ಕರಾವಳಿ

ಬೇಸಿಗೆಯಲ್ಲಿ ಸೇವಿಸುವ ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುವುದು ಖಚಿತ

Pinterest LinkedIn Tumblr

ಬೇಸಿಗೆ ಅನ್ನುವುದು ಬಂದೇ ಬಿಟ್ಟಿದೆ. ವಿಶ್ವದಾದ್ಯಂತ ಹವಾಮಾನ ವೈಪರಿತ್ಯದಿಂದಾಗಿ ಪ್ರತೀ ವರ್ಷದಂತೆ ಈ ವರ್ಷವು ಬಿಸಿಲಿನ ತಾಪವು ಹೆಚ್ಚಾಗಿಯೇ ಇದೆ. ಮಾರ್ಚ್ ತಿಂಗಳಲ್ಲೇ ನಮಗೆ ಹೊರಗಡೆ ಹೋಗುವ ವೇಳೆ ಬಿಸಿಲಿನ ತಾಪದ ಅನುಭವ ಆಗುವುದು. ಇನ್ನು ಒಂದು ತಿಂಗಳಿಗಿಂತಲೂ ಹೆಚ್ಚು ಬೇಸಿಗೆ ಸಮಯ. ಹೀಗಾಗಿ ಬೇಸಿಗೆ ಸಮಯದಲ್ಲಿ ಬಿಸಿಲಿನಿಂದಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಅತಿಯಾದ ಉಷ್ಣತೆಯನ್ನು ಸಹಿಸಿಕೊಳ್ಳಲು ನಮ್ಮ ದೇಹಕ್ಕೆ ತುಂಬಾ ಕಷ್ಟ ಆಗುವುದು. ಈ ಸಮಯದಲ್ಲಿ ನಾವು ಕೆಲವೊಂದು ಕ್ರಮಗಳನ್ನು ತೆಗೆದುಕೊಂಡು ಬೇಸಿಗೆಯಲ್ಲಿ ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ ಆಗಿರುವುದು.

ಆಹಾರ ಕ್ರಮದಲ್ಲಿ ನೀವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಆಗ ಬೇಸಿಗೆಯಲ್ಲಿ ಸಂಪೂರ್ಣವಾಗಿ ಫಿಟ್ ಇರಬಹುದು. ಕೆಲವೊಂದು ಆಹಾರ ಸೇವನೆಯಿಂದ ದೇಹವು ತುಂಬಾ ಉತ್ತಮ ಎನ್ನುವಂತಹ ಭಾವನೆ ಹೊಂದುವುದು.

ಇದೇ ವೇಳೆ ಬೇಸಿಗೆಯಲ್ಲಿ ನಾವು ಸೇವಿಸುವಂತಹ ಕೆಲವೊಂದು ಆಹಾರಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದರಿಂದ ನಾವು ಇಂತಹ ಆಹಾರದಿಂದ ದೂರವಿದ್ದು, ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರಲ್ಲಿ ಕಾಯಿಲೆಗಳು ಬರುವುದು ಖಚಿತ.

ಅತ್ಯಂತ ಉಷ್ಣತೆಯಿರುವಂತಹ ಸಮಯದಲ್ಲಿ ನಾವು ಯಾವ ಆಹಾರವನ್ನು ದೂರವಿರಿಸಬೇಕು ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ.

