ಕರಾವಳಿ

ಹಳ್ಳಿಹೊಳೆ: ಮನೆಯ ಹೆಂಚು ಕಿತ್ತು ಒಳಗಿದ್ದ ಚಿನ್ನಾಭರಣ ಕಳವು: ಆರೋಪಿ ಬಂಧನ

Pinterest LinkedIn Tumblr

ಕುಂದಾಪುರ: ಸುಮಾರು ಇಪ್ಪತ್ತು ದಿನಗಳ ಹಿಂದೆ ಕುಂದಾಪುರ ತಾಲೂಕಿನ ಹಳ್ಳಿಹೊಳೆ ದೇವರಬಾಳು ಎಂಬಲ್ಲಿನ ಮಹಿಳೆಯೊಬ್ಬರ ಮನೆಯ ಹೆಂಚು ತೆಗೆದು ಚಿನ್ನಾಭರಣ ಕದ್ದಿದ್ದ ಓರ್ವ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಹಳ್ಳಿಹೊಳೆ ಗ್ರಾಮದ ಕೋಟುಗೂಳಿ ನಿವಾಸಿ ಪ್ರದೀಪ ಪೂಜಾರಿ ಸದ್ಯ ಬಂಧನಕ್ಕೊಳಗಾದ ಆರೋಪಿ.

ಮಾ.9 ರಂದು ಶೈಲಾ ಎಂಬುವರ. ಮನೆಯ ಮಾಡಿನ ಹೆಂಚನ್ನು ತೆಗೆದು ಚಿನ್ನ ದ ಉಂಗುರ ಹಾಗೂ ಕಿವಿಯೊಲೆ ಕಳವು ಮಾಡಿದ್ದ. ಈ ಪ್ರಕರಣದ ತನೀಕೆ ಕೈಗೆತ್ತಿಕೊಂಡಾಗ ಒಲೀಸರಿಗೆ ಪ್ರದೀಪ್ ವಿಚಾರದಲ್ಲಿ ಕೆಲ ಸಂಶಯಗಳಿದ್ದು ಕೂಲಂಕುಷ ತನಿಖೆ ನಡೆಸಿದಾಗ ಆತನೇ ಆರೋಪಿ ಎನ್ನುವುದು ದ್ರಢಪಟ್ಟಿತ್ತು. ಕಳವು ಮಾಡಿದ ಚಿನ್ನದ ಅಭರಣ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Comments are closed.