ಕರಾವಳಿ

ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಉಡುಪಿ ಸೀ ವಿಜಿಲ್ ಗೆ ಬಂತು ಸುಳ್ಳು-ಸತ್ಯದ ರಾಶಿರಾಶಿ ದೂರುಗಳು!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆ ಈಗಾಗಲೇ ಹಲವು ಕ್ಷೇತ್ರದಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಪ್ರಸ್ತುತ ಮುಕ್ತ,ಪಾರದರ್ಶಕ, ನ್ಯಾಯ ಸಮ್ಮತ ಚುನಾವಣೆ ನಡೆಸುವಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ಚುನಾವಣಾ ಅಕ್ರಮ ತಡೆಗಾಗಿ ಚುನಾವಣಾ ಆಯೋಗ ರೂಪಿಸಿರುವ ಸೀವಿಜಿಲ್ ಆಪ್ ನಲ್ಲಿ ಸಾರ್ವಜನಿಕರು ತಮಗೆ ಕಂಡ ಚುನಾವಣಾ ಆಕ್ರಮಗಳನ್ನು ನೇರವಾಗಿ ಆಪ್ ಮೂಲಕ ನೀಡಬಹುದಾಗಿದ್ದು, ಸೀ ವಿಜಿಲ್ ನಲ್ಲಿ ದಾಖಲಾದ ದೂರುಗಳನ್ನು ವಿಲೇವಾರಿ ಮಾಡುವಲ್ಲಿ ಉಡುಪಿ ಜಿಲ್ಲೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ.

ಚುನಾವಣ ಆಯೋಗ ಬಿಡುಗಡೆ ಮಾಡಿರುವ ಸೀವಿಜಿಲ್ ಕುರಿತ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಗತಿ ಮಾಹಿತಿ ಬಿಡುಗಡೆ ಮಾಡಿದ್ದು, ಉಡುಪಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಇದುವವೆಗೆ 91 ದೂರುಗಳನ್ನು ಸ್ವೀಕರಿಸಿದ್ದು, 14 ದೂರುಗಳನ್ನು ಜಿಲ್ಲಾ ಪರಿಶೀಲನಾ ಸಮಿತಿಯಲ್ಲಿ ಡ್ರಾಪ್ ಮಾಡಿದ್ದು, ಸಮರ್ಪಕ ದಾಖಲೆಯಿಲ್ಲದ 21 ದೂರುಗಳನ್ನು ಚುನಾವಣಾಧಿಕಕಾರಿ ಹಾಗೂ ಸಹಾಯಕ ಚುನಾವಣಾಧಿಕರಿ ಹಂತದಲ್ಲಿ ವಜಾ ಮಾಡಲಾಗಿದೆ. ಉಳಿದ 56 ದೂರುಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಇತರೆ ಜಿಲ್ಲೆಗಳಲ್ಲಿ ಉಡುಪಿಗಿಂತ ಅಧಿಕ ದೂರು ಸ್ವೀಕರಿಸಿದ್ದರೂ ಸಹ ಅವುಗಳನ್ನು ಬಹಳಷ್ಟು ಪ್ರಕರಣಗಳನ್ನು ಸುಳ್ಳು ದೂರು ಮತ್ತು ಇತರೆ ಕಾರಣಗಳಿಂದ ವಜಾ ಮಾಡಲಾಗಿದ್ದು ಮತ್ತು ಸಮರ್ಪಕ ಪ್ರಕರಣಗಳ ತನಿಖೆ ನಡೆಸಿ ಕ್ರಮ ಕೈಗೊಂಡಿರುವ ಪ್ರಕರಣಗಳು ಕಡಿಮೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ನಿರ್ದೇಶನದಂತೆ , ಸೀ ವಿಜಿಲ್ ನಲ್ಲಿ ದಾಖಲಾಗುವ ಪ್ರತಿಯೊಂದು ದೂರುಗಳನ್ನು ಪರಿಶೀಲಿಸಿ, ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತಿರುವ ಕಾರಣ ಪ್ರಕರಣಗಳ ವಿಲೇವಾರಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದೇವೆ ಎನ್ನುತ್ತಾರೆ ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ..

ಹಣ ಹಂಚುವಿಕೆ, ಮದ್ಯ ಹಂಚುವಿಕೆ, ಉಡುಗೊರೆಗಳ ಆಮಿಷ, ಜನಾಂಗೀಯ ಭಾವನೆ ಕೆರಳಿಸುವ ಭಾಷಣ, ಪೇಯ್ಡ್ ನ್ಯೂಸ್ ಪ್ರಕಟ , ಸುಳ್ಳು ಸುದ್ದಿ ಪ್ರಕಟ, ಬೆದರಿಕೆ ಹಾಕುವುದು, ಆಸ್ತಿಪಾಸ್ತಿಗೆ ಹಾನಿ ಮಾಡುವುದು ಸೇರಿದಂತೆ ಯಾವುದೇ ರೀತಿಯ ಮಾದರಿನೀತಿ ಸಂಹಿತೆ ಉಲ್ಲಂಘಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ವಿರುದ್ದ ಸಾರ್ವಜನಿಕರು ದೂರು ನೀಡಬಹುದಾಗಿದೆ.

ಆಂಡ್ರಾಯ್ಡ್ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಸಿ ವಿಜಿಲ್ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡು, ತಮ್ಮ ಪರಿಸರದಲ್ಲಿ ಕಂಡು ಬರುವ ಯಾವುದೇ ರೀತಿಯ ಚುನಾವಣಾ ಅಕ್ರಮಗಳ ಕುರಿತು ಪೋಟೋ ಅಥವಾ ವೀಡಿಯೋವನ್ನು ಅಪ್ ಲೋಡಿ ಮಾಡುವುದರ ಮೂಲಕ ಸಾರ್ವಜನಿಕರು ದೂರು ನೀಡಬಹುದಾಗಿದ್ದು, 100 ನಿಮಿಷಗಳ ಒಳಗೆ ದೂರಿನ ಕುರಿತು ಕ್ರಮ ಕೈಗೊಂಡು , ದೂರು ನೀಡಿದವರಿಗೂ ಸಹ ಮಾಹಿತಿ ನೀಡಲಾಗುತ್ತದೆ.

ಸೀ ವಿಜಿಲ್ ದೂರು ಕುರಿತು ಪರಿಶೀಲಿಸಲು 24*7 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

Comments are closed.