ಕರಾವಳಿ

ಯಾವ ತಂಬಾಕು ಸೇವನೆ ನಮ್ಮ ಆಯಸ್ಸನ್ನು 7 ನಿಮಿಷ ಕಡಿಮೆ ಮಾಡುತ್ತೆ ಗೋತ್ತೆ..?

Pinterest LinkedIn Tumblr

ನಾವು ಧೂಮಪಾನ ಮಾಡುವ ಪ್ರತಿಯೊಂದು ಸಿಗರೇಟ್, ನಮ್ಮ ಜೀವನವನ್ನು 7 ನಿಮಿಷಗಳ ತನಕ ಕಡಿಮೆಗೊಳಿಸುತ್ತದೆ ಎಂದರೆ ನೀವು ನಂಬಲೇಬೇಕು! ಈ ವ್ಯಸನದಿಂದ ಸುಮಾರು 5 ದಶಲಕ್ಷ ಜನರು ಪ್ರತಿ ವರ್ಷ ಸಾಯುತ್ತಾರೆ ಮತ್ತು ಭಾರತದಲ್ಲಿ ಸುಮಾರು 1 ದಶಲಕ್ಷ ಜನರು ಈ ವ್ಯಸನದಿಂದಾಗಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಾಯುತ್ತಾರೆ.

ತಂಬಾಕು ಮತ್ತು ಸಿಗರೆಟ್, ಬೀಡಿ, ಹುಕ್ಕಾ, ಸಿಗಾರ್, ಚುಟ್ಟಾ, ಜರ್ಧ, ಗುಟ್ಕಾ, ಕೈನಿ ಮೊದಲಾದವುಗಳು ಕ್ಯಾನ್ಸರ್ಗೆ ಕಾರಣವಾದವುಗಳು ಎಂದು ನಮಗೆ ತಿಳಿದಿದೆ. ಆದರೆ ನಿರ್ಲಕ್ಷ್ಯದಿಂದಾಗಿ ನಮ್ಮ ಆರೋಗ್ಯದ ಮೇಲೆ ಕಾಯಿಲೆಗಳು 30-40 ವರ್ಷಗಳ ನಂತರ ಪರಿಣಾಮ ಬೀರುತ್ತವೆ.

ವಯಸ್ಸಿನ ಮಿತಿಯಿಲ್ಲದೆ ಕಾಡುತ್ತಿದೆ ಧೂಮಪಾನ ಅಥವಾ ಸಿಗರೇಟ್
ಸುಮಾರು 15 ಮಿಲಿಯನ್ ಜನರು ಪ್ರತಿದಿನ ಧೂಮಪಾನ ಮಾಡುತ್ತಿದ್ದಾರೆಂದು ಅಂದಾಜಿಸಲಾಗಿದೆ. ಒಂದು ವರ್ಷದಲ್ಲಿ ಒಬ್ಬ ಭಾರತೀಯ ಸರಾಸರಿ 35% ನಷ್ಟು ಪುರುಷರು, 20% ಮಹಿಳೆಯರು ಮತ್ತು 20% ರಷ್ಟು ಹದಿಹರೆಯದವರು ಧೂಮಪಾನಕ್ಕೆ ವ್ಯಸನಿಯಾಗುತ್ತಾರೆ. ಪ್ರತಿದಿನ 6000 ವಯಸ್ಕರಲ್ಲಿ, 150 ಹದಿಹರೆಯದವರು ಧೂಮಪಾನ ಚಟಕ್ಕೆ ಬೀಳುತ್ತಿದ್ದಾರೆ.ವೈರಲ್ : 1 ಸಿಗರೇಟ್ ನಮ್ಮ ಆಯಸ್ಸನ್ನು 7 ನಿಮಿಷ ಕಡಿಮೆ ಮಾಡುತ್ತೆ-

ನೀವು ಸಿಗರೇಟ್ ಏಕೆ ಬಿಡಬೇಕು / ಧೂಮಪಾನ ಬಳಕೆ ನಿಲ್ಲಿಸಬೇಕು ಇಲ್ಲಿವೆ ಕೆಲವು ಕಾರಣಗಳು

ಧೂಮಪಾನ ( ಸಿಗರೇಟ್ ) ತೊರೆದರೆ ಈ ಕೆಳಗಿನ ಆರೋಗ್ಯ ಪ್ರಯೋಜನ ಪಡೆಯಬಹುದು.

