ಕರಾವಳಿ

ಹೆಚ್ಚಿನ ಪ್ರಮಾಣದ ನೀರಿನ ಸೇವನೆ ಹಲವು ಖಾಯಿಲೆ ನಿವಾರಣೆಗೆ ದಾರಿ..ಯಾಕೆ?

Pinterest LinkedIn Tumblr

ನೀರು ಮನುಷ್ಯನಿಗೆ ಅತ್ಯಂತ ಅವಶ್ಯಕವಾದದ್ದು. ಮನುಷ್ಯನ ದೇಹ ಶೇಕಡಾ 75ರಷ್ಟು ನೀರಿನಿಂದಲೇ ಆಗಿದೆ. ನಾವು ಪ್ರತಿದಿನವೂ ಹೆಚ್ಚು ನೀರು ಕುಡಿಯಬೇಕು ಎಂಬುದು ನಿಮಗೆಲ್ಲಾ ತಿಳಿದಿರುವ ವಿಷಯವೇ.ಆರೋಗ್ಯವಂತ ಮನುಷ್ಯ ದಿನಕ್ಕೆ ಮೂರರಿಂದ ಐದು ಲೀಟರ್ ನೀರು ಕುಡಿಯಬೇಕು. ಆದರೆ ಹೇಗೆ ಕುಡಿಯಬೇಕು ಯಾವಾಗ ಕುಡಿಯಬೇಕು ಯಾವಾಗ ಕುಡಿಯ ಬಾರದು ಎಂಬ ವಿಷಯಗಳು ಎಲ್ಲರಿಗೂ ತಿಳಿದಿರುವುದಿಲ್ಲ. ನಾವು ನೀರು ಕುಡಿಯುವ ವಿಧಾನ, ಸಮಯ, ಪ್ರಮಾಣ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.

ಮೊದಲು ಹೆಚ್ಚಿನ ಪ್ರಮಾಣದ ನೀರಿನ ಸೇವನೆಯಿಂದ ಆಗುವ ಉಪಯೋಗಗಳು ಏನು ಎಂಬುದನ್ನು ತಿಳಿಯೋಣ.

*ಹೆಚ್ಚು ನೀರು ಕುಡಿಯುವುದು ನಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಉಪಯೋಗವಾಗುತ್ತದೆ.
* ನಮ್ಮ ದೇಹದ ಭಾಗಗಳಾದ ಕಿಡ್ನಿ ,ಲಿವರ್ ,ಶ್ವಾಸಕೋಶಗಳು, ಹೃದಯ ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ.
*ಹೆಚ್ಚು ನೀರಿನ ಸೇವನೆಯಿಂದ ಮೆದುಳಿನ ಬೆಳವಣಿಗೆಯು ಸರಿಯಾಗಿ ನಡೆಯುತ್ತದೆ ಮತ್ತು ಮೆದುಳಿನ ಆರೋಗ್ಯ ವೃದ್ಧಿಸುತ್ತದೆ.
*ಹೆಚ್ಚು ನೀರಿನ ಸೇವನೆಯಿಂದ ನಮ್ಮ ದೇಹದ ಒಳಗೆ ಇರುವ ವಿಷಕಾರಿ ಪದಾರ್ಥಗಳು ದೇಹದಿಂದ ಹೊರಹೋಗುತ್ತದೆ.
* ಕಣ್ಣಿನ ಆರೋಗ್ಯ ವೃದ್ಧಿಯಾಗುತ್ತದೆ. * ಹೆಚ್ಚು ನೀರಿನ ಸೇವನೆ ನಮ್ಮ ದೇಹದಲ್ಲಿ ಪ್ಯಾಂಟ್ ಮತ್ತು ವಿಟಮಿನ್ ಗಳು ಕರಗಲು ಸಹಾಯ ಮಾಡುತ್ತದೆ.
* ದೇಹದ ಹಾರ್ಮೋನ್ ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತವೆ. ಸುಸ್ತು ಕಡಿಮೆಯಾಗುತ್ತದೆ.
* ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ತಡೆಯುತ್ತದೆ. ಚರ್ಮದ ಸಮಸ್ಯೆಗಳು ಬರದಂತೆ ತಡೆಯುತ್ತದೆ.
* ದೇಹವು ಕಾಂತಿಯುತವಾಗಿ ಇರಲು ಸಹಕರಿಸುತ್ತದೆ. ನರವ್ಯೂಹವು ಸರಿಯಾಗಿ ಕೆಲಸ ಮಾಡಲು ಸಹಕರಿಸುತ್ತದೆ. ಹೀಗೆ ಹೆಚ್ಚು ನೀರು ಕುಡಿಯುವುದರಿಂದ ಒಂದಲ್ಲ ಎರಡಲ್ಲ ಇನ್ನೂ ಅನೇಕ ಲಾಭಗಳಿವೆ.

