ಕರಾವಳಿ

ದೇಹದಲ್ಲಿನ ಆರೋಗ್ಯ ವೃದ್ದಿಸುವುದರ ಜೊತೆಗೆ ಹಲವಾರು ರೋಗಗಳನ್ನು ಹೊಡೆದೋಡಿಸುವಲ್ಲಿ ಇದು ಸಹಾಯಕಾರಿ

Pinterest LinkedIn Tumblr

ಬೆಳ್ಳುಳ್ಳಿಯಲ್ಲಿ ಅನೇಕ ವಿಟಮಿನ್ ಮತ್ತು ಪ್ರೋಟೀನ್ ಗಳಿವೆ. ಆಹಾರದ ರುಚಿಗಷ್ಟೇ ಉಪಯೋಗವಲ್ಲ ಬೆಳ್ಳುಳ್ಳಿ. ನಮ್ಮ ದೇಹದಲ್ಲಿನ ಆರೋಗ್ಯ ವೃದ್ದಿಸುವುದರ ಜೊತೆಗೆ ಹಲವಾರು ರೋಗಗಳನ್ನು ಹೊಡೆದೋಡಿಸುವಲ್ಲಿ ಸಹಾಯಕಾರಿಯಾಗಿದೆ.

ಹಲವಾರು ಕಾಯಿಲೆಗಳಾದ ಕಿವಿನೋವು, ಮೂಲವ್ಯಾಧಿ, ರಕ್ತದೊತ್ತಡ, ಮಲಬದ್ಧತೆ ಇನ್ನು ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿದೆ.ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ನಮ್ಮ ದೇಹದ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಸಂಶೋಧನೆಗಳ ಪ್ರಕಾರ ಬೆಳ್ಳುಳ್ಳಿ ಹಸಿವನ್ನು ಹೆಚ್ಚು ಮಾಡುವುದರ ಹೆಚ್ಚಿಸುತ್ತದೆ. ಜೊತೆಗೆ ದಿನಾಲು 5 ರಿಂದ 6 ಬೆಳ್ಳುಳ್ಳಿ ಮೊಗ್ಗನ್ನು ತಿನ್ನುವ ವ್ಯಕ್ತಿಗೆ ಕೆಲವೇ ಗಂಟೆಗಳಲ್ಲಿ ಅದರ ಪರಿಣಾಮ ಕಾಣಲು ಶುರುವಾಗುತ್ತದೆ.

ಬೆಳ್ಳುಳ್ಳಿ ತಿಂದ ಒಂದು ಗಂಟೆಯಲ್ಲಿ ಅದು ಜಿರ್ನವಾಗಿ ಆರೋಗ್ಯ ವೃದ್ಧಿಸುವ ಕೆಲಸ ಮಾಡುವುದರ ಜೊತೆಯಲ್ಲಿ, ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ.ದೇಹದಲ್ಲಿ ಬೇಡವಾದ ಕಲ್ಮಶ ಪದಾರ್ಥಗಳನ್ನು ಮಲ ಮೂತ್ರದ ಜೊತೆಯಲ್ಲಿ ಹೊರ ಹಾಕುತ್ತದೆ.ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಕ್ಯಾನ್ಸರ್ ಕೋಶಗಳು ಶಕ್ತಿ ಕಳೆದುಕೊಳ್ಳುತ್ತವೆ.

ದಿನಾಲು ತಪ್ಪದೆ ಹುರಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ತಿಂದದ್ದು ಚೆನ್ನಾಗಿ ಜೀರ್ಣವಾಗಿ ನಿಮ್ಮ ಬೊಜ್ಜು ಕರಗುತ್ತದೆ. ಇದರಿಂದ ನಿಮ್ಮ ದೇಹದ ತುಕವೂ ಕಡಿಮೆಯಾಗುತ್ತದೆ.ಇದರ ಜೊತೆಯಲ್ಲಿ ಕೆಮ್ಮು, ಕಫ ಸೇರಿದಂತೆ ಅಸ್ತಮಾ ಕಾಯಿಲೆಗಳನ್ನು ಕಡಿಮೆ ಮಾಡುವ ಗುಣ ಬೆಳ್ಳುಳ್ಳಿ ಹೊಂದಿದ್ದು ರಕ್ತದ ಒತ್ತಡವನ್ನು ಸಹ ನಿಯಂತ್ರಣ ಮಾಡುತ್ತದೆ.
ಪ್ರಥಮ ಚಿಕಿತ್ಸೆ ನೀಡಲಾಗಿತ್ತು

Comments are closed.