20 ನಿಮಿಷಗಳಲ್ಲಿ – ನಿಮ್ಮ ಹೃದಯ ಬಡಿತ, ರಕ್ತದೊತ್ತಡವು ಸಾಮಾನ್ಯ ಸ್ಥಿತಿಗೆ ಹಿಂತಿರುಗುತ್ತದೆ.
12 ಗಂಟೆಗಳ ಒಳಗೆ, ದೇಹದಲ್ಲಿ ಕಾರ್ಬನ್ ಡೈಆಕ್ಸೈಡ್ ಮಟ್ಟವು ಸ್ಥಿರಗೊಳ್ಳುತ್ತದೆ.
2 ರಿಂದ 12 ವಾರಗಳಲ್ಲಿ – ರಕ್ತದ ಹರಿವು ಸ್ಥಿರಗೊಳ್ಳುತ್ತದೆ, ಉಸಿರಾಟದ ಅಂಗಗಳು ಬಲಗೊಳ್ಳುತ್ತವೆ.
1 ರಿಂದ 9 ತಿಂಗಳೊಳಗೆ – ಯಾವುದೇ ಒಣ ಕೆಮ್ಮು ರೋಗಲಕ್ಷಣಗಳಿರುವುದಿಲ್ಲ.
1 ರಿಂದ 5 ವರ್ಷಗಳು – ಹೃದಯಾಘಾತದ ಸಾಧ್ಯತೆಗಳು, ಉಸಿರಾಟದ ಕಾಯಿಲೆಗಳು ಕಡಿಮೆಯಾಗುತ್ತವೆ
ನಿಮ್ಮ ಆರೋಗ್ಯವನ್ನು ಸ್ಥಿರಗೊಳಿಸುವುದಲ್ಲದೆ ನಿಮ್ಮ ಕುಟುಂಬದ ಆರೋಗ್ಯವೂ ಸಹ.
ಯಾವುದೇ ರೂಪದಲ್ಲಿ ತಂಬಾಕು ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ.
ಅಭ್ಯಾಸವನ್ನು ತೊರೆಯಲು ನೀವು ಇಂದೇ ಅಗತ್ಯವಾದ ಕ್ರಮ ಕೈಗೊಳ್ಳಿ , ಸಾಧ್ಯವಾದರೆ ವೈದ್ಯಕೀಯ ಸಹಾಯವನ್ನು ತೆಗೆದುಕೊಳ್ಳಬಹುದು. ಕೇವಲ 1 ಸಿಗರೇಟ್ ನಿಮ್ಮ 7 ನಿಮಿಷ ಆಯಸ್ಸನ್ನು ಕಡಿಮೆ ಮಾಡುತ್ತದೆ ಎಂದರೆ ನಿಮ್ಮ ಆಯಸ್ಸನ್ನು ನೀವೇ ಲೆಕ್ಕಹಾಕಬಹುದು . . ಹಾಗೆ ಧೂಮಪಾನ ತ್ಯಜಿಸಿದರೆ ಈ ಮೇಲಿನ ಎಲ್ಲಾ ಆರೋಗ್ಯ ಪ್ರಯೋಜನ ಪಡೆಯಬಹುದು. ನಿರ್ಧಾರ ನಿಮಗೆ ಬಿಟ್ಟಿದ್ದು – ಸಾವೋ , ಬದುಕೋ . . . .

Comments are closed.