ಅದೇ ರೀತಿ ನೀರನ್ನು ಯಾವಾಗ ಕುಡಿಯಬೇಕು ಎಷ್ಟು ಕುಡಿಯಬೇಕು ಯಾವ ಭಂಗಿಯಲ್ಲಿ ಕುಡಿಯಬೇಕು ಎಂಬುದು ಸಹ ಅಷ್ಟೇ ಮುಖ್ಯವಾಗಿದೆ

*ಬೆಳಗ್ಗೆ ಎದ್ದ ತಕ್ಷಣ ಅರ್ಧದಿಂದ ಒಂದು ಲೀಟರ್ ನೀರು ಕುಡಿಯಬೇಕು
ಬೆಳಗ್ಗೆ ಎದ್ದ ತಕ್ಷಣವೇ ಬಾಯಿ ತೊಳೆದುಕೊಂಡು ಎಷ್ಟು ಸಾಧ್ಯವೋ ಅಷ್ಟು ನೀರನ್ನು ಕುಡಿಯಬೇಕು. ತುಂಬಾ ತಣ್ಣನೆ ನೀರನ್ನು ಕುಡಿಯಬಾರದು. ನಮ್ಮ ವಾತಾವರಣದ ಅಷ್ಟೇ ಉಷ್ಣಾಂಶವಿರುವ ನೀರನ್ನು ಕುಡಿದರೆ ಒಳ್ಳೆಯದು. ಹೊಗರು ಬೆಚ್ಚಿನ ನೀರನ್ನು ಕುಡಿದರೂ ಸಹ ಒಳ್ಳೆಯದು. ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಖಾಲಿ ಹೊಟ್ಟೆಗೆ ಸುಡುವ ನೀರನ್ನು ಕುಡಿಯುವುದು ಅಷ್ಟು ಒಳ್ಳೆಯದಲ್ಲ.

ಬೆಳಗ್ಗೆ ಎದ್ದ ತಕ್ಷಣವೇ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿನ ಬೇಡವಾದ ವಿಷಕಾರಿ ಅಂಶಗಳು ಜೀರ್ಣಾಂಗ ವ್ಯವಸ್ಥೆ ಯಿಂದ ದೇಹದಿಂದ ಹೊರಗೆ ಹೋಗಲು ಸಹಾಯಕವಾಗುತ್ತದೆ. ಬಾಯಿಯಲ್ಲಿ ಇರುವ ಬೇಡವಾದ ಕೀಟಾಣುಗಳು ಸಹ ದೇಹದಿಂದ ಹೊರಗೆ ಹೋಗುತ್ತದೆ. ಹೀಗೆ ಬೆಳಗ್ಗೆ ಎದ್ದು ನೀರು ಕುಡಿದು ನಂತರ ಬೇರೆ ಆಹಾರ ಸೇವಿಸುವುದರಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ದೂರವಾಗುತ್ತವೆ. ಅಲ್ಸರ್ ಗಳು ಉಂಟಾಗದಂತೆ ಇದು ತಡೆಯುತ್ತದೆ.

