ಕರಾವಳಿ

ನೈಸರ್ಗಿಕವಾದ ಆಹಾರ ಪದಾರ್ಥ ಸೇವಿಸಿ ತಾಯ್ತನ ಅನುಭವಿಸಿ.

Pinterest LinkedIn Tumblr

ಮದುವೆಯಾದ ಪ್ರತಿಜೋಡಿಗೂ ಮಕ್ಕಳನ್ನು ಪಡೆಯಬೇಕೆಂಬ ಬಯಕೆ  ಇರುತ್ತದೆ. ಯಾರಾದರೂ ತಮ್ಮ ಪ್ರೀತಿಯ ಅನುಬಂಧಕ್ಕೆ, ಆತ್ಮೀಯತೆಗೆ ನೆನಪಿಗಾಗಿ ರಕ್ತ ಹಂಚಿಕೊಂಡು ಹುಟ್ಟಿದ ಮಗು ಇರಬೇಕೆಂದು ಬಯಸುತ್ತಾರೆ. ಅಷ್ಟೇ ಅಲ್ಲ ಹುಟ್ಟುವವರು, ಆರೋಗ್ಯವಾಗಿರಬೇಕೆಂದು ಆಸೆ ಪಡುತ್ತಾರೆ. ಈ ರೀತಿಯಾಗಿ ಅವರು ವೈದ್ಯಕೀಯ ಪರೀಕ್ಷೆಗಳು ಮಾಡಿಸಿಕೊಳ್ಳಬಹುದು. ಪ್ರಗ್ನೆನ್ಸಿಗೊಸ್ಕರ ಔಷಧಿಗಳನ್ನು ಬಳಸುವುದು ಸಹಜ. ಮಕ್ಕಳನ್ನು ಪಡೆಯಯಲು, ಇನ್ನೂ ಅನೇಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿರುವವರಿಗೂ, ಮಕ್ಕಳಾಗುವ ಅವಕಾಶವಿರುತ್ತದೆ. ಇದು ನೈಸರ್ಗಿಕವಾದ ಆಹಾರ ಪದಾರ್ಥಗಳ ಮೂಲಕ ಮಕ್ಕಳು ಜನಿಸುವ ಅವಕಾಶಗಳನ್ನು ಉತ್ತಮ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಏನೇನು ತಿನ್ನಬೇಕೆಂದು ತಿಳಿಯೋಣ….

ಕಡೆಲೆಕಾಳು:
ಬೇಯಿಸಿದ ಅಥವಾ ಪಲ್ಯದಲ್ಲಾದರೂ ಈ ಕಡಲೇಕಾಳನ್ನು ಪ್ರತಿನಿತ್ಯ ತಿನ್ನುತ್ತಿದ್ದರೆ, ಮಹಿಳೆಯರಲ್ಲಿ ಅಂಡಾಶಯದ ಕಾರ್ಯವೈಖರಿ ಉತ್ತಮವಾಗುತ್ತದೆ. ಇದು ಉತ್ತಮವಾದ ಋತುಚಕ್ರ ಕ್ರಮವಾಗುವುದಕ್ಕೆ ಸಹಾಯಕವಾಗಿರುವುರಿಂದ ಮಕ್ಕಳಾಗುವ ಅವಕಾಶಗಳಿರುತ್ತವೆ.

ದಾಳಿಂಬೆ ಹಣ್ಣು:
ದಾಳಿಂಬೆ ಹಣ್ಣು ಪ್ರತ್ಯುತ್ಪತ್ತಿ ಕಾರ್ಯದಲ್ಲಿ ಉತ್ತಮವಾಗುವುದಕ್ಕೆ ಅಧಿಕ ಪೋಷಕಾಂಶಗಳನ್ನು ನೀಡುತ್ತದೆ. ಈ ಹಣ್ಣುಗಳನ್ನು ನಿತ್ಯವೂ ಸೇವಿಸುವುದರಿಂದ ಮಹಿಳೆಯರ ಗರ್ಭದಲ್ಲಿ ರಕ್ತದ ಸರಬಾರಜು ಉತ್ತಮವಾಗುತ್ತವೆ. ಋತುಚಕ್ರ ಸರಿಯಾಗಿರಲು ಸಹಾಯವಾಗುತ್ತದೆ. ಅಷ್ಟೇ ಅಲ್ಲ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಅಧಿಕಗೊಳಿಸುತ್ತವೆ. ಇದರಿಂದ ಮಕ್ಕಳನ್ನು ಪಡೆಯಬಹುದು.

ಹಸಿರು ತರಕಾರಿಗಳು ಹಾಗೂ ಸೊಪ್ಪು:
ಹಸಿರು ತರಕಾರಿಯಲ್ಲಿ, ಸೊಪ್ಪಿನಲ್ಲಿ ದಂಪತಿಗಳಿಗೆ ಬೇಕಾದಂತಹ ಪೋಷಕಾಂಶಗಳು ಹೆಚ್ಚಾಗಿಸಿಗುತ್ತವೆ. ಇವು ಅವರಲ್ಲಿನ ಹಾರ್ಮೋನ್ ಅಸಮತೋಲನವನ್ನು ತೋಲಿಸಿ, ಮಹಿಳೆಯರಲ್ಲಿ ಪ್ರಮುಖವಾದ ಸಮಸ್ಯೆಗಳಾದ ಐರನ್, ಪೋಲಿಕ್ ಯಾಸಿಡ್’ಗಳನ್ನು ಬೆಳೆಸುತ್ತವೆ. ಇದರಿಂದ ಗರ್ಭಧರಿಸುವ ಅವಕಾಶ ಉತ್ತಮಗೊಳ್ಳುತ್ತದೆ. ಅಷ್ಟೇ ಅಲ್ಲ ಗರ್ಭಧಾರಣೆಯ ನಂತರವೂ ಮಹಿಳೆಯರು ಇಂತಹ ತರಕಾರಿಗಳನ್ನು ತಿನ್ನುತ್ತಿದ್ದರೆ ಮಗು ಆರೋಗ್ಯವಾಗಿ ಜನಿಸುತ್ತದೆ.

