ಕರಾವಳಿ

ಉಪ್ಪಿನಕುದ್ರು ಬೇಡರಕೊಟ್ಟಿಗೆ ಬೊಬ್ಬರ್ಯ ದೇವಸ್ಥಾನ: ಪ್ರಥಮ ವರ್ಧಂತ್ಯೋತ್ಸವ, ಧಾರ್ಮಿಕ ಸಭೆ

Pinterest LinkedIn Tumblr

ಕುಂದಾಪುರ: ಬೇಡರಕೊಟ್ಟಿಗೆ ಬೊಬ್ಬರ್ಯ ದೇವಸ್ಥಾನ ಉಪ್ಪಿನಕುದ್ರು ಇವರ ಪ್ರಥಮ ವರ್ಷದ ವರ್ಧಂತ್ಯೋತ್ಸವ ಮತ್ತು ಬೆಳ್ಳಿ ಪ್ರಭಾವಳಿ ಸಮರ್ಪಣೆಯ ಧಾರ್ಮಿಕ ಸಭಾ ಕಾರ್ಯಕ್ರಮವು ಮಂಗಳವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ಜರುಗಿತು.

ಸಭಾ ಕಾರ್ಯಕ್ರಮವನ್ನು ಧಾರ್ಮಿಕ ಮುಖಂಡ, ಮಹಥೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ಇದರ ಅಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆರವರು ಉದ್ಘಾಟಿಸಿ ಶುಭ ಹಾರೈಸಿದರು.

ದಾನಿ ರಾಜೇಶ್ ಕಾರಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬೇಡರ ಕೊಟ್ಟಿಗೆ ಬೊಬ್ಬರ್ಯ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ ಸೇರುಗಾರ್ ಪ್ರಾಸ್ತಾವನೆಗೈದರು. ಸಭೆಯಲ್ಲಿ ದೇವಸ್ಥಾನಕ್ಕೆ ಅತಿಹೆಚ್ಚು ದೇಣಿಗೆ ನೀಡಿದ 20ಕ್ಕೂ ಮಿಕ್ಕಿ ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು.

ಅತಿಥಿಗಳಾಗಿ ಕುಂದಾಪುರದ ಉದ್ಯಮಿ ಅನಂತ ಕಾಮತ್, ವಾಮನ ಪೈ ಹೆಮ್ಮಾಡಿ, ರಾಜೇಶ್ ಆಚಾರ್ ಕೌಶಲಾ ಉಡುಪಿ, ದಾನಿಗಳಾದ ಶಂಕರ ದೇವಾಡಿಗ , ದೇವಸ್ಥಾನದ ಪಾತ್ರಿಯವರಾದ ಹಿರಿಯ ದೇವಾಡಿಗ, ಅಡಳಿತ ಮೊಕ್ತೇಸರರಾದ ಜಗದೀಶ್ ಉಡುಪ, ಮಾರ್ಗದರ್ಶಕರಾದ ನಾರಾಯಣ ದೇವಾಡಿಗ , ಅಡಳಿತ ಮಂಡಳಿ ಸದಸ್ಯರಾದ ನಾಗರಾಜ್ ಎಂ, ನರಸಿಂಹ ಮೊಗವೀರ, ಬಸವ ದೇವಾಡಿಗ, ಯಕ್ಷೇಶ್ವರಿ ಫ್ರೆಂಡ್ಸ್ ನ ಅಧ್ಯಕ್ಷ ಆನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ರವಿ ದೇವಾಡಿಗ ಸ್ವಾಗತಿಸಿ, ಸುನಿಲ್ ಮಹೇಶ್ ಕಾರ್ಯಕ್ರಮ ನಿರೂಪಿಸಿ, ರಾಜೇಂದ್ರ ಪೈ ವಂದಿಸಿದರು. ಕಾರ್ಯಕ್ರಮದ ನಂತರ ಯಕ್ಷೇಶ್ವರಿ ಫ್ರೆಂಡ್ಸ್ ಸಹಯೋಗದೊಂದಿಗೆ ಸಾಂಸ್ಕ್ರತಿಕ ಕಾರ್ಯ ಕ್ರಮ ಜರುಗಿತು.

Comments are closed.