ಮಂಗಳೂರು, ಎಪ್ರಿಲ್. 21: ಕದ್ರಿ ಶ್ರೀಮಂಜುನಾಥ ದೇವಸ್ಥಾನದ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಹಾಗೂ ಮಹಾದಂಡ ರುದ್ರಾಭಿಷೇಕ ಮತ್ತು ಮಹಾರುದ್ರಯಾಗ ಮೇ 2ರಿಂದ ಮೇ 10ರವರೆಗೆ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿಯ ಸಭೆ ಶನಿವಾರ ಶ್ರೀ ಕ್ಷೇತ್ರದ ಮಂಜುಶ್ರೀ ಸಭಾಂಗಣದಲ್ಲಿ ನಡೆಯಿತು.
ಪ್ರಚಾರ ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಐತಿಹಾಸಿಕ ಕ್ಷೇತ್ರದ ಬ್ರಹ್ಮಕಲಶ ಹಾಗೂ ಕ್ಷೇತ್ರದ ಹಿರಿಮೆಯನ್ನು ಜಗತ್ತಿಗೆ ಸಾರಲು ಪತ್ರಕರ್ತರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಸಮಿತಿ ಸಂಚಾಲಕ ನವನೀತ ಶೆಟ್ಟಿ ಕದ್ರಿ, ಸುಧಾಕರ್ ರಾವ್ ಪೇಜಾವರ, ನಿತ್ಯಾನಂದ ಕಾರಂತ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಡಾ.ನಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.
Comments are closed.