ಕರಾವಳಿ

ದೇಹದಲ್ಲಿ ತುರಿಕೆ ಅಥವಾ ಉರಿ ಇದ್ದರೆ ಎಳ್ಳೆಣ್ಣೆ ಲೇಪಿಸಿ ಮಸಾಜ್ ಮಾಡಿದರೆ ಉಪಶಮನ

Pinterest LinkedIn Tumblr

ಮುಖ ಒಣಗಿದಂತಿದ್ದರೆ ಮತ್ತು ಗೆರೆಗಳು, ಕಲೆಗಳು ಕಾಣುತ್ತಿದ್ದರೆ ನಿರಂತರವಾಗಿ ಎಳ್ಳೆಣ್ಣೆ ಮಸಾಜ್ ಮಾಡಬೇಕು.

ದೇಹದಲ್ಲಿ ತುರಿಕೆ ಅಥವಾ ಉರಿ ಇದ್ದರೆ ಎಳ್ಳೆಣ್ಣೆ ಲೇಪಿಸಿ ಮಸಾಜ್ ಮಾಡಿದರೆ ಉಪಶಮನವಾಗುತ್ತದೆ.

ಒಡೆದ ಮತ್ತು ಬಿರುಕು ಬಿಟ್ಟ ಹಿಮ್ಮಡಿಯಿಂದ ನೀವು ಬಳಲುತ್ತಿದ್ದರೆ ಪ್ರತಿ ರಾತ್ರಿ ಎಳ್ಳೆಣ್ಣೆ ಲೇಪಿಸಿಕೊಂಡು ಕಾಟನ್ ಕಾಲು ಚೀಲ ಧರಿಸಿ ಮಲಗಬೇಕು. ಕೆಲವೇ ದಿನಗಳಲ್ಲಿ ಫಲಿತಾಂಶ ಗೋಚರಿಸುತ್ತದೆ.

ಪ್ರತಿದಿನ ಸ್ನಾನ ಮಾಡುವ ನೀರಿಗೆ ಒಂದೆರಡು ಹನಿ ಎಳ್ಳೆಣ್ಣೆಯನ್ನು ಬೆರೆಸಿಕೊಂಡರೆ ಚರ್ಮದ ವ್ಯಾಧಿಗಳು ಬರುವುದಿಲ್ಲ.

ಎಳ್ಳೆಣ್ಣೆ ಯನ್ನು ಪ್ರತಿದಿನ ಬಳಸಿದರೆ ವಾತದ ಕಾಯಿಲೆಗಳ ಸಂಭವವು ಕಡಿಮೆಯಾಗುತ್ತದೆ. ಎಳ್ಳನ್ನು ಅರೆದು ಕುಡಿಯುವುದು ಮೂಲ ವ್ಯಾಧಿಗೆ ಉತ್ತಮ ಔಷಧಿ. ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಮೈ ಕಾಂತಿ ಹೆಚ್ಚುತ್ತದೆ. ಗರ್ಭಿಣಿಯ ಆರೋಗ್ಯಕ್ಕೆ ಎಳ್ಳಿನ ಉಂಡೆ ತಿನ್ನುವುದು ಒಳ್ಳೆಯದು.

Comments are closed.