ಕರಾವಳಿ

ಹಸುವಿನ ಗಂಗೆ ದೊಗಲಲ್ಲಿ ಬೆಳೆದ ಗಡ್ಡೆ; ನರಕ ಯಾತನೆಯಲ್ಲಿದೆ ಮೂಕ ಪ್ರಾಣಿ

Pinterest LinkedIn Tumblr

ಕುಂದಾಪುರ: ಹಸುವಿಗಾಗಿಯೇ ದಕ, ಉಡುಪಿ ಜಿಲ್ಲೆಯಲ್ಲಿ ದಿನ ನಿತ್ಯ ಗಲಾಟೆ ನಡೆದು ಕೋಮುದ್ವೇಷಕ್ಕೂ ಕಾರಣವಾಗುತ್ತದೆ. ಗೋಸಂಕ್ಷಣೆ ಮಾಡುವ ಸಮಿತಿಗಳೂ ಚಾಲ್ತಿಯಲ್ಲಿದೆ. ಗೋವಿಗಾಗಿ ಕೊಲೆಗಳೂ ನಡೆದಿದೆ. ಹಸು ಆಹಾರ ಪದ್ದತಿ ಎಂದು ಪ್ರತಿಭಟನೆ ನಡೆಸುವ ಬುದ್ದಿಜೀವಗಳೂ ಇದ್ದಾರೆ. ಆದರೆ ಮೂಕ ಪ್ರಾಣಿ ಮೂಕರೋಧನ ಕಣ್ಣೀರು ಒರೆಸುವವರಿಲ್ಲ.

ಜಾನುವಾರುಗಳ ಕತ್ತಿಗೆ ಕುಂಟೆ ಕಟ್ಟಿ ಲಗಾಮು ಹಾಕುವ ರೀತಿ ಗಂಗೆ ದೊಗಲಲ್ಲಿ ಬೆಳೆದ ಗಡ್ಡೆ. ವೃಣ ಹುಣ್ಣಾಗಿ ಗುಳಿಬಿದ್ದು ದೊಗರಾಗಿದೆ. ವೇಧನೆ ಅನುಭವಿಸಲಾಗದೆ ಸದಾ ಸಂಚಾರದಲ್ಲೇ ತೊಡಗಿರುತ್ತದೆ ಹಸು. ಹಸುವಿನ ಯಾತನೆ ಕಂಡರೆ ಕರಳಲ್ಲಿ ಕತ್ತರಿ ಆಡಿಸಿದ ಅನುಭವ. ಯಾರು ಸಾಕಿದ ಹಸುವೋ ಗೊತ್ತಿಲ್ಲ. ಹಕ್ಲಾಡಿ ಗ್ರಾಮ, ಹಕ್ಲಾಡಿ ಗುಡ್ಡೆ, ಯಳೂರು, ತೊಪ್ಲು, ಬಂಟ್ವಾಡಿ ಸಾಲಾಡಿ ಹೀಗೆ ಹಸು ಸದಾ ಸಂಚಾರಿ. ಎಲ್ಲಾದರೂ ಏನಾದರೂ ಸಿಕ್ಕರೆ ತಿಂದು ಮತ್ತೆ ಸಂಚಾರ ಆರಂಭಿಸುತ್ತದೆ. ವೃಣದ ನೋವಿಂದಾ ಹಸುವಿನ ಕಣ್ಣಲ್ಲಿ ಸದಾ ನೀರು ಹರಿಯುತ್ತಿರುತ್ತದೆ.

ಕಳೆದ ಆರು ತಿಂಗಳಿಂದ ಹಕ್ಲಾಡಿ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿರುವ ಹಸು ಯಾರು ಸಾಕಿದ್ದು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಕಟ್ಟಿನಮಕ್ಕಿಯಿಂದ ಹಕ್ಲಾಡಿ ಪರಿಸರದ ಯಾರೋ ಹಸು ವಿಕ್ರಯಿಸಿ ತಂದಿದ್ದು, ಹಸುವಿಗೆ ಕ್ಯಾನ್ಸರ್ ಬಂದಿದೆ ಎಂದು ತಂದವರು ಮತ್ತೆ ಕಟ್ಟಿನಮಕ್ಕಿ ಬಿಟ್ಟುಬಂದಿದ್ದರೂ, ತಂದವರ ಮನೆಗೆ ಹಸು ವಾಪಾಸ್ ಬಂದಿದೆ. ತಂದವರೂ ಹಟ್ಟಿಯಲ್ಲಿ ಹಸು ಕಟ್ಟಿ ಆರೈಕೆ ಮಾಡುತ್ತಿಲ್ಲ. ಹಸು ಕೊಟ್ಟವರೂ ಹಸುವಿನ ಜತನ ಮಾಡದೆ ಇರುವುದರಿಂದ ಹಸು ರಸ್ತೆಗೆ ಬಂದಿದೆ.

ಹಸುವಿನಲ್ಲಿ ಕಾಣಿಸಿಕೊಂಡ ಕಾಯಿಲೆ ಆರಂಭದಲ್ಲೇ ಗೊತ್ತಾಗಿದ್ದರೆ ಸರಿಮಾಡಲು ಸಾಧ್ಯವಿತ್ತು. ಮೈಯಲ್ಲೆಲ್ಲಾ ದಡಾರದ ತರ ಜಡ್ಡು ಗಟ್ಟುತ್ತಿದ್ದು, ಅದು ಉದುರಿ ಹೋಗಲು ಔಷಧ ಕೊಡಬಹುದತ್ತು. ಈಗ ಗಡ್ಡೆ ದೊಡ್ಡದಾಗಿದ್ದರಿಂದ ಶಸ್ತ್ರ ಚಿಕಿತ್ಸೆ ಅವಶ್ಯವಿದೆ ಎಂದು ಪಶುವೈದ್ಯ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ. ಹಸು ಸಾಕಿದವರು ಮಾಹಿತಿ ನೀಡಿ, ಕಟ್ಟಿಹಾಕಿ ಆರೈಕೆ ಮಾಡಿದರೆ ಉಚಿತ ಚಿಕಿತ್ಸೆ ನೀಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.

Comments are closed.