ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನದ ಶಾಖಾ ಮಠವಾದ ಭಾಗಮಂಡಲ ಶ್ರೀ ಕಾಶಿ ಮಠದಲ್ಲಿ ೧೦ ದಿನಗಳ ಪರ್ಯಂತ ” ಭಾಗವತ ಸಪ್ತಾಹ ” ” ದಶಮ ಸ್ಕಂದ ಹವನ ” ಹಾಗೂ ಏಕಾಹ ಭಜನಾ ಮಹೋತ್ಸವವು ಶ್ರೀ ಸಂಸ್ಥಾನದ ಮಠಾಧೀಶರಾದ ಪರಮ ಪೂಜ್ಯ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು .
ಈ ಸಂದರ್ಭದಲ್ಲಿ ಶಾಖಾ ಮಠದ ವ್ಯವಸ್ಥಾಪಕ ಸಮಿತಿಯ ರಘುವೀರ್ ಭಂಡಾರ್ಕಾರ್, ಗುರುಪ್ರಸಾದ್ ಕಾಮತ್, ಜಿ ಜಿ ಶೆಣೈ , ಸೋಮೇಶ್ವರ ವೆಂಕಟರಮಣ ದೇವಳದ ಮೊಕ್ತೇಸರ ರಾಘವೇಂದ್ರ ಭಕ್ತ ಉಪಸ್ಥಿತರಿದ್ದರು.
ಇದೆ ಬರುವ ದಿನಾಂಕ 05-05-2019 ರ ರವಿವಾರ ತಲಕಾವೇರಿಯ ಭಾಗಮಂಡಲದಲ್ಲಿರುವ ಪುಣ್ಯ ಕ್ಷೇತ್ರ ತ್ರಿವೇಣಿ ಸಂಗಮದಲ್ಲಿ ಶ್ರೀಗಳವರ ಪವಿತ್ರ ತೀರ್ಥ ಸ್ನಾನ ಕಾರ್ಯಕ್ರಮ ನೆರವೇರಲಿರುವುದು ಸಮಾಜ ಬಾಂಧವರು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಹರಿ ಗುರು ಕ್ರಪೆಗೆ ಪಾತ್ರ ರಾಗಬೇಕಾಗಿ ವಿನಂತಿಸಲಾಗಿದೆ .
Comments are closed.