ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 36 ನೇ ವಾರ್ಡಿನ ಕಲ್ಪನೆ ಕುಲಶೇಖರ ಚರ್ಚ್ ಕೌಂಪೌಡಿಗೆ ಹೋಗುವ ರಸ್ತೆ ಯನ್ನು ಅಲ್ಪಸಂಖ್ಯಾತರ ನಿಧಿಯಿಂದ ಅಂದಾಜು 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು.
ಶಾಸಕರೊಂದಿಗೆ ಮಾಜಿ ಮೇಯರ್ ಭಾಸ್ಕರ ಮೊಯಿಲಿ, ಬಿಜೆಪಿ ಮುಖಂಡರಾದ ಅನಿಲ್ ರಾವ್, ಅಜಯ್ ಕುಡುಪು, ಕಿಶೋರ್ ಕೊಟ್ಟಾರಿ, ಸಂಜಯ ಪ್ರಭು, ಭಾಸ್ಕರಚಂದ್ರ ಶೆಟ್ಟಿ, ವಸಂತ ಜೆ ಪೂಜಾರಿ, ರವಿ ಕುಚ್ಚಿಕಾಡು, ಗಣೇಶ್, ಭಾಸ್ಕರ್, ಯೋಗೀಶ್ ಚೌಕಿ, ಶೈಲೇಶ್ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.