ಕ್ರೀಡೆ

ಸತತ ಗೆಲುವಿನ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿರುವ ಆರ್‌ಸಿಬಿಗೆ ಬಿಗ್ ಶಾಕ್ !

Pinterest LinkedIn Tumblr

ಬೆಂಗಳೂರು: ಐಪಿಎಲ್ ಟೂರ್ನಿಯ ಅಂತಿಮ ಹಂತದಲ್ಲಿ ಗೆಲುವಿನ ಲಯಕ್ಕೆ ಮರಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ 3 ಗೆಲುವು ಸಾಧಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ತವರಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವು ಸಾಧಿಸಿದ ಬೆನ್ನಲ್ಲೇ RCB ತಂಡಕ್ಕೆ ಅತೀ ದೊಡ್ಡ ಆಘಾತ ಎದುರಾಗಿದೆ. ಹೌದು, RCB ಲಕ್ ಬದಲಾಯಿಸಿದ ವೇಗಿ ಡೇಲ್ ಸ್ಟೇನ್ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಐಪಿಎಲ್ 12ನೇ ಆವೃತ್ತಿಯಲ್ಲಿ ಬೌಲಿಂಗ್ ಸಮಸ್ಯೆ ಎದುರಿಸಿದ RCB ಸತತ 6 ಪಂದ್ಯ ಸೋತು ನಿರಾಸೆ ಅನುಭವಿಸಿತು. ಆದರೆ ಸೌತ್ಆಫಿಕಾ ವೇಗಿ ಡೇಲ್ ಸ್ಟೇನ್ ತಂಡಕ್ಕೆ ಆಗಮಿಸಿದ ಬಳಿಕ RCB ತಂಡದ ಅದೃಷ್ಠ ಬದಲಾಗಿತ್ತು. ಅದ್ಬುತ ಬೌಲಿಂಗ್ ದಾಳಿ ಸಂಘಚಿಸೋ ಮೂಲಕ ಸ್ಟೇನ್ RCB ಗೆಲುವಿಗೆ ಪ್ರಮುಕ ಕಾರಣರಾಗಿದ್ದರು. ಇದೀಗ ಭುಜದ ನೋವಿಗೆ ತುತ್ತಾಗಿರುವ ಡೇಲ್ ಸ್ಟೇನ್ 12ನೇ ಆವೃತ್ತಿಯಿಂದ ಹೊರಬಿದ್ದಿದ್ದಾರೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸ್ಟೇನ್ ಗಾಯದ ಸಮಸ್ಯೆಯಿಂದ ಹೊರುಗುಳಿದಿದ್ದರು. ಪಂಜಾಬ್ ಪಂದ್ಯಕ್ಕೆ ಮಾತ್ರ ಉಳಿದ ಪಂದ್ಯಗಳಿಗೆ ಸ್ಟೇನ್ ಕಮ್‌ಬ್ಯಾಕ್ ಮಾಡಲಿದ್ದಾರೆ ಅನ್ನೋ ವಿಶ್ವಾಸ ಅಭಿಮಾನಿಗಳಿಗಿತ್ತು. ಆದರೆ ನಿರೀಕ್ಷೆ ಸುಳ್ಳಾಗಿದೆ. ಸ್ಟೇನ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ RCB ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ.

Comments are closed.