ಕರಾವಳಿ

ಅಮೆರಿಕದಲ್ಲಿ ಸುರತ್ಕಲ್‌ನ ಶೆಟ್ಟಿ ಸೋದರಿಯರ ಬ್ಯಾಡ್ಮಿಂಟನ್ ಸಾಧನೆ

Pinterest LinkedIn Tumblr

ಸುರತ್ಕಲ್ : ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿರುವ ನೇಹಾ ಶೆಟ್ಟಿ (16) ಮತ್ತು ನೇತ್ರಾ ಶೆಟ್ಟಿ (14) ಅವರು ಯು‌ಎಸ್‌ಎ ಬಾಲಕಿಯರ ಜೂನಿಯರ್ ಬ್ಯಾಡ್ಮಿಂಟನ್ ಟೀಂಗೆ (ಅಂಡರ್ 19) ಆಯ್ಕೆಯಾಗಿದ್ದಾರೆ.

ಕಳೆದ ಎಪ್ರಿಲ್ ತಿಂಗಳ 19-22ರ ವರೆಗೆ ಲಾಸ್ ಏಂಜಲೀಸ್‌ನಲ್ಲಿ ಜರಗಿದ್ದ ಜೂನಿಯರ್ ಇಂಟರ್ ನ್ಯಾಷನಲ್ ಟ್ರಯಲ್‌ನಲ್ಲಿ ಈ ಆಯ್ಕೆ ಮಾಡಲಾಗಿದೆ.

ಇವರು ಜುಲೈ 14ರಿಂದ 20ರ ವರೆಗೆ ಕೆನಡಾದ ಮೋಕ್ಟನ್‌ನಲ್ಲಿ ಜರಗಲಿರುವ ಘಿಘಿಗಿIII ಅಮೆರಿಕನ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಅಂಡರ್ 19 ಬಾಲಕಿಯರ ವಿಭಾಗದಲ್ಲಿ ಯು‌ಎಸ್‌ಎಯನ್ನು ಪ್ರತಿನಿಧಿಸಲಿದ್ದಾರೆ.

ನೇತ್ರಾ ಶೆಟ್ಟಿಯು ಅಂಡರ್ 17 ಗರ್ಲ್ಸ್ ಸಿಂಗಲ್ ನಲ್ಲಿಯೂ ಅಮೆರಿಕವನ್ನು ಪ್ರತಿನಿಧಿಸಿದ್ದರು ಮತ್ತು ರ್‍ಯಾಂಕ್ ವನ್ ಪ್ಲೇಯರ್ ಆಗಿದ್ದರು. ಪಾನ್ ಅಮೆರಿಕನ್ ಜೂನಿಯರ್ ಬ್ಯಾಡ್ಮಿಂ ಟನ್ ಚಾಂಪಿಯನ್‌ಶಿಪ್ ಒಂದು ವಾರ್ಷಿಕ ಟೂರ್ನಮೆಂಟ್ ಆಗಿದ್ದು, ಇದರಲ್ಲಿ ನಾರ್ತ್ ಅಮೆರಿಕ ಮತ್ತು ಸೌತ್ ಅಮೆರಿಕವನ್ನೊಳಗೊಂಡ ಬೆಸ್ಟ್ ಬ್ಯಾಡ್ಮಿಂಟನ್ ಪ್ಲೇಯರ್ ಕಿರೀಟ ಧಾರಣೆಗೆ ಅವಕಾಶವಿದೆ.

ಈ ಸೋದರಿಯರು ಡಾ. ಅನುಪಮಾ ಮತ್ತು ಹರಿ ಶೆಟ್ಟಿ ದಂಪತಿಯ ಪುತ್ರಿಯರಾಗಿದ್ದು, ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಇವರು ಶ್ರೀಮತಿ ಮತ್ತು ಶ್ರೀ ಡಾ. ಕೆ. ಸದಾಶಿವ ನಾಕ್ ಬೆಂಗಳೂರು ಹಾಗೂ ಆಶಾ ಮತ್ತು ಡಾ.ಟಿ. ರಮಾನಾಥ ಶೆಟ್ಟಿ ಸುರತ್ಕಲ್ ಅವರ ಮೊಮ್ಮಕ್ಕಳು.

Comments are closed.