ಕರಾವಳಿ

ಶಾಸಕರ ಮನವಿಗೆ ಸ್ಪಂದನೆ : ಕರಾವಳಿಯ ವಿವಿಧ ಕ್ಷೇತ್ರಗಳಲ್ಲಿ ಮಳೆಗಾಗಿ ಪ್ರಾರ್ಥನೆ

Pinterest LinkedIn Tumblr

ಮಂಗಳೂರು : ನೀರಿನ ಬರದಿಂದ ತತ್ತರಿಸುತ್ತಿರುವ ಕರಾವಳಿ ಭಾಗದಲ್ಲಿ ಶೀಘ್ರದಲ್ಲಿ ಮಳೆ ಬರಲೆಂದು ತಮ್ಮ ತಮ್ಮ ಹತ್ತಿರದ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಲು ಮನವಿ ಮಾಡಿದ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಕರೆಗೆ ಮೇರೆಗೆ ನಗರದ ವಿವಿಧ ಕ್ಷೇತ್ರಗಳಲ್ಲಿ ಪೂಜೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಶಾಸಕ ಡಿ ವೇದವ್ಯಾಸ ಕಾಮತ್ ಅವರ ಕರೆಗೆ ಮೇರೆಗೆ ಶ್ರೀ ಕ್ಷೇತ್ರ ಕದ್ರಿ ಯಲ್ಲಿ ಕದ್ರಿ ಉತ್ತರ 32 ನೇ ವಾರ್ಡ್, ಕದ್ರಿ ದಕ್ಷಿಣ 33 ನೇ ವಾರ್ಡ್ ವತಿಯಿಂದ ಪೂಜೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕ್ಷೇತ್ರದ ಅರ್ಚಕರಾದ ರಾಮಚಂದ್ರ ಅಡಿಗ, ರಾಘವೇಂದ್ರ ಅಡಿಗ, ರಾಮಕೃಷ್ಣ ರಾವ್, ಫೆಡ್ರಿಕ್, ರಮೇಶ್ ಕಂಡೆಟ್ಟು, ಶ್ರೀಕಾಂತ್ ರಾವ್, ಮನೋಹರ್ ಶೆಟ್ಟಿ, ರತ್ನಾಕರ್ ಹಾಗೂ ಸ್ಥಳೀಯ ಕಾರ್ಯಕರ್ತರು ಭಾಗವಹಿಸಿದ್ದರು.

ಮಾರಿಕಾಂಬಾ ದೇವಸ್ಥಾನದಲ್ಲಿ ಚಂಡೀಕಯಾಗ ಸಂದರ್ಭದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಆಡಳಿತ ಮೋಕ್ತೇಸರರಾದ ನಾಗೇಶ್ ಸುವರ್ಣ ನಟ್ಟಿಮನೆ, ಜಗನ್ನಾಥ ದೊಡ್ಡಮನೆ, ಲೋಹಿಶಾಕ್ಷ ಮರೋಳಿ ಮತ್ತಿತ್ತರರು ಉಪಸ್ಥಿತರಿದ್ದರು.

ಮರೋಳಿ 37 ನೇ ವಾರ್ಡಿನ ಕಾರ್ಯಕರ್ತರು ಮರೋಳಿ ಶ್ರೀ ಸೂರ್ಯನಾರಾಯಣ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಬಿಜೆಪಿ ಮುಖಂಡರಾದ ಜಗನ್ನಾಥ ದೊಡ್ಡಮನೆ, ಸರಳ, ಜನಾರ್ಧನ ದೇವಾಡಿಗ, ಸತೀಶ್ ದೇವಾಡಿಗ, ಕಿರಣ್, ಶೀಲ ಹಾಗೂ ಪ್ರಶಾಂತ ಮರೋಳಿ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.