ಸುರತ್ಕಲ್: ಭಾರತೀಯ ರೆಡ್‌ಕ್ರಾಸ್ ಕೇವಲ ರಕ್ತದಾನಕ್ಕೆ ಮಾತ್ರ ಸೀಮಿತವಾದ ಸಂಸ್ಥೆಯಲ್ಲ. ಇತರ ಅನೇಕ ಮಾನವೀಯ ಸೇವೆಗಳನ್ನು ರೆಡ್‌ಕ್ರಾಸ್ ಸಂಸ್ಥೆ ನಡೆಸುತ್ತಿದೆ. ರೆಡ್‌ಕ್ರಾಸ್ ಸಂಸ್ಥೆಯಿಂದ ಬೇರೆ ಬೇರೆ ಪ್ರಾಜೆಕ್ಟ್‌ಗಳಿವೆ. ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವುದು. ಸರಕಾರದಿಂದ ಸ್ಪಂದನ ಸಿಗದಿದ್ದ ಸಂದರ್ಭ ರೆಡ್‌ಕ್ರಾಸ್ ಸಂಸ್ಥೆ ಮುಂದೆ ನಿಂತು ಕೆಲಸ ಮಾಡಿದೆ ಎಂದು ಮಂಗಳೂರಿನ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಸಿ.ಎ. ಶಾಂತರಾಮಶೆಟ್ಟಿ ಹೇಳಿದರು.
ಸುರತ್ಕಲ್ ಬಂಟರ ಸಂಘ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮಂಗಳೂರು, ಜಿಸಿಐ ಸುರತ್ಕಲ್ ಸಹಭಾಗಿತ್ವದಲ್ಲಿ ಸುರತ್ಕಲ್ ಬಂಟರಭವನದಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಿಬಿರವನ್ನು ಉದ್ಘಾಟಿಸಿದ ಸುರತ್ಕಲ್ ಪದ್ಮಾವತಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಸತೀಶ್ ಶೆಟ್ಟಿ ಮಾತನಾಡಿ, ರಕ್ತದಾನಕ್ಕಿಂತ ಮಿಗಿಲಾದ ದಾನವಿಲ್ಲ. ರಕ್ತದಾನದಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ರಕ್ತದಾನ ಮೊದಲಾದ ಸೇವಾ ಚಟುವಟಿಕೆಗಳಿಗೆ ಸುರತ್ಕಲ್ ಬಂಟರ ಸಂಘ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಎಸ್.ಪೂಂಜಾ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಜೆಎಸ್‌ಐ ಅಧ್ಯಕ್ಷ ಲೋಕೇಶ್ ರೈ ಶುಭ ಹಾರೈಸಿದರು. ದಿವಾಕರ ಸಾಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರತ್ಕಲ್ ಬಂಟರ ಸಂಘದ ಉಪಾಧ್ಯಕ್ಷ ನವೀನ್ ಶೆಟ್ಟಿ ಪೆಡ್ರೆ ಉಪಸ್ಥಿತರಿದ್ದರು. ಸುಧಾಕರ್ ಪೂಂಜ ಸ್ವಾಗತಿಸಿದರು. ರಾಜೇಶ್ವರಿ ಡಿ ಶೆಟ್ಟಿ, ಸತೀಶ್ ಶೆಟ್ಟಿ ಬಾಳಿಕೆ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಶೆಟ್ಟಿ ವಂದಿಸಿದರು.
Comments are closed.