ಕರಾವಳಿ

ದಾಖಲೆಯಿಲ್ಲದ ನಗದು ವಶಕ್ಕೆ ಪಡೆದರೆ ಜನರು ಸಮಿತಿಗೆ ಅಪೀಲು ಮಾಡಬಹುದು!

Pinterest LinkedIn Tumblr

ಉಡುಪಿ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ರೂ. 50,000/- ಕ್ಕಿಂತ ಜಾಸ್ತಿ ಮೊತ್ತದ ನಗದನ್ನು ಯಾವುದೇ ದಾಖಲಾತಿ ಇಲ್ಲದೇ ಕೊಂಡೊಯ್ಯುವುದು ಕಂಡು ಬಂದಲ್ಲಿ ಚುನಾವಣಾ ನೀತಿ ಸಂಹಿತೆ ಅನುಷ್ಠಾನ ನಿರತ ಸರ್ಕಾರಿ ಸಿಬ್ಬಂದಿಗಳು ನಿಯಮಾನುಸಾರ ನಗದು ವಶಪಡಿಸಿ ಖಜಾನೆಗೆ ಜಮಾ ಮಾಡಿ ರಶೀದಿ ನೀಡುವರು.

ಈ ಸಂದರ್ಭದಲ್ಲಿ ಬಾಧಿತ ವ್ಯಕ್ತಿಗಳು ಸೂಕ್ತ ದಾಖಲಾತಿಗಳೊಂದಿಗೆ (ಆಧಾರ್ ಕಾರ್ಡ್ ಪ್ರತಿ, ಎಟಿಎಂ ಸ್ಲಿಪ್, ಬ್ಯಾಂಕ್ ಪಾಸ್ ಬುಕ್‍ನ ಪ್ರತಿ ಸೇರಿದಂತೆ ಇತರ ವ್ಯವಹಾರದ ಮಾಹಿತಿ ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಉಡುಪಿ ಇವರ ಅಧ್ಯಕ್ಷತೆಯಲ್ಲಿನ ಸಮಿತಿಗೆ ಅಪೀಲು ಸಲ್ಲಿಸಬಹುದಾಗಿದ್ದು, ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ನಗದು ಬಿಡುಗಡೆ ಬಗ್ಗೆ ಕ್ರಮ ವಹಿಸಲಾಗುವುದು.

ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಸಚಿನ್ ಕಾಮತ್, ಅಸಿಸ್ಟೆಂಟ್ ಕಮೀಷನರ್, ಸೆಂಟ್ರಲ್ ಟ್ಯಾಕ್ಸ್ ದೂ. ಸಂ: 9741735301 ಇವರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.