ಕರಾವಳಿ

ಫೈಬರ್ ಅಂಶ ಹೆಚ್ಚಾಗಿರುವ ಸೇಬಿನಿಂದ ಹಲವು ಪ್ರಯೋಜನಗಳು

Pinterest LinkedIn Tumblr

ದಿನ ಸೇಬು ಸೇವಿಸಿ, ವೈದ್ಯರಿಂದ ದೂರವಿರಿ….ಎಂಬ ಮಾತಿದೆ. ಫೈಬರ್ ಅಂಶ ಹೆಚ್ಚಾಗಿರುವ ಸೇಬಿನಿಂದ ಹಲವು ಪ್ರಯೋಜನಗಳಿವೆ. ಸಾಮಾನ್ಯವಾಗಿ ಸಿಪ್ಪೆ ತೆಗೆದು ಸೇಬು ಸೇವಿಸುತ್ತಾರೆ. ಆದರೆ, ಸಿಪ್ಪೆಯೊಂದಿಗೆ ತಿಂದರೇ ಹೆಚ್ಚು ಲಾಭ. ಏಕೆ?

ಫೈಬರ್ ಹೆಚ್ಚು: ಸೇಬು ಹಣ್ಣಿನಲ್ಲಿರುವ ಅಧಿಕ ಫೈಬರ್ ಸಿಪ್ಪೆಯಲ್ಲಿರುತ್ತದೆ. ಇದು ತುಂಬಾ ಸಮಯದವರೆಗೆ ಹೊಟ್ಟೆ ಗಟ್ಟಿಯಾಗಿರಲು ಸಹಕರಿಸುತ್ತದೆ. ಇದಲ್ಲದೇ ದೇಹದ ಮೂಳೆ ಹಾಗೂ ಲಿವರ್ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಪಚನ ಕ್ರಿಯೆ ಹೆಚ್ಚಿಸುವ ಫೈಬರ್ ಮಧುಮೇಹಕ್ಕೂ ಮದ್ದು.

ಶ್ವಾಸಕೋಶ ಆರೋಗ್ಯಕ್ಕೆ: ಸೇಬು ಹಣ್ಣಿನ ಸಿಪ್ಪೆಯಲ್ಲಿರುವ ಕರ್ಸಿಟಿನ್ ಎಂಬ ಅಂಶ ಶ್ವಾಸಕೋಶ ಮತ್ತು ಹೃದಯವನ್ನು ಆರೋಗ್ಯವಾಗಿಡುತ್ತದೆ.

ತೂಕ ಕಡಿಮೆ ಮಾಡಲು: ಸೇಬಿನ ಸಿಪ್ಪೆಯಲ್ಲಿರುವ ಫೈಬರ್ ತುಂಬಾ ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ಹೆಚ್ಚು ಆಹಾರ ಸೇವಿಸದೇ ಇರಬಹುದು. ಹೀಗಾದಾಗ ತೂಕ ಹೆಚ್ಚುವುದಿಲ್ಲ. ಸೇಬು ಹಣ್ಣಿನ ಸಿಪ್ಪೆಯಲ್ಲಿರುವ ಫಾಲಿಫೆನಾಲ್ ಬೊಜ್ಜು ನಿವಾರಿಸಲು ಸಹಕರಿಸುತ್ತದೆ. ಜೊತೆಗೆ ರಕ್ತದಲ್ಲಿರುವ ಶುಗರ್ ಲೆವೆಲ್ ಅನ್ನು ಬ್ಯಾಲೆನ್ಸ್ ಮಾಡುತ್ತದೆ.

ಹೃದಯದ ಅರೋಗ್ಯ: ಇದರಲ್ಲಿರುವ ಫಾಲಿಫೆನಾಲ್ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಿ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೇ ಇದು ಹೃದಯದ ಆರೋಗ್ಯವನ್ನು ಚೆನ್ನಾಗಿಡುತ್ತದೆ.

ಸಿಪ್ಪೆಯಲ್ಲಿ ವಿಟಮಿನ್: ವಿಟಮಿನ್ ಎ, ಸಿ ಮತ್ತು ಕೆ ಸೇಬಿನ ಸಿಪ್ಪೆ ಇರುತ್ತದೆ. ಇದಲ್ಲದೆ ಪೊಟ್ಯಾಷಿಯಂ, ಫಾಸ್ಪರಸ್ ಮತ್ತು ಕ್ಯಾಲ್ಸಿಯಂ ಮೊದಲಾ ಖನಿಜಾಂಶಗಳು ದೇಹಕ್ಕೆ ಸೇರಿ, ಅರೋಗ್ಯ ಚೆನ್ನಾಗಿರುತ್ತದೆ.

Comments are closed.