ಕರಾವಳಿ

ಈ ರಸದಿಂದ ತಯಾರಿಸಿದ ಸಕ್ಕರೆಯು ಆರೋಗ್ಯಕ್ಕೆ ಉತ್ತಮ, ಯಾಕೆ?

Pinterest LinkedIn Tumblr

ನಾವು ಸಾಮಾನ್ಯವಾಗಿ ಹೊಟ್ಟೆ ಹಸಿದಾಗ ಹಣ್ಣನ್ನು ತಿನ್ನುತ್ತೇವೆ ಇಲ್ಲವೆ ಹಣ್ಣಿನ ರಸವನ್ನು ಸೇರಿಸುತ್ತೇವೆ. ಇದು ಆರೋಗ್ಯಕ್ಕೆ ಒಳ್ಳೆಯದು. ಆದರೆ ನಾವು ಹಸಿದ ಹೊಟ್ಟೆಯಲ್ಲಿ ಕಬ್ಬಿನ ರಸವನ್ನು ಸೇವಿಸುವುದು ಸೂಕ್ತವಲ್ಲ.. ಇದು ಏಕೆ ಸರಿ ಇಲ್ಲ? ಹಾಗಾದರೆ ಕಬ್ಬಿನ ರಸದ ಮಹತ್ವವೇನು ಎಂಬುದನ್ನು ತಿಳಿದುಕೊಳ್ಳೋಣ.

ಎಳನೀರು ಆರೋಗ್ಯಕ್ಕೆ ತುಂಬಾ ತಂಪು. ಇದನ್ನು ಕಾಯಿಲೆ ಬಂದಾಗ ಹೊಟ್ಟೆ ಹಸಿದಾಗ ಯಾವಾಗ ಬೇಕಾದರೂ ಸೇವಿಸಬಹುದು. ಆದರೆ ಕಬ್ಬಿನ ರಸ ಇದಕ್ಕೆ ಕೊಂಚ ವಿರುದ್ಧ. ಇದು ನಮ್ಮ ದೇಹಕ್ಕೆ ಉಷ್ಣ… ಇದನ್ನು ನಾವು ನಮ್ಮ ಹೊಟ್ಟೆಯೂ ತುಂಬಿರುವಾಗ ಅಥವಾ ಊಟದ ನಂತರ ಸೇವಿಸಿದರೆ ಒಳ್ಳೆಯದು.

ಕಬ್ಬಿನ ರಸ ನಮ್ಮ ದೇಹದ ಉಷ್ಣತೆಯನ್ನು ಸ್ವಲ್ಪ ಹೆಚ್ಚಿಸುತ್ತದೆ… ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಆದ್ದರಿಂದ ಊಟ ಆದ ನಂತರ ಕಬ್ಬಿನ ರಸ ಸೇವಿಸುವುದು ಸೂಕ್ತ. ಇದರಲ್ಲಿ ವಿಟಮಿನ್ ಇ, ವಿಟಮಿನ್ ಸಿ ಹಾಗೂ ಅಪಾರ ಪ್ರಮಾಣದ ಖನಿಜಗಳು ಇರುತ್ತವೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಕಬ್ಬಿನ ರಸದಲ್ಲಿರುವ ಸಿಹಿ ತುಂಬಾ ಆರೋಗ್ಯಕರವಾದದ್ದು.ಸಾಮಾನ್ಯ ಸಕ್ಕರೆಯಲ್ಲಿ ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದರೆ ಕಬ್ಬಿನ ರಸವು ತುಂಬಾ ಪರಿಶುದ್ಧವಾದದ್ದು. ಇದರಿಂದ ತಯಾರಿಸಿದ ಸಕ್ಕರೆಯು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.

ಚಳಿಗಾಲದಲ್ಲಿ ಕಬ್ಬಿನ ರಸವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಾಗಿದೆ. ಚಳಿಗಾಲದಲ್ಲಿ ಕಬ್ಬಿನ ರಸವನ್ನು ಸೇವಿಸುವುದರಿಂದ ಈ ಕಾಲದಲ್ಲಿ ಬರಬಹುದಾದ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ.

ಆದರೆ ಅತಿಯಾಗಿ ಕಬ್ಬಿನ ರಸವನ್ನು ಸೇವಿಸುವುದು ಒಳ್ಳೆಯದಲ್ಲ. ನೀವು ದಿನಕ್ಕೆ ಕೇವಲ ಒಂದು ಕಪ್ ಕಬ್ಬಿನ ರಸವನ್ನು ಮಾತ್ರ ಸೇವಿಸಬೇಕು. ಉಷ್ಣತೆಯ ಶರೀರವಿರುವವರು, ಇತರೆ ಕಾಯಿಲೆ ಇರುವವರು ಕಬ್ಬಿನ ರಸವನ್ನು ಅತಿ ಹೆಚ್ಚು ಸೇವಿಸುವುದು ಸೂಕ್ತವಲ್ಲ…

Comments are closed.