ರಾಷ್ಟ್ರೀಯ

2025ರ ನಂತರ ಪಾಕಿಸ್ತಾನ ಭಾರತದ ಭಾಗವಾಗಿರಲಿದೆ: ಆರ್ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್

Pinterest LinkedIn Tumblr

ನವದೆಹಲಿ: 2025ರ ನಂತರ ಪಾಕಿಸ್ತಾನ ಭಾರತದ ಭಾಗವಾಗಿರಲಿದೆ. ಇನ್ನು ಆರೇಳು ವರ್ಷಗಳಲ್ಲಿ ಕರಾಚಿ, ಲಾಹೋರ್, ರಾವಲ್ಪಿಂಡಿ ಮತ್ತು ಸೈಲಾಕೋಟ್ ಭಾರತೀಯರು ಮನೆ ಖರೀದಿ ಮತ್ತು ವ್ಯವಹಾರ ನಡೆಸಬಹುದಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆರ್ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಹೇಳಿದ್ದಾರೆ.

1947ಕ್ಕೂ ಮುನ್ನ ಪಾಕಿಸ್ತಾನ ಇರಲಿಲ್ಲ. 1945ರವರೆಗೂ ಅದು ಹಿಂದೂಸ್ತಾನವಾಗಿತ್ತು. ಇದೇ ಪರಿಸ್ಥಿತಿ 2025ರ ನಂತರ ನಿರ್ಮಾಣವಾಗಲಿದ್ದು ಪಾಕಿಸ್ತಾನ ಭಾರತದ ಭಾಗವಾಗಲಿದೆ ಎಂದರು.

ಯೂರೋಪಿಯನ್ ಯೂನಿಯನ್ ತರ ಅಖಂಡ ಭಾರತ ಸಹ ನಿರ್ಮಾಣವಾಗಲಿದ್ದು ಇನ್ನು ದೆಹಲಿಯಲ್ಲೇ ಕುಳಿತ್ತು ಬಾಂಗ್ಲಾದೇಶದಲ್ಲಿ ಸರ್ಕಾರ ನಡೆಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

Comments are closed.