ಕರಾವಳಿ

ಚೀನಾದಲ್ಲಿ ಶಾಂಘೈನ ಕನ್ನಡಿಗರಿಂದ ಯುಗಾದಿ ಸಂಭ್ರಮ

Pinterest LinkedIn Tumblr

ಮುಂಬಯಿ : 2018ರಲ್ಲಿ ಚೀನಾದ ಶಾಂಘೈ ಯಲ್ಲಿ ನೆಲೆಸಿರುವ ಕನ್ನಡಿಗ ಮಿತ್ರರು ಒಂದಾಗಿ ಶಾಂಘೈ ಕನ್ನಡಿಗರ ಬಳಗವನ್ನು ಸ್ಥಾಪಿಸಿದ್ದು ಇದರ ಪ್ರಥಮ ವಾರ್ಷಿಕೋತ್ಸವರ ಅಂಗವಾಗಿ ಇತ್ತೀಚಿಗೆ ಯುಗಾದಿ ಸಂಭ್ರಮದೊಂದಿಗೆ ಹೊಸವರ್ಷಾಚರಣೆಯು ಹರ್ಷೋಲ್ಲಾಸದಿಂದ ನಡೆಯಿತು.

ಕಾರ್ಯಕ್ರಮವು ದೀಪ ಬೆಳಗಿಸುದರೊಂದಿಗೆ ಪ್ರಾರಂಭಗೊಂಡಿದ್ದು ಕನ್ನಡಿಗ ಪುಟಾಣಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

ಕು. ದೀಪಾಂಜಲಿ, ಕು. ರಾಜೀವ್, ಕು. ಸಿರಿ, ಶ್ರೀಮತಿ ಭಾರತಿ ಮತ್ತು ಶ್ರೀಮತಿ ಸ್ಮಿತಾ ಮತ್ತು ಪ್ರದೀಪ್ ರವರು ಕನ್ನಡ ಹಾಡನ್ನು ಸುಂದರವಾಗಿ ಪ್ರಸ್ತುತಪಡಿಸಿದ್ದು ರಾಹುಲ್ ಮತ್ತು ಸಿಂಹ ಲಿಂಗಾಷ್ಟಕ ಅದಕ್ಕೆ ಸಂಗೀತವನ್ನು ಒದಗಿಸಿದರು. ಕು. ದೀಪ್ತಿ, ಕು. ತನ್ವಿ, ಕು. ಸ್ಪೂರ್ತಿ ಇವರಿಂದ ನೃತ್ಯ ಪ್ರದರ್ಶನ ಸಾಂಪ್ರದಾಯಿಕ ಆಚರಣೆಯ ಬಗ್ಗೆ ಮಾಹಿತಿಯುಳ್ಳ ಚಿತ್ರ ಫಲಕವನ್ನು ಹಿಡಿದು ಮಕ್ಕಳಿಂದ ವಿಭಿನ್ನವಾದ ಪ್ಯಾಶನ್ ಶೋ ನಡೆಯಿತು. ಈ ಪ್ರದರ್ಶನದಲ್ಲಿ ಪ್ರತಿ ಫಲಕದ ಮಹತ್ವದ ವಿವರಣೆ ನೀಡಲಾಯಿತು. ಎಲ್ಲರೂ ಬೇವು ಬೆಲ್ಲದ ಮಿಶ್ರಣದ ಸೇವನೆ ಮಾಡಿದರು.

ಮಲ್ಲಿಕಾರ್ಜುನ ಅವರ ಮಿಮಿಕ್ರಿ ಹಾಗೂ ಸುರೇಶ್ ರಾವ್ ಮತ್ತು ತಂಡದವರಿಂದ ಆಸಕ್ರಿದಾಯಕ ಆಟಗಳು ನಡೆದವು. ನಿವೇದಿತಾ ಮತ್ತು ಅನಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕನ್ನಡಿಗರು ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆನಂದಿಸಿದ್ದು ಇದರಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಉಡುಗೊರೆಯಿಂದ ಗೌರವಿಸಲಾಯಿತು.

ಕಾರ್ಯಕ್ರಮದ ಯಶಸ್ವಿಗೆ ಬಳಗದ ಕಾರ್ಯಕರ್ತರಾದ ಕಮಲಲತಾ, ಪ್ರತಿಮಾ, ಮೋಹಿನಿ, ನಿವೇದಿತಾ, ರೀನಾ, ಅಪರ್ಣ, ಅದಿತಿ, ಕಿರಣ್, ಪ್ರದೀಪ್, ಸುಕೇಶ್, ಕಿರಣ್, ಸನಂದನ್, ಸುನಿಲ್, ಸಂದೀಪ ಶಾಸಸ್ತ್ರಿ, ರಫೀಕ್, ಸಚಿನ್, ವಿಕಾಸ್, ಶಿವಕುಮಾರ್ ಮತ್ತು ಮುಂಬಯಿಯ ಗಿರೀಶ್ ಬದ್ದೂರು ಸಹಕರಿಸಿದರು.

ವರದಿ : ಈಶ್ವರ ಎಂ. ಐಲ್

Comments are closed.