ಕರಾವಳಿ

ಮಕ್ಕಳಲ್ಲಿನ ಐ ಸೈಟ್ ಸಮಸ್ಯೆ ನಿವಾರಣೆಗೆ ಪಾಲಕ್ ಸೊಪ್ಪು ನಿಜಕ್ಕೂ ಅಮೃತ

Pinterest LinkedIn Tumblr

ಸಾಕಷ್ಟು ಬಾರಿ ನಾವು ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡುವುದೇ ಇಲ್ಲ. ಹಿತ್ತಲಗಿಡ ಮದ್ದಲ್ಲ ಎಂಬಂತೆ ನಾವು ಜೀವನ ಸಾಗಿಸುತ್ತಿರುತ್ತೇವೆ. ಆದರೆ ಅತಿ ಸುಲಭವಾಗಿ ಸಿಗುವ ಹಾಗೂ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ಗುಣಗಳನ್ನು ಹೊಂದಿರುವ ಪಾಲಕ್ ಸೊಪ್ಪಿನ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ ನೋಡಿ.. ಪಾಲಕ್ ಸೊಪ್ಪು ಯಾರಿಗೆ ತಾನೇ, ಗೊತ್ತಿಲ್ಲ ಹೇಳಿ. ರಸ್ತೆ ಬದಿಯಲ್ಲಿ ರಾಶಿ ರಾಶಿ ಹಾಕಿಕೊಂಡು ಮಾರುತ್ತಾರೆ. ಆದರೆ ಆ ಪಾಲಕ್ ಸೊಪ್ಪಿನಲ್ಲಿ ಏನೆಲ್ಲ ಅಂಶಗಳು ಒಳಗೊಂಡಿವೆ ಎಂಬುದನ್ನು ಈ ವರದಿ ಬಗ್ಗೆ ಕಣ್ ಹಾಯಿಸಿ.

ನಿಮ್ಮ ಅಂದವಾದ ಸೆಲ್ಫಿಯನ್ನು ಮುಖದ ಮೇಲಿನ ಮೊಡವೆ ಕೆಡಿಸುತ್ತಿದೆಯೇ? ಮುಖದ ಒಂದು ಕಡೆಗೆ ಒಂದು ಸೋಪು ಇನ್ನೊಂದು ಕಡೆಗೆ ಇನ್ನೊಂದು ಸೋಪು ಹಾಕೋದು ಬಿಡಿ, ಪಾಲಾಕ್ ತಗೊಳಿ. ಮುಖದಲ್ಲಿ ನೆರಿಗೆ ಬರೋದು, ಸುಕ್ಕಾಗೋದು ಎಲ್ಲಾ ತಡೆಯುತ್ತೆ ನಮ್ ಪಾಲಕ್ಕು.

ಪಾಲಾಕ್ ಸೊಪ್ಪಲ್ಲಿ “ಪ್ರೋಲೇಟ್” ಅನ್ನೋ ಅಂಶ ಇರುತ್ತೆ. ಇದರಿಂದ ಬಿಪಿ ಕಂಟ್ರೋಲ್ ಆಗುತ್ತೆ…, ಪಾಲಾಕ್ ಸೊಪ್ಪಲ್ಲಿರೋ “ಕ್ಯಾರೋಟಿನೈಡ್” ನಿಮ್ಮ ಮೈಯ್ಯಲ್ಲಿರೋ ಕೊಲೆಸ್ಟ್ರಾಲನ್ನ ಕೊಲೆ ಮಾಡುತ್ತೆ ಅಲ್ಲದೇ ಮತ್ತೆ ಕೊಲೆಸ್ಟ್ರಾಲ್ ಹೆಚ್ಚಾಗದೇ ಇರೋ ಹಾಗೆ ಮಾಡುತ್ತೆ…

