ರಾಷ್ಟ್ರೀಯ

ಮಹಿಳೆಯ ಗರ್ಭಕೋಶದಲ್ಲಿ 2 ವರ್ಷಗಳಿಂದ ಇದ್ದ ಬೈಕ್‌ನ ಹ್ಯಾಂಡಲ್​ ತೆಗೆದ ವೈದ್ಯರು!

Pinterest LinkedIn Tumblr


ಇಂದೋರ್: ಮಹಿಳೆಯ ಗರ್ಭಕೋಶದಲ್ಲಿ 2 ವರ್ಷಗಳಿಂದ ಇದ್ದ 6 ಇಂಚು ಉದ್ದದ ಬೈಕ್‌ನ ಹ್ಯಾಂಡಲ್‌ನ್ನು ಇಂದೋರ್‌ನ ಆಸ್ಪತ್ರೆಯ ವೈದ್ಯರು 4 ತಾಸುಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆದಿದ್ದಾರೆ.

ಇಂದೋರ್‌ನ ಮ್ಯೂಸಿಕ್ ಬ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು, ಸಂತ್ರಸ್ತೆ ಮಹಿಳೆಯು 15 ವರ್ಷಗಳ ಹಿಂದೆ ಮದುವೆಯಾಗಿದ್ದಳು. ಭೋಪಾಲ್​ನ ಧಾರ್​ ಜಿಲ್ಲೆಯವರಾದ ಈ ದಂಪತಿಗೆ 6 ಜನ ಮಕ್ಕಳಿದ್ದಾರೆ. 2 ವರ್ಷಗಳ ಹಿಂದೆ ಮಕ್ಕಳ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿತ್ತಂತೆ. ಈ ವೇಳೆ, ಗಂಡ ಬೈಕ್​ನ ಹ್ಯಾಂಡಲ್​ನ್ನ ಹೆಂಡತಿಯ ಮರ್ಮಾಂಗದಲ್ಲಿ ಬಲವಂತವಾಗಿ ತುರಕಿದ್ದನಂತೆ. ಮರ್ಯಾದೆಗೆ ಅಂಜಿ, ಮಹಿಳೆಯ ಈ ವಿಷ್ಯವನ್ನು ಯಾರಿಗೂ ಹೇಳಿರಲಿಲ್ಲವಂತೆ.

 

ಆದರೆ, ಇತ್ತೀಚೆಗೆ ಮಹಿಳೆಗೆ ಇದರಿಂದ ತೀವ್ರವಾದ ನೋವು ಕಾಣಿಸತೊಡಗಿದೆ. ಹೀಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದಾಳೆ. ಅಲ್ಲಿ ತಕ್ಷಣವೇ ಆಪರೇಷನ್​ ಮಾಡಬೇಕು ಒಂದು ಲಕ್ಷ ರೂಪಾಯಿಯನ್ನು ತಕ್ಷಣವೇ ಕಟ್ಟುವಂತೆ ಸೂಚಿಸಿದ್ದಾರೆ. ಆದರೆ ಕಟ್ಟಲು ಹಣವಿಲ್ಲದೇ ಆಸ್ಪತ್ರೆಯಿಂದ ಓಡಿ ಬಂದ ಸಂತ್ರಸ್ತೆ , ಇಲ್ಲಿನ ಚಂದನ್​ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ಕೇಸ್​ ದಾಖಲಿಸಿಕೊಂಡ ಠಾಣೆಯ ಇನ್​ಚಾರ್ಜ್​ ರಾಹುಲ್​ ಶರ್ಮಾ ಆಕೆಯನ್ನು ಎಂವೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪತಿಯನ್ನು ಬಂಧಿಸಿದ್ದಾರೆ. ಇನ್ನು ಮಹಿಳೆಯನ್ನು ಅಡ್ಮಿಟ್​ ಮಾಡಿಕೊಂಡು, ಸತತ ನಾಲ್ಕು ಗಂಟೆಗಳ ಕಾಲ ಆಪರೇಷನ್​ ನಡೆಸಿದ ವೈದ್ಯರು, 6 ಇಂಚು ಉದ್ದದ ಪ್ಲಾಸ್ಟಿಕ್​ನ ಬೈಕ್​ ಹ್ಯಾಂಡಲ್​ ಪೀಸ್​ನ್ನ ಹೊರತೆಗೆದಿದ್ದಾರೆ.

Comments are closed.