ಉಳ್ಳಾಲ: ಕೋಟೆಕಾರು ರಾಮಕ್ಷತ್ರಿಯ ಜನಾಂಗದ ದೇವರ ಅರಮನೆಯ ಮೂರನೇಯ ವಾರ್ಷಿಕ ಪ್ರತಿಷ್ಠಾ ಉತ್ಸವವು ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿ ಮತ್ತು ಅಮ್ಮನವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ವೈದಿಕ ನೇತೃತ್ವದಲ್ಲಿ ನಡೆಯಿತು.
ಪೂಜ್ಯ ಸ್ವಾಮಿ ಮತ್ತು ಅಮ್ಮನವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ತಂತ್ರಿಗಳ ನೇತೃತ್ವದಲ್ಲಿ ನಾಗ ಸಾನಿಧ್ಯದಲ್ಲಿ ವಿಶೇಷ ಪೂಜೆ, ಶ್ರೀ ಮಹಾಕಾಲಭೈರವೇಶ್ವರ, ಶ್ರೀ ಶಾಂತಾದುರ್ಗ ಶ್ರೀ ವ್ಯಾಘ್ರಚಾಮುಂಡೇಶ್ವರ ಸನ್ನಿಧಾನದಲ್ಲಿ ಕಲಶಾಭಿಷೇಕ ಸಹಿತ ವಿಶೇಷ ಪೂಜೆ ನೆರವೇರಿತು.
Comments are closed.