಬೆದರಿಸಿ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ವಕ್ಕೇತ್ತೂರು ನಿವಾಸಿ ಲಕ್ಷ್ಮಣ ಪೂಜಾರಿ(31) ಬಂಧಿತ ಆರೋಪಿ. ಮೇ 15ರಂದು ಆರೋಪಿ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಅಂಗಡಿಯಲ್ಲಿದ್ದ ಮಹಿಳೆಯನ್ನು ಬೆದರಿಸಿ ನಾಲ್ಕುವರೆ ಪವನ್‌ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಈ ಬಗ್ಗೆ ತಂಡ ರಚಿಸಿದ್ದು ಶನಿವಾರ ಆರೋಪಿಯನ್ನು ವಿಟ್ಲದಲ್ಲಿ ಬಂಧಿಸಿ ಕರಿಮಣಿ ಸರ, ಬೈಕ್, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಸಿಪಿಐ ಪೂವಯ್ಯ, ಪಿಎಸ್ಐ ರಾಘವೇಂದ್ರ, ಎ.ಎಸ್.ಐ ಗೋಪಾಲ ಪೂಜಾರಿ, ಸಿಬ್ಬಂದಿಗಳಾದ ದಿಲೀಪ್, ಪ್ರಸಾದ್ ಕುಂದರ್, ಪ್ರವೀಣ್, ವೆಂಕಟರಮಣ, ತಾಂತ್ರಿಕ ವಿಭಾಗದ ಶಿವಾನಂದ, ದಿನೇಶ್, ನಿತಿನ್, ಡಿಸಿಐಬಿ ಘಟಕದ ಎಎಸ್ಐ ರವಿಚಂದ್ರ, ಸಿಬ್ಬಂದಿಗಳಾದ ಸುರೇಶ್, ಸಂತೋಷ್ ಕುಂದರ್, ಚಂದ್ರ ಶೆಟ್ಟಿ, ರಾಘವೇಂದ್ರ ಉಪ್ಪುಂದ, ರಾಮು ಹೆಗ್ಡೆ, ರಾಜಕುಮಾರ್ ಬೈಂದೂರು, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲಕ ರಾಘವೇಂದ್ರ ಇದ್ದರು.

Comments are closed.