ಕರಾವಳಿ

ಕೊಬ್ಬು ಕರಗಿಸಿ ತೆಳ್ಳಗೆ ಸುಂದರವಾಗಿ ಕಾಣುವಂತೆ ಮಾಡಲು ಈ ಒಂದು ಸ್ಪೂನ್ ಪುಡಿ ಸಾಕು

Pinterest LinkedIn Tumblr

ನಮ್ಮ ಈಗಿನ ಆಹಾರದ ಕ್ರಮದಿಂದ ನಮ್ಮ ದೇಹದ ತೂಕದಲ್ಲಿ ತುಂಬಾ ಏರು ಪೇರಾಗುತ್ತಿದೆ.ಅದರಲ್ಲೂ ಈಗ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅವರ ದೇಹದ ತೂಕ.ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು ತೆಳ್ಳಗೆ ಸುಂದರವಾಗಿ ಕಾಣಬೇಕೆಂಬ ಬಯಕೆಯಿಂದ ತೂಕವನ್ನು ಇಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿರುತ್ತಾರೆ.

ನಮ್ಮ ಮನೆಯಲ್ಲೇ ಇರುವ ಅಡಿಗೆ ಮನೆಯ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಹೇಗೆಂದು ಮುಂದೆ ನೋಡೋಣ…

ದೇಹದ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬೇಕಾಗಿರುವ ಅಡುಗೆ ಮನೆಯಲ್ಲಿರುವ ಪದಾರ್ಥಗಳು ಈಗಿವೆ. ಮೆಂತ್ಯೆ 200 ಗ್ರಾಂ,ಓವಿನಕಾಳು100 ಗ್ರಾಂ, ಚಕ್ಕೆ 25 ಗ್ರಾಂ,ಕಪ್ಪು ಜೀರಿಗೆ 50 ಗ್ರಾಂ.

ಮೆಂತ್ಯೆ : ಇದು ನಮ್ಮ ದೇಹದಲ್ಲಿರುವ ರಕ್ತದ ಹರಿತವನ್ನು ಉತ್ತಮಗೊಳಿಸಿ ಮೆಟಬೋಲಿಸಂ ಪ್ರಮಾಣದ ಶೇಕಡವನ್ನು ಹೆಚ್ಚಿಸುತ್ತದೆ.

ಓಂ ಕಾಳು : ಜೀರ್ಣಕ್ರಿಯೆಯನ್ನು ಹೆಚ್ಚಿಸುವುದರಿಂದ ಜೊತೆಗೆ ನರದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಸಹ ಕರಗಿಸುತ್ತದೆ.

ಚಕ್ಕೆ : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಅದನ್ನು ಸುಲಭವಾಗಿ ಕರಗಲು ಸಹ ಸಹಾಯ ಮಾಡುತ್ತದೆ.

ಕಪ್ಪು ಜೀರಿಗೆ : ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಅತ್ಯುತ್ತಮವಾಗಿ ಸಹಾಯ ಮಾಡುತ್ತದೆ.

ಮಾಡುವ ವಿಧಾನ ಹೇಗೆಂದು ನೋಡಿ…

ಮೊದಲಿಗೆ ಮೆಂತ್ಯೆ, ಓಂ ಕಾಳು, ಚಕ್ಕೆ, ಕಪ್ಪು ಜೀರಿಗೆಯನ್ನು ಬೇರೆ ಬೇರೆಯಾಗಿ ಉರಿದು ಕೊಳ್ಳಬೇಕು. ಇದು ತಣ್ಣಗಾದ ನಂತ್ರ ಇದನ್ನು ಮಿಕ್ಸಿ ಮಾಡಿಕೊಳ್ಳಿ. ಈ ಪುಡಿಯನ್ನು ಒಂದು ಗಾಜಿನ ಡಬ್ಬ ಅಥವಾ ವಾಯು ಬಿಗಿತ ಡಬ್ಬದಲ್ಲಿ ಶೇಖರಿಸಿ ಇಟ್ಟುಕೊಳ್ಳಬಹುದು.

ರಾತ್ರಿ ಊಟ ಆದ ಅರ್ಧ ಗಂಟೆಯ ನಂತರ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಒಂದು ಸ್ಪೂನ್ ಈ ಪುಡಿಯನ್ನು ಬೆರೆಸಿ ತೆಗೆದುಕೊಳ್ಳಿ. ಹೀಗೆ ಕ್ರಮಬದ್ದವಾಗಿ ತೆಗೆದುಕೊಳ್ಳುವುದರಿಂದಒಂದು ತಿಂಗಳಿನಲ್ಲಿಯೇ ಒಳ್ಳೆಯ ಫಲಿತಾಂಶವನ್ನು ಕಾಣಬಹುದು. ಇದು ಕೊಬ್ಬನ್ನು ಕರಗಿಸುವುದಲ್ಲದೆ, ಆರೋಗ್ಯವನ್ನು ಸಹ ವೃದ್ಧಿಸುತ್ತದೆ.

Comments are closed.