ರಾಷ್ಟ್ರೀಯ

ಮಹಿಳೆಯನ್ನು ಅತ್ಯಾಚಾರ ಮಾಡಿ ವಿಡಿಯೋ ಅಪ್‌ಲೋಡ್‌ ಮಾಡಿದ ಯುವಕರು

Pinterest LinkedIn Tumblr

ಉತ್ತರ ಪ್ರದೇಶ : 28ರ ಹರೆಯದ ವಿವಾಹಿತ ಮಹಿಳೆಯನ್ನು ಯುವಕರಿಬ್ಬರು ರೇಪ್‌ ಮಾಡಿದ್ದಲ್ಲದೆ ತಮ್ಮ ಅಪರಾಧ ಕೃತ್ಯದ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಮಾಧ್ಯಮಕ್ಕೆ ಅಪ್‌ಲೋಡ್‌ ಮಾಡಿದ ಘಟನೆ ವರದಿಯಾಗಿದೆ.

ಮಹಿಳೆಯ ಪತಿ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅದರಲ್ಲಿ ನೀಲೇಶ್‌ ಮತ್ತು ಶ್ಯಾಮು ಪಾಲ್‌ ಎಂಬ ಯುವಕರಿಬ್ಬರನ್ನು ಆರೋಪಿಗಳೆಂದು ಹೆಸರಿಸಿದ್ದಾರೆ ಎಂದು ಗ್ರಾಮಾಂತರ್‌ ಎಸ್‌ಪಿ ಸುಭಾಷ್‌ ಚಂದ್ರ ಶಾಕ್ಯ ತಿಳಿಸಿದ್ದಾರೆ.

ಕಳೆದ ಎ.10ರಂದು ಮಹಿಳೆಯು ತನ್ನ ಮನೆಯಲ್ಲಿ ನಿದ್ರಿಸಿಕೊಂಡಿದ್ದಾಗ ಅಕ್ರಮ ಪ್ರವೇಶ ಗೈದ ಆರೋಪಿಗಳು ಮಹಿಳೆಯನ್ನು ರೇಪ್‌ ಮಾಡಿದ್ದರು. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ತಮ್ಮ ಮಾನ ಹರಾಜಾದೀತೆಂಬ ಭಯದಲ್ಲಿ ದಂಪತಿ ಸುಮ್ಮನಿದ್ದರು.

ಆದರೆ ಕೆಲ ದಿನಗಳ ಬಳಿಕ ಆರೋಪಿಗಳು ತಾವು ಮಾಡಿಕೊಂಡಿದ್ದ ರೇಪ್‌ ವಿಡಿಯೋವನ್ನು ಇಂಟರ್‌ನೆಟ್‌ಗೆ ಅಪ್‌ಲೋಡ್‌ ಮಾಡಿದ್ದರು. ಇದನ್ನು ಅನುಸರಿಸಿ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದರು.

ಪೊಲೀಸರು ನಿನ್ನೆ ಗುರುವಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ತನಕ ಆರೋಪಿಗಳ ಬಂಧನ ಆಗಿಲ್ಲ.

Comments are closed.