ಮಂಗಳೂರು : ಸುಮಾರು 5 ಶತಮಾನಗಳ ಇತಿಹಾಸ ಇರುವ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿ ಬೈದರ್ಕಳ ನೇಮೋತ್ಸವವು ಬುಧವಾರ ಮಾ. 20ರಂದು ನೂತನ ಕಡಬ ತಾಲೂಕಿನ ಎಣ್ಮೂರು ಆದಿ ಗರಡಿಯಲ್ಲಿ ಜರುಗಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಂಪ್ರದಾಯದಂತೆ ಸುಗ್ಗಿಯ ಪೂವೆಯಂದು ನೇಮೋತ್ಸವ ಆರಂಭವಾಗಿ ಹುಣ್ಣಿಮೆಯಂದು ಕೊನೆಗೊಳ್ಳಲಿದೆ.
ಮಾ. 13ರಂದು ಗೊನೆ ಮೂಹೂರ್ತ ನಡೆದು ಮಾ. 18ರಂದು ಉಳ್ಳಾಕ್ಲ ಹಾಗೂ ಕಾಜು ಕುಜುಂಬ ನೇಮ, ಮಾ.19ರಂದು ಇಷ್ಟ ದೇವತೆ ನೇಮೋತ್ಸವ ಜರುಗಿ ಮಾ.20ರಂದು ಬೆಳಗ್ಗೆ ನಾಗತಂಬಿಲ, ಮಧ್ಯಾಹ್ನ 1 ಗಂಟೆಗೆ ಕಟ್ಟಬೀಡಿನಿಂದ ಭಂಡಾರ ಹೊರಡಿ ನೇತ್ರಾದಿ ಗರಡಿಯಲ್ಲಿ ದರ್ಶನ, ರಾತ್ರಿ ಗಂಟೆ 8 ಕ್ಕೆ ಸರಿಯಾಗಿ ಬೈದೆರುಗಳು ಗರಡಿ ಇಳಿಯುವುದು, ರಾತ್ರಿ ಗಂಟೆ 2.30 ಕ್ಕೆ ಕಿನ್ನಿದಾರು ಗರಡಿ ಇಳಿದು ರಂಗಸ್ಥಳ ಪ್ರವೇಶ.
ಮಾ. 21ರಂದು ಬೆಳಗ್ಗೆ 4 ಗಂಟೆಗೆ ಎಣ್ಮೂರು ಕಟ್ಟಬೀಡು ಮನೆಗೆ ಬೈದರುಗಳು ಹಾಲು ಕುಡಿಯಲು ಬಂದು ಬೀಡಿಗೆ ಕಾಣಿಕೆ ಅರ್ಪಿಸುವುದು, ಬೆಳಗ್ಗೆ ಗಂಟೆ 6 ಕ್ಕೆ ಕೋಟಿ ಚೆನ್ನಯ್ಯ ದರ್ಶನ ಪಾತ್ರಿಗಳ ಮತ್ತು ಬೈದರುಗಳ ಸೇಟು, ಬೆಳಗ್ಗೆ ಗಂಟೆ 7ಕ್ಕೆ ಬೈದರುಗಳಲ್ಲಿ ಹರಿಕೆ ಗಂಧ ಪ್ರಸಾದ ಮತ್ತು ತುಲಾಭಾರ ನಡೆಯಲಿದೆ.
ಮಾ. 20ರಂದು ಮಧ್ಯಾಹ್ನ ಹಾಗೂ ರಾತ್ರಿ ಶ್ರೀ ಕ್ಷೇತ್ರದಲ್ಲಿ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಎಣ್ಮೂರು ಕಟ್ಟಬೀಡು ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕ್ಷೇತ್ರ ವಿಶೇಷತೆ;
1. ಎಣ್ಮೂರು ಮೂಲ ಆದಿ ಗರಡಿಯ ಪಕ್ಕದಲ್ಲಿ ಸುಮಾರು 7 ಅಡಿ ಚೌಕ, 15 ಅಡಿ ಎತ್ತರದ ಕೋಟಿ ಚೆನ್ನಯ್ಯರ ಅವಳಿ ಸಮಾಧಿ ಇದೆ. ಸಮಾಧಿಯ ಪಕ್ಕದಲ್ಲಿ ಅವರ ಅಯುಧಗಳನ್ನು ಮಣ್ಣಿನಡಿಯಲ್ಲಿ ಹೂತಿಡಲಾಗಿದೆ. ಸದ್ರಿ ಸ್ಥಳದ ಹುತ್ತದಲ್ಲಿ ವಾಶ್ತವ್ಯ ನಾಗ ಸದಾ ಇದೆ.
2. ಅವಳಿ ವೀರರ ಕಳೇಬರಗಳನ್ನು ಇಟ್ಟಿದ್ದ ಮಂಜಲ್‌ಪಾದೆ
3. ಎಣ್ಮೂರು- ಪಂಜ ವಿವಾದಿತ ಗಡಿ ಕಲ್ಲು
4. ಕೆಮ್ಮಲೆಯ ನಾಗಬ್ರಹ್ಮರ ಗುಡಿ
5. ಹತ್ತಿರದ ಎಡಮಂಗಲ ಗ್ರಾಮದ ದೋಳ ಕಿನ್ನಿದಾರು ವಾಸವಿದ್ದ ಶತಮಾನಗಳ ಹಿಂದಿನ ಪುರಾತನ ಮುಳಿ ಹುಲ್ಲಿನ ಮನೆ ಈಗಲೂ ಇದ್ದು ಅಲ್ಲಿ ಕೋಟಿ ಚೆನ್ನಯ್ಯರು ಕುಳಿತು ಹಾಲು ಕುಡಿದ ತೂಗು ಉಯ್ಯಾಲೆ ಮತ್ತು ಇತರ ಸಾಕ್ಷಾದಾರ ಇಂದಿಗೂ ಇವೆ.
ವಿ. ಸೂ; ಪರ್ತಕರ್ತರಿಗಾಗಿ ಆ ದಿನ ನೇಮಕ್ಕೆ ಬರಲು ಇಚ್ಚಿಸುವ ಪತ್ರಕರ್ತರಿಗೆ ಮಾ. 20ರಂದು ವಾಹನದ ವ್ಯವಸ್ಥೆಯನ್ನು ಮಾಡಲಾಗುವುದು. ಆಸಕ್ತರು ಭಾಸ್ಕರ ರೈ ಕಟ್ಟಬೀಡು ಇವರನ್ನು (ಮೊ.9741158710) ಸಂಪರ್ಕಿಸುವುದು. ಮಾ. 18ರೊಳಗಾಗಿ ತಮ್ಮ ಬರುವಿಕೆಯನ್ನು ತಿಳಿಸಬೇಕಾಗಿ ವಿನಂತಿ.
Comments are closed.