ಕರಾವಳಿ

ಮೆಂತೆ ಸೊಪ್ಪು ಮತ್ತು ಮೆಂತೆ ಬೀಜದ ಆರೋಗ್ಯವರ್ಧಕ ಗುಣ ಬಲ್ಲಿರಾ..?

Pinterest LinkedIn Tumblr

 

ಸೊಪ್ಪುಗಳಲ್ಲಿ ಹೆಚ್ಚು ಶ್ರೇಷ್ಠ ಎಂದರೆ ಮೆಂತೆ. ಇದರ ಬೀಜವನ್ನು ದೋಸೆ ಮಾಡುವಾಗ ಹಾಗೂ ಮಸಾಲೆ ರೀತಿಯಲ್ಲಿ ಉಪಯೋಗಿಸುತ್ತಾರೆ. ಮೆಂತೆ ಸೊಪ್ಪು ಮತ್ತು ಬೀಜ ಶಕ್ತಿ ನೀಡುವ ಆಹಾರ. ಇದರ ಕೆಲವು ಉಪಾಯಗಳು ಹೀಗಿವೆ.

* 1/2 ಚಮಚ ಮೊಳಕೆ ಬರಿಸಿದ ಮೆಂತೆಯನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ, ದೇಹದ ತೂಕ ಕಡಿಮೆಯಾಗುತ್ತದೆ .

* 1/2 ಚಮಚ ಮೆಂತೆ, 1 ಚಮಚ ಜೀರಿಗೆ, 1 ಹಿಡಿ ಮೆಂತೆ ಸೊಪ್ಪು ಹಾಗೂ ತೆಂಗಿನ ಹಾಲು ಎಲ್ಲವನ್ನೂ ರುಬ್ಬಿ ತಲೆಗೆ ಹಚ್ಚಿ 1/2 ಗಂಟೆ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟಿಗೆ ಉತ್ತಮ ಪರಿಹಾರ ಸಿಗುತ್ತದೆ.

* ನಲ್ಲಿ ಚಟ್ಟು, ಮೆಂತೆ ಕಾಳು, ಧನಿಯಾ ಎಲ್ಲ ಸಮ ಪ್ರಮಾಣದಲ್ಲಿ ರಾತ್ರಿ ನೆನೆಸಿ, ಬೆಳಗ್ಗೆ ಕುಟ್ಟಿ ದೇಹದ ಚರ್ಮಕ್ಕೆ ಲೇಪಿಸಿ ಸ್ನಾನ ಮಾಡಿದರೆ, ಎಲ್ಲಾ ಚರ್ಮ ರೋಗಗಳು ಗುಣವಾಗುತ್ತದೆ .

* ಸ್ತ್ರೀಯರಲ್ಲಿ ಎದೆ ಹಾಲು ಕಡಿಮೆ ಇದ್ದರೆ, ಮೆಂತ ಬೀಜದ ಗಂಜಿ ಸೇವಿಸಿದರೆ, ಎದೆ ಹಾಲು ಹೆಚ್ಚುತ್ತದೆ.

* ಮೆಂತೆ ಹುರಿದ ಹಿಟ್ಟಿಗೆ ಸೈಂಧವ ಉಪ್ಪು ಬೆರೆಸಿ ಸೇವಿಸಿದರೆ, ಭೇದಿ ನಿಲ್ಲುತ್ತದೆ.

* ದೇಹದಲ್ಲಿ ಎಲ್ಲಾದರೂ ಊತ, ಬಾವು ಇದ್ದರೆ, ಅದಕ್ಕೆ, ಮೆಂತೆ ಬೀಜವನ್ನು ನೀರಿನಲ್ಲಿ ರುಬ್ಬಿ ಲೇಪಿಸಿದರೆ ಊತ ಕಡಿಮೆಯಾಗುತ್ತದೆ.

Comments are closed.