ಕರಾವಳಿ

ಶಾಸಕ ಕಾಮಾತ್‌ರಿಂದ ಉರ್ವಾ ಕಿರು ಸೇತುವೆ ಕಾಮಗಾರಿ ಪರಿಶೀಲನೆ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸಾರ್ವಜನಿಕ ದೂರಿನ ಮೇರೆಗೆ ಉರ್ವಾ ಹೊಯ್ಗೆಬೈಲ್ ಬಳಿ ನಿರ್ಮಾಣ ಹಂತದಲ್ಲಿರುವ ಕಿರು ಸೇತುವೆಯ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಅವರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ರಾಧಾಕೃಷ್ಣ, ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ಅರುಣ್ ಕುಮಾರ್, ಕಿಶೋರ್ ಕುಮಾರ್, ಗುರುಪ್ರಸಾದ್, ಅಮಿತಕಲಾ, ವಸಂತ್, ಗಣೇಶ್ ಉಪಸ್ಥಿತರಿದ್ದರು.

Comments are closed.