ಕರಾವಳಿ

ಶಾಸಕ ರಘುಪತಿ ಭಟ್ರಿಗೆ ಒಮ್ಮಿಂದೊಮ್ಮೆ ಸಂಸದೆ ಮೇಲ್ಯಾಕೆ ವ್ಯಾಮೋಹವೆಂದು ಪ್ರಶ್ನಿಸಿದ ಪ್ರಮೋದ್!

Pinterest LinkedIn Tumblr

ಉಡುಪಿ: ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯನ್ನು ಒಪ್ಪಿದ್ದು ಅವರೇ ಜನರ ಬಳಿ ತೆರಳುತ್ತಾರೆ. ಗೋ ಬ್ಯಾಕ್ ಶೋಭಾ ಚಳವಳಿ ಬಿಜೆಪಿಗರೇ ಪ್ರಾರಂಭಿಸಿದ್ದು ಅದನ್ನು ಯಶಸ್ವಿಯಾಗಿ ಪೂರೈಸಿದ್ದು ಮಾತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಮಾಡಿದ್ದಾರೆ. ಗೋ ಬ್ಯಾಕ್ ಶೋಭಾ ಅಭಿಯಾನ ಆರಂಭಿದವರು ಶೋಭಾ ಕರಂದ್ಲಾಜೆಯನ್ನು ಮನೆಗೆ ಕಳಿಸ್ತಾರೆ ಎಂದು ಉಡುಪಿ-ಚಿಕ್ಕಮಗಳುರು ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಕುಂದಾಪುರದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ ಯಾವುದೇ ಬಂಡಾಯವಿಲ್ಲ. ಮೈತ್ರಿ ಅಬ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು ಚಿಹ್ನೆಯಿಂದ ಯಾವುದೇ ಸಮಸ್ಯೆಯೂ ಇಲ್ಲ. ಕೆಲಸ ಮಾಡುವ ಕ್ಷೇತ್ರದೊಳಗಿನ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು. ರಘುಪತಿ ಭಟ್ ಅವರಿಗೆ ನನ್ನ ಬಗ್ಗೆ ತಲೆಬಿಸಿ ಬೇಡ. ಈವರೆಗೆ ಫ್ಲೆಕ್ಸಿನಲ್ಲಿ ಶೋಭಾ ಕರಂದ್ಲಾಜೆ ಫೋಟೋ ಹಾಕಿಲ್ಲ, ಅವರ ಮುಖ ನೋಡುತ್ತಿರಲಿಲ್ಲ, ಅವರ ಬಳಿ ಮಾತನಾಡುತ್ತಿರಲಿಲ್ಲ, ಅವರಿದ್ದ ಸಭೆಗೆ ಹೋಗುತ್ತಿರಲಿಲ್ಲ. ಒಮ್ಮಿಂದೊಮ್ಮೆ ರಘುಪತಿ ಭಟ್ರಿಗೆ ಶೋಭಾ ಕರಂದ್ಲಾಜೆ ಬಗ್ಗೆ ವ್ಯಾಮೋಹ ಬಂದಿದ್ದ್ಯಾಕೆ ಎನ್ನುವುದನ್ನು ಅವರೇ ಉತ್ತರಿಸಲಿ ಎಂದರು.

Comments are closed.