ಕರಾವಳಿ

ನಿಶ್ಶಕ್ತಿ ಸಮಸ್ಯೆ ಇದ್ದವರು ಮತ್ತು ಕ್ರೀಡಾಪಟುಗಳು ಸೇವಿಸಬೇಕಾದ ಅತೀ ಮುಖ್ಯ ಹಣ್ಣು

Pinterest LinkedIn Tumblr

ಸಪೋಟ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಈ ಹಣ್ಣಿನ ಮೂಲ ಮೆಕ್ಸಿಕೋ ಹಾಗೂ ವೆಸ್ಟ್‍ ಇಂಡೀಸ್ ಎಂದು ಗುರುತಿಸಲಾಗುತ್ತದೆ. ಕರ್ನಾಟಕದಲ್ಲಿ ಕರಾವಳಿ ಹಾಗೂ ಒಳನಾಡುಗಳಲ್ಲಿ ಹೆಚ್ಚಾಗಿ ಈ ಹಣ್ಣನ್ನು ಬೆಳೆಯಲಾಗುತ್ತದೆ. ಪೋರ್ಚುಗೀಸರು ಭಾರತಕ್ಕೆ ಬಂದ ವೇಳೆ ಹಲವಾರು ಹಣ್ಣು ಮತ್ತು ತರಕಾರಿಗಳನ್ನು ತಂದು ನೆಟ್ಟರಂತೆ. ಅದರಲ್ಲಿ ಸಪೋಟ ಹಣ್ಣು ಕೂಡ ಒಂದು ಎಂದು ಹೇಳಲಾಗುತ್ತದೆ. ತಿನ್ನಲು ಬಹಳ ರುಚಿಯಾದ ಈ ಸಪೋಟ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ.

ಆರೋಗ್ಯದ ಉಪಯೋಗಗಳು:

ದೃಷ್ಟಿದೋಷ ನಿವಾರಕ: ಸಪೋಟ ಹಣ್ಣಿನಲ್ಲಿ ವಿಟಮಿನ್ ಎ ಅಂಶ ಅಧಿಕವಾಗಿದ್ದು, ಈ ಹಣ್ಣನ್ನು ದಿನಕ್ಕೆ ಒಂದರಂತೆ ತಿಂದರೂ ದೃಷ್ಟಿದೋಷ ನಿವಾರಣೆಯಾಗುವುದು ಖಂಡಿತ. ಸಾಮಾನ್ಯವಾಗಿ ವಯಸ್ಸಾದ ಮೇಲೆ ಚಾಳೀಸ್‍ ಸಮಸ್ಯೆ ಕಾಡುತ್ತದೆ. ಇಂತಹ ಸಂದರ್ಭದಲ್ಲೂ ಈ ಹಣ್ಣನ್ನು ಸೇವನೆ ಮಾಡುವುದರಿಂದ ಈ ಕೊರತೆಯನ್ನು ನೀಗಿಸಬಹುದು.

ಶಕ್ತಿವರ್ಧಕ: ಸಪೋಟ ಹಣ್ಣು ಸಿಹಿಯಾಗಿರುವುದರ ಜೊತೆಗೆ ಗ್ಲುಕೊಸ್ ನಂತಹ ಶಕ್ತಿಯ ಅಂಶವನ್ನು ಅಧಿಕವಾಗಿ ಹೊಂದಿದೆ. ನಿಶ್ಶಕ್ತಿ ಸಮಸ್ಯೆ ಇದ್ದವರು ಮತ್ತು ಕ್ರೀಡಾಪಟುಗಳಿಗೆ ವೈದ್ಯರು ಈ ಹಣ್ಣನ್ನು ತಿನ್ನುವಂತೆ ಸಲಹೆ ನೀಡುತ್ತಾರೆ.

ಉರಿಯೂತ ನಿವಾರಕ: ಸಪೋಟದಲ್ಲಿ ಟ್ಯಾನಿನ್ ಎಂಬ ಅಂಶವಿದ್ದು, ಅನ್ನನಾಳ, ಕರುಳು, ಜಠರದ ಉರಿಯೂತವನ್ನು ಶಮನ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಪಡಿಸುತ್ತದೆ. ದೇಹದಲ್ಲಿ ಯಾವುದೇ ಉರಿಯೂತವನ್ನು ನಿವಾರಿಸಲು ಉತ್ತಮ ಮನೆಮದ್ದುಗಳಲ್ಲಿ ಸಪೋಟ ಕೂಡ ಒಂದಾಗಿದೆ.

Comments are closed.