ಚಿಕ್ ಚಿಕ್ ಹುಡುಗರೂ ಕನ್ನಡಕ ಹಾಕ್ಕೊಳ್ಳೋದು ನೋಡಿದ್ರೆ ಅಯ್ಯೋ ಅನ್ಸುತ್ ಅಲ್ವಾ? ನಿಮ್ ಮಕ್ಳಿಗೆ ಪಾಲಾಕ್ ಸೊಪ್ ಕೊಡಿ, ಸೈಟ್ ಪ್ರಾಬ್ಲಮ್ ಬರಲ್ಲ.ನರಗಳು ವೀಕಾದ್ರೆ, ಬೇರೆ ಬೇರೆ ನೋವುಗಳು ಬರುತ್ವೆ. ಚಿಕ್ಕೋರಾಗ್ಲಿ ದೊಡ್ಡೋರಾಗ್ಲಿ, ಪಾಲಾಕ್ ತಿಂದ್ರೆ ನರಗಳಿಗೆ ಶಕ್ತಿ ಬರುತ್ತೆ.

ಮೆಮೋರಿ ಪವರ್ ಜಾಸ್ತಿ ಮಾಡುವ ಶಕ್ತಿ ಪಾಲಾಕಿಗಿರುತ್ತೆ. ಕೀಲು ನೋವಿಗೂ ಇರು ರಾಮಬಾಣ, ನಿಮ್ ಮಯ್ಯಲ್ಲಿ ರಕ್ತ ಕಮ್ಮಿ ಇದ್ರೆ, ದಿನಾ ಪಾಲಾಕ್ ತಿಂತಾ ಬನ್ನಿ… ತಾನಾಗೆ ಸರಿಹೋಗುತ್ತೆ., ಕೆಲವ್ರು ನೋಡಿ, ಮುಖದ ಚರ್ಮ ಬಿಗಿಯಾಗಿರುತ್ತೆ, ಫಳ ಫಳ ಅಂತ ಹೋಳೀತಿರ್ತಾರೆ. ಯಾಕೆ ಗೊತ್ತಾ? ಯಾಕಂದ್ರೆ ಹಾಗೆ ಹೊಳೆಯೋಕ್ಕೆ ಬೇಕಾದ ಎ ವಿಟಾಮಿನ್ ಅವರ್ ಮಯ್ಯಲ್ಲಿ ಜಾಸ್ತಿ ಇರುತ್ತೆ. ನಮ್ ಪಾಲಾಕಲ್ಲಿ ಎ ವಿಟಾಮಿನ್ ಸಿಕ್ಕಾಪಟ್ಟೆ ಇದೆ., ಕ್ಯಾನ್ಸರ್ ಕಣಗಳನ್ನು ಸಹ ಕೊಲ್ಲಬಲ್ಲ ಶಕ್ತಿ ಪಾಲಾಕ್‌ನಲ್ಲಿದೆ..

ಈ ಟಿಪ್ಸ್ ಗಳತ್ತ ಒಮ್ಮೆ ಕಣ್ಣು ಹಾಯಿಸಿ :

