ಕ್ರೀಡೆ

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೂಪರ್ ಗೆಲುವು ಸಾಧಿಸಿದ ಡೆಲ್ಲಿ

Pinterest LinkedIn Tumblr

ದೆಹಲಿ: ಪೃಥ್ವಿ ಶಾ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಶನಿವಾರ ಮೂರು ವಿಕೆಟ್ ಗಳ ಸೂಪರ್ ಗೆಲುವು ಸಾಧಿಸಿದೆ.

ಇಂದು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್ ಸೇರಿಸಿತು.

ಗೆಲುವಿಗೆ 186 ರನ್ ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪೃಥ್ವಿ ಶಾ ಅವರ 99 ರನ್ ಗಳ ನೆರವಿನೊಂದಿಗೆ ಆರು ವಿಕೆಟ್ ನಷ್ಟಕ್ಕೆ 185 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ಐಪಿಎಲ್ 2019ರಲ್ಲಿ ಮೊದಲ ಬಾರಿಗೆ ರೋಚಕ ‘ಟೈ’ ದಾಖಲಾಯಿತು. ಬಳಿಕ ವಿಜೇತರನ್ನು ಸೂಪರ್ ಓವರ್‌ನಲ್ಲಿ ನಿರ್ಧರಿಸಲಾಯಿತು.

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಒಂದು ವಿಕೆಟ್ ನಷ್ಟಕ್ಕೆ 10 ರನ್ ಗಳಿಸಿತ್ತು. ಬಳಿಕ 11 ರನ್‌ಗಳ ಗುರಿ ಬೆನ್ನಟ್ಟಿದ ಕೆಕೆಆರ್ ಒಂದು ವಿಕೆಟ್ ನಷ್ಟಕ್ಕೆ 7 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಐಪಿಎಲ್ 2019ರಲ್ಲಿ ದಾಖಲಾದ ಮೊದಲ ‘ಟೈ’ ಪಂದ್ಯದಲ್ಲಿ ಡೆಲ್ಲಿ ಸೂಪರ್ ಗೆಲುವು ದಾಖಲಿಸಿತು.

ಆರಂಭದಲ್ಲೇ ತನ್ನ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡ ಕೆಕೆಆರ್, ಓಪನರ್​​ಗಳಾದ ನಿಖಿಲ್ 7 ಹಾಗೂ ಕ್ರಿಸ್ ಲಿನ್ 20 ರನ್​ಗೆ ಔಟ್ ಆದರೆ, ರಾಬಿನ್ ಉತ್ತಪ್ಪ(11), ನಿತೀಶ್ ರಾಣಾ(1) ಹಾಗೂ ಶುಭ್ಮನ್ ಗಿಲ್(4) ಬೇಗನೆ ಪೆವಿಲಿಯನ್ ಹಾದಿ ಹಿಡಿದರು. ಹೀಗೆ ಕೆಕೆಆರ್ 9 ಓವರ್​​ ಆಗುವ ಹೊತ್ತಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Comments are closed.