ಕರಾವಳಿ

ಕೋಟ ಕಾರಂತ ಥೀಮ್ ಪಾರ್ಕ್ ಭೇಟಿ ಖುಷಿ ನೀಡಿದೆ- ಶ್ರೀ ವಿನಯ್ ಗುರೂಜಿ

Pinterest LinkedIn Tumblr

ಉಡುಪಿ: ಕಾರಂತ ಥೀಮ್ ಪಾರ್ಕ್ ಭೇಟಿ ನೀಡಿದ್ದು ಖುಷಿ ನೀಡಿದೆ, ಇದು ಇನ್ನಷ್ಟೂ ಪ್ರಸಿದ್ದಿ ಪಡೆಯಲಿ, ಗ್ರಂಥಾಲಯದಲ್ಲಿರುವ ಪುಸ್ತಕ ಭಂಡಾರ ನೋಡಿ ಸಂತೋಷವಾಯಿತು ಇದೊಂದು ಜ್ಙಾನ ದೇಗುಲ ಎಂದು ಶೃಂಗೇರಿ ಗೌರಿಗದ್ದೆ ಶ್ರೀ ದತ್ತಾತ್ರೇಯಪೀಠ ಅವಧೂತರಾದ ಶ್ರೀ ವಿನಯ್ ಗುರೂಜಿ ಹೇಳಿದರು.

ಅವರು ಕಾರಂತ ಥೀಮ್ ಪಾರ್ಕ್ ಭೇಟಿ ನೀಡಿ ಕಾರಂತರ ಪುತ್ಥಳಿಗೆ ಹೂ ಮಾಲೆ ಹಾಕಿ ಆರ್ಟ್ ಗ್ಯಾಲರಿ, ರಂಗಮಂದಿರ ಗ್ರಂಥಾಲಯ ವೀಕ್ಷಿಸಿ ಅನಿಸಿಕೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀ ನಿವಾಸ ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯಧ್ಯಕ್ಷ ಆನಂದ್ ಸಿ ಕುಂದಾರ್ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ರಾಘವೇಂದ್ರ ಶೆಟ್ಟಿ ಬೇಳೂರು ಹಾಗೂ ಕಾರಂತ ಪ್ರತಿಷ್ಠಾನ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯರು, ಕಾರಂತ ಥೀಮ್ ಪಾರ್ಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments are closed.