* ಬಿಸಿಲಿನ ತಾಪದಿಂದಾಗಿ ಮಂಕಾಗಿರುವ ಚರ್ಮಕ್ಕೆ ಸಹಜವರ್ಣ ಪಡೆಯಲು ಪಾಲಕ್‌ ನೆರವಾಗುತ್ತದೆ.
* ಪಾಲಕ್‌ ಸೊಪ್ಪು ಫ್ರೋಲೆಟ್ ಅಂಶವನ್ನು ಹೊಂದಿದ್ದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಇದು ಇತರೆ ಹೃದಯ ಸಂಬಂಧಿ ಖಾಯಿಲೆಗಳನ್ನು ನಿವಾರಿಸುತ್ತದೆ.
* ಪಾಲಕ್‌ನಲ್ಲಿನ ಸಿ ಜೀವಸತ್ವವು ಹೊಸ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ.
* ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಕಣಗಳನ್ನು ನಾಶಮಾಡಬಲ್ಲ ಶಕ್ತಿ ಪಾಲಕ್‌ನಲ್ಲಿದೆ.
* ತ್ವಚೆಯ ತಳಭಾಗದಲ್ಲಿ ಸಂಗ್ರಹವಾಗಿ ಮೊಡವೆಗೆ ಕಾರಣವಾಗುವ ವಿಷಕಾರಿ ವಸ್ತುಗಳನ್ನು ರಕ್ತದಿಂದಲೇ ನಿವಾರಿಸಲು ಪಾಲಕ್‌ ಸಹಾಯಕವಾಗುತ್ತದೆ.
* ಕೂದಲು ಉದುರುವ ಸಮಸ್ಯೆಯಿರುವವರು ಬೆಳಗ್ಗೆ ಎದ್ದೊಡನೆ ಒಂದು ಲೋಟ ಪಾಲಕ್‌ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಕೆಲ ದಿನಗಳಲ್ಲೇ ಪರಿಣಾಮ ಕಂಡುಬರುತ್ತವೆ.
* ಪಾಲಕ್‌ಸೊಪ್ಪಿನಲ್ಲಿ ಕ್ಯಾರೋಟಿನೈಡ್ ಅಂಶವಿದ್ದು ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ ಮತ್ತು ಅದರ ಪ್ರಮಾಣವನ್ನು ಹೆಚ್ಚಾಗದಂತೆ ನಿಯಂತ್ರಿಸುತ್ತದೆ.
* ಪಾಲಕ್‌ ಸೇವನೆಯು ಮೊಡವೆಗಳನ್ನು ಹೋಗಲಾಡಿಸುವುದೇ ಅಲ್ಲದೇ ಮುಖದಲ್ಲಿ ಬೇಗನೇ ನೆರಿಗೆ ಮೂಡದಂತೆ ಕಾಪಾಡುತ್ತದೆ.
* ಸಾಮಾನ್ಯವಾಗಿ ಉಂಟಾಗಬಹುದಾದ ದೃಷ್ಠಿದೋಷವನ್ನು ತಡೆಗಟ್ಟುವಲ್ಲಿ ಪಾಲಕ್‌ ಸೊಪ್ಪು ನೆರವಾಗುತ್ತದೆ.
* ಮೆದುಳಿನ ನರಕೋಶಗಳ ಅಭಿವೃದ್ಧಿಗೆ ಸಹಾಯಕವಾಗಬಲ್ಲ ಪೋಷಕಾಂಶಗಳು ಪಾಲಕ್‌ ಸೊಪ್ಪಿನಲ್ಲಿರುವುದರಿಂದ ಅದರ ಸೇವನೆಯು ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಬಲ್ಲದು.
* ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪಾಲಕ್‌ ದಿವ್ಯೌಷಧವಾಗಬಲ್ಲದು.
* ದಿನನಿತ್ಯ ಪಾಲಕ್‌ ಸೊಪ್ಪನ್ನು ಸೇವಿಸುವುದರಿಂದ ಅದರಲ್ಲಿರುವ ಕಬ್ಬಿಣದಂಶದಿಂದಾಗಿ ನಮ್ಮ ರಕ್ತಕಣಗಳು ವೃದ್ಧಿಯಾಗಿ ರಕ್ತಹೀನತೆಯನ್ನು ದೂರವಿಡಬಹುದು.
* ಪಾಲಕ್‌ನಲ್ಲಿರುವ ಎ ಜೀವಸತ್ವವು ಚರ್ಮವನ್ನು ಬಿಗಿಗೊಳಿಸಿ ಕಾಂತಿಯುತವಾಗಿರಿಸುತ್ತದೆ.

ಒಮ್ಮೆ ಯೋಚಿಸಿ ನೋಡಿ ಇಷ್ಟೆಲ್ಲಾ ಅಮೃತ ಗುಣಗಳನ್ನು ಹೊಂದಿರುವ ಪಾಲಕ್ ಇನ್ನು ಮುಂದಾದರೂ ನಿಮ್ಮ ಆಹಾರಕ್ರಮದಲ್ಲಿ ಅವಿಭಾಜ್ಯ ಪದ್ದತಿ ಮಾಡಿಕೊಳ್ಳುವ ಆಯ್ಕೆ ನಿಮಗೆ ಬಿಟ್ಟಿದ್ದು.

Comments are closed.