ಕುಂದಾಪುರ: ಕೋಳಿಗಳ ಕಾಲಿಗೆ ಹರಿತವಾದ ಕತ್ತಿ ಕಟ್ಟಿ ಕೋಳಿಗಳ ಮೇಲೆ ಹಣ ಪಣಕ್ಕಿಟ್ಟು ಜೂಜಾಡುತ್ತಿದ್ದ ಕೋಳಿ ಅಂಕಕ್ಕೆ ಬೈಂದೂರು ಪೊಲೀಸರು ದಾಳಿ ನಡೆಸಿದ್ದು ನಾಲ್ವರನ್ನು ಬಂಧಿಸಿದ್ದಾರೆ.
ಬೈಂದೂರು ಗೋಳಿಬೇರು ನಿವಾಸಿ ಕರುಣಾಕರ ಪೂಜಾರಿ(35), ಕೆರ್ಗಾಲು ನಿವಾಸಿ ರಾಮ ಪೂಜಾರಿ(47), ಗೋಳಿಬೇರಿನ ನಿವಾಸಿಗಳಾದ ಮಾಚ ಪೂಜಾರಿ(75), ಅಕ್ಷಯ(20) ಬಂಧಿತ ಆರೋಪಿಗಳಾಗಿದ್ದು ಜಯಶೀಲ ಹಾಗೂ ಇತರರು ಪರಾರಿಯಾಗಿದ್ದಾರೆ.
(ಸಾಂದರ್ಭಿಕ ಚಿತ್ರ)
ಗುರುವಾರ ಸಂಜೆ ಸುಮಾರಿಗೆ ಬೈಂದೂರು ಪಿಎಸ್ಐ ತಿಮ್ಮೇಶ ಬಿ.ಎನ್ ಅವರಿಗೆ ಗೋಳಿಬೇರಿನ ಹಿಕೊಡ್ಲು ಎಂಬಲ್ಲಿ ಕೋಳಿ ಅಂಕ ನಡೆಯುತ್ತಿದೆ ಎಂದು ಖಚಿತ ವರ್ತಮಾನ ಬಂದಿದ್ದು ಅದರಂತೆಯೇ ನ್ಯಾಯಾಲಯದಿಂದ ಅನುಮತಿ ಪಡೆದು ಸಿಬ್ಬಂದಿಗಳ ಜೊತೆ ದಾಳಿ ನಡೆಸಿದ್ದು ಕೋಳಿ ಅಂಕಕ್ಕೆ ಬಳಸಿದ 6 ಕೊಳಿಗಳನ್ನು , ಕೋಳಿಯ ಕತ್ತಿ-2 ಹಾಗೂ ನಗದು ಸಮೇತ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.