ಆಲಿವ್ ಆಯಿಲ್:
ಆಲಿವ್ ಆಯಿಲ್ ನಿಂದ ಮೆನೋಅನ್ ಶಾಚುರೇಟೆಡ್ ಫ್ಯಾಟ್ಸ್ ಲಭಿಸುತ್ತವೆ. ಇವು ನಮ್ಮ ಶರೀರಕ್ಕೆ ಎಷ್ಟೋ ಒಳಿತನ್ನುಂಟುಮಾಡುತ್ತವೆ. ಪ್ರಮುಖವಾಗಿ ದಂಪತಿಗಳು ತಮ್ಮ ಆಹಾರದಲ್ಲಿ ಆಲಿವ್ ಆಯಿಲ್ ಅನ್ನು ಭಾಗವಾಗಿ ಮಾಡಿಕೊಂಡರೆ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ಮಕ್ಕಳನ್ನು ಪಡೆಯಲು ಸಹಕಾರಿಯಾಗುತ್ತದೆ.

ಕುಂಬಳಕಾಯಿಯ ಬೀಜಗಳು:
ಕುಂಬಳಕಾಯಿಯ ಬೀಜಗಳು ನಮಗೆ ಮಾರುಕಟ್ಟೆಯಲ್ಲಿ ಲಭಿಸುತ್ತವೆ. ಇವುಗಳನ್ನು ನಿತ್ಯವೂ ತಿನ್ನುತ್ತಿದ್ದರೆ, ಐರನ್ ಸಮೃದ್ದಿಯಾಗಿ ದೊರೆಯುತ್ತವೆ. ಇದರಿಂದ ರಕ್ತವೂ ವೃದ್ದಿಯಾಗುತ್ತದೆ. ಜೊತೆಗೆ ಲೈಂಗಿಕ ಸಾಮರ್ಥ್ಯವೂ ಅಧಿಕವಾಗುತ್ತದೆ. ಇದು ಮಕ್ಕಳನ್ನು ಪಡೆಯಲು ಸಹಾಯಕಾರಿಯಾಗುತ್ತದೆ.

ಫನೀರ್:
ದಂಪತಿಗಳು ಫನೀರ್ ಅನ್ನು ಹೆಚ್ಚಾಗಿ ತಿನ್ನುತ್ತಿದ್ದರೆ, ಸ್ರೀ-ಪುರುಷರಲ್ಲಿ ಸಂತಾನ ಉತ್ಪತ್ತಿಯ ಕಾರ್ಯ ಉತ್ತಮಗೊಳ್ಳುತ್ತದೆ. ಇದರಿಂದ ಮಕ್ಕಳಾಗುತ್ತಾರೆ.

ಬ್ರಕೋಲಿ:
ಇವು ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್’ಗಳಲ್ಲಿ ಮಾತ್ರ ದೊರೆಯುತ್ತವೆ. ಇದನ್ನು ತಂದು ಸಾಂಬಾರ್ ಮಾಡಿಕೊಂಡು ತಿನ್ನುವುದರಿಂದ ಪೋಲಿಕ್ ಯಾಸಿಡ್, ವಿಟಮಿನ್ ಸಿ,ಐರನ್ ಹೆಚ್ಚಾಗಿ ದೊರೆಯುತ್ತದೆ. ಇವು ಶರೀರದಲ್ಲಿರುವ ಅಸಮತೋಲನವನ್ನು ಹೋಗಿಸಿ ಸಂತಾನೋತ್ಪತ್ತಿಯ ಅವಯವಗಳು ಚೆನ್ನಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಮೆಣಸಿನಕಾಯಿ:
ಕಾರವಾಗಿರುವ, ರುಚಿಯಾಗಿರುವ ಮೆಣಸಿನಕಾಯಿಯಿಂದ ದಂಪತಿಗಳಿಗೆ ಒಳ್ಳೆಯದಾಗುತ್ತದೆ. ಇದನ್ನು ತಿಂದರೆ ಸಂತಾನೋತ್ಪತ್ತಿಯು ಉತ್ತಮವಾಗುತ್ತದೆ.

ಬಾಳೆಹಣ್ಣು:
ಬಾಳೆಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ, ಸ್ರೀಯರಲ್ಲಿ ಋತುಚಕ್ರದ ಸಮಸ್ಯೆಯು ಕಡಿಮೆಯಾಗುತ್ತದೆ. ಪೀರಿಯೇಡ್ಸ್ ಸರಿಯಾಗಿ ಆಗುತ್ತದೆ. ಇದರಿಂದ ಮಕ್ಕಳಾಗುವ ಅವಕಾಶ ಹೆಚ್ಚಾಗುತ್ತದೆ.

Comments are closed.