ಕರಾವಳಿ

ತಲೆಹೊಟ್ಟಿನ ಸಮಸ್ಯೆ ಇದ್ದರೆ ಹೀಗೆ ಮಾಡಿ

Pinterest LinkedIn Tumblr

ಇತ್ತೀಚಿನ ದಿನಗಳಲ್ಲಿ ತಲೆಹೊಟ್ಟಿನ ಸಮಸ್ಯೆ ಕೂಡ ತಲೆನೋವಿಗೆ ಕಾರಣವಾಗುತ್ತಿದೆ. ಇದರ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ಕೂದಲಿಗೆ ಶ್ಯಾಂಪೂ, ಕಂಡೀಷನರ್​ ಸೇರಿದಂತೆ ಹಲವು ಉತ್ಪನ್ನಗಳ ಮೊರೆ ಹೋಗುವವರೇ ಹೆಚ್ಚು. ಆದರೆ ವಾತಾವರಣದ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ಡ್ಯಾಂಡ್ರಫ್​ ಸಮಸ್ಯೆ ಮರುಕಳಿಸುತ್ತಿರುತ್ತದೆ. ತಲೆ ಕೂದಲುಗಳ ಎಡೆಯಲ್ಲಿ ಉಳಿಯುವ ಇಂತಹ ಕೊಳಕುಗಳನ್ನು ಕೆಲವೊಂದು ದಿನನಿತ್ಯದ ವಸ್ತುಗಳನ್ನು ಬಳಸಿ ಹೋಗಲಾಡಿಸಬಹುದು. ಹಾಗಾದ್ರೆ ತಲೆಹೊಟ್ಟಿನ ಸಮಸ್ಯೆಯನ್ನು ಯಾವ ರೀತಿಯ ಮನೆಮದ್ದಿನ ಮೂಲಕ ಹತೋಟಿಗೆ ತರಬಹುದು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಆಲಿವ್​ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಮಾಡಿ. ಈ ಎಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಹೀಗೆ ಒಂದು ವಾರಗಳ ತನಕ ಮಾಡುತ್ತಿದ್ದರೆ ತಲೆ ಹೊಟ್ಟಿನ ಸಮಸ್ಯೆ ದೂರವಾಗುತ್ತದೆ.

ಮೊಸರಿನಿಂದ ಕೂಡ ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸ್ನಾನಕ್ಕೂ ಅರ್ಧ ಗಂಟೆಗೂ ಮುನ್ನ ಮೊಸರನ್ನು ಕೂದಲಿನ ಬುಡಕ್ಕೆ ಅನ್ವಯಿಸಿ. ಬಳಿಕ ಮಸಾಜ್ ಮಾಡುತ್ತಾ ತೊಳೆಯುವುದರಿಂದ ತಲೆಹೊಟ್ಟನ್ನು ನಿವಾರಿಸಿಕೊಳ್ಳಬಹುದು.

ತಲೆಹೊಟ್ಟಿನ ಸಮಸ್ಯೆಗೆ ತೆಂಗಿನ ಎಣ್ಣೆ ಅತ್ಯುತ್ತಮ ಮನೆ ಮದ್ದು. ತೆಂಗಿನ ಎಣ್ಣೆಯನ್ನು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತೆಲೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಕೂಡ ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರ ಕಾಣಬಹುದು.

ತುಳಸಿ ಮತ್ತು ನೆಲ್ಲಿಕಾಯಿಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ. ಇದನ್ನು ಮಿಶ್ರಣ ಮಾಡಿ ತಲೆ ತೊಳೆಯುವ ಅರ್ಧಗಂಟೆ ಮುನ್ನ ಹಚ್ಚಿಕೊಳ್ಳಿ. ದಿನನಿತ್ಯ ಹೀಗೆ ಮಾಡುವುದರಿಂದ ಡ್ಯಾಂಡ್ರಫ್ ಸಮಸ್ಯೆ ಕೊನೆಗೊಳ್ಳುತ್ತದೆ.

ಎರಡು ಸ್ಪೂನ್ ಆಲಿವ್ ಎಣ್ಣೆ ಮತ್ತು ನಾಲ್ಕು ಚಮಚ ಮೊಸರನ್ನು ಮಿಶ್ರ ಮಾಡಿ. ಈ ಮಿಶ್ರಣವನ್ನು ತಲೆ ಕೂದಲ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಸ್ನಾನಕ್ಕೂ ಮುನ್ನ ದಿನ ನಿತ್ಯ ಹೀಗೆ ಮಾಡಿದರೆ ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸಬಹುದು.

Comments are closed.