*ಊಟ ಮಾಡುವ ಮುಂಚೆ ನೀರನ್ನು ಕುಡಿಯಬಾರದು.
ನಾವು ಯಾವಾಗಲೂ ಊಟಕ್ಕೆ ಮುಂಚೆ ನೀರನ್ನು ಕುಡಿಯಬಾರದು. ಕನಿಷ್ಠ ಊಟಕ್ಕೆ ಇಪ್ಪತ್ತು ನಿಮಿಷ ಮುಂಚೆ ನೀರು ಕುಡಿದಿರಬೇಕು. ಒಂದು ವೇಳೆ ಊಟಕ್ಕಿಂತ ಮೊದಲು ನೀರು ಕುಡಿದರೆ ಇದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಜೀರ್ಣ ಕ್ರಿಯೆಗೆ ಬೇಕಾಗುವ ಕಿಣ್ವಗಳು ನಾಶವಾಗಲು ಕಾರಣವಾಗುತ್ತದೆ. ಊಟದ ನಂತರ 20 ನಿಮಿಷಗಳ ತನಕ ನೀರನ್ನು ಕುಡಿಯಬಾರದು. ಊಟ ಆದ ಬಳಿಕ 20 ನಿಮಿಷದ ನಂತರ ಬಿಸಿ ನೀರು ಕುಡಿದರೆ ಒಳ್ಳೆಯದು. ಇದು ಆಹಾರ ಚೆನ್ನಾಗಿ ಜೀರ್ಣವಾಗಲೂ ಸಹಕಾರಿಯಾಗುತ್ತದೆ.

*ನಿಂತುಕೊಂಡು ನೀರನ್ನು ಕುಡಿಯಬಾರದು.
ನಾವು ನಿಂತುಕೊಂಡು ನೀರನ್ನು ಕುಡಿಯುವುದು ನಮ್ಮ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದು ಬಂದಿದೆ. ನಾವು ಯಾವಾಗಲೂ ಕುಳಿತುಕೊಂಡೆ ನೀರನ್ನು ಕುಡಿಯಬೇಕು. ಇದು ಸರಿಯಾದ ವಿಧಾನವಾಗಿದೆ.

*ತುಂಬಾ ಹೆಚ್ಚಾಗಿ ನೀರನ್ನೂ ಒಂದೇ ಬಾರಿ ಕುಡಿಯ ಬಾರದು.
ಹೆಚ್ಚೆಚ್ಚು ನೀರು ಕುಡಿಯಬೇಕು ಎಂದು ಒಮ್ಮೆ ಲೀಟರ್ ಗಟ್ಟಲೆ ನೀರನ್ನು ಕುಡಿದರೆ ದೇಹದಲ್ಲಿನ ಲಿವರ್ ಹೊಡೆದು ಹೋಗುತ್ತದೆಯೇ ಹೊರತು ಅದರಿಂದ ಇನ್ಯಾವ ಪ್ರಯೋಜನವೂ ಆಗುವುದಿಲ್ಲ.

ದಿನಕ್ಕೆ ಐದು ಲೀಟರ್ ವರೆಗೆ ನೀರನ್ನು ಕುಡಿಯಬಹುದು ಹಾಗಂತ 5 ಲೀಟರ್ ಅನ್ನು ಒಮ್ಮೆ ಕುಡಿಯಬೇಕು ಎಂದಲ್ಲ ನಮ್ಮ ದೇಹವನ್ನು ನೋಡಿಕೊಂಡು ನಮಗೆ ಎಷ್ಟು ನೀರನ್ನು ಕುಡಿಯಲು ಸಾಧ್ಯವೋ ಅಷ್ಟನ್ನು ಮಾತ್ರ ಕುಡಿಯಬೇಕು.

Comments are closed.