ಕರಿದ ಜಂಕ್ ಫುಡ್
ಜಂಕ್ ಫುಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಮಗೆ ತಿಳಿದಿರುವಂತಹ ವಿಚಾರ ಆಗಿದೆ. ಬೇಸಿಗೆಯಲ್ಲಿ ಇದನ್ನು ಕಡೆಗಣಿಸಬೇಕು ಎಂದರೆ ಅದರಲ್ಲಿ ಯಾವುದೇ ಅಚ್ಚರಿಯಿಲ್ಲ. ಬೇಸಿಗೆಯಲ್ಲಿ ಕರಿದಿರುವಂತಹ ಜಂಕ್ ಫುಡ್ ಸೇವನೆ ಮಾಡುವುದರಿಂದ ಆಹಾರ ವಿಷವಾಗುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಕರಿದ ಆಹಾರದಲ್ಲಿ ಅತಿಯಾದ ಎಣ್ಣೆಯಂಶವು ಇರುವುದು. ಇದರಿಂದ ಚರ್ಮವು ತುಂಬಾ ಎಣ್ಣೆಯಿಂದ ಕೂಡಿರುವುದು ಮತ್ತು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಬೇಸಿಗೆಯಲ್ಲಿ ಜಂಕ್ ಫುಡ್ ಸೇವನೆ ಮಾಡಿದರೆ ಅದನ್ನು ಕರಗಿಸಲು ದೇಹವು ತುಂಬಾ ಕಷ್ಟಪಡಬೇಕಾಗುತ್ತದೆ. ಈ ಕಾರಣದಿಂದಾಗಿ ಬೇಸಿಗೆ ಸಮಯದಲ್ಲಿ ಜಂಕ್ ಫುಡ್ ನ್ನು ಕಡೆಗಣಿಸುವುದು ತುಂಬಾ ಒಳ್ಳೆಯ ವಿಚಾರ ಆಗಿದೆ.

ಮಾಂಸ
ಜಂಕ್ ಫುಡ್ ಸೇವನೆ ಮಾಡಬಾರದು ಎನ್ನುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಆದರೆ ಆಹಾರ ಕ್ರಮದಲ್ಲಿ ಮಾಂಸ ಬಳಸಿಕೊಳ್ಳಬೇಡಿ ಎನ್ನುವುದು ಸರಿಯಲ್ಲ ಎಂದು ಕೆಲವರು ಹೇಳಬಹುದು. ಆದರೆ ವಾಸ್ತವಾಂಶ ಏನೆಂದರೆ ಮಾಂಸದಲ್ಲಿ ಹೆಚ್ಚಿನ ಪ್ರೋಟೀನ್ ಅಂಶವಿದ್ದು, ಬೇಸಿಗೆ ಕಾಲದಲ್ಲಿ ದೇಹವು ಪ್ರೋಟೀನ್ ಅಂಶವನ್ನು ಹೀರಿಕೊಳ್ಳಲು ತುಂಬಾ ಶ್ರಮ ವಹಿಸಬೇಕಾಗುತ್ತದೆ.ಸಮುದ್ರ ಆಹಾರದಿಂದಾಗಿ ಬೇಸಿಗೆ ಕಾಲದಲ್ಲಿ ಆಹಾರ ವಿಷವಾಗುವಂತಹ ಸಾಧ್ಯತೆಯು ಹೆಚ್ಚಾಗಿ ಇರುವುದು. ಇದರಿಂದ ಬೇಸಿಗೆಯಲ್ಲಿ ನೀವು ಸಮುದ್ರ ಆಹಾರ ಕಡೆಗಣಿಸಿ. ಕೆಂಪು ಮಾಂಸವನ್ನು ಸೇವನೆ ಮಾಡಿದ ಬಳಿಕ ಅದು ದೇಹದಲ್ಲಿ ಉಷ್ಣತೆ ಹೆಚ್ಚು ಮಾಡುವುದು. ಇದರಿಂದ ಬೇಸಿಗೆ ಕಾಲದಲ್ಲಿ ನೀವು ಮಾಂಸ ಸೇವನೆ ಮಾಡುವುದು ಸರಿಯಾದ ನಿರ್ಧಾರವಲ್ಲ.

ಹಾಲಿನ ಉತ್ಪನ್ನಗಳು
ಒಂದು ಲೋಟ ತಂಪಾದ ಹಾಲು ಬೇಸಿಗೆ ಕಾಲದಲ್ಲಿ ದೇಹಕ್ಕೆ ತುಂಬಾ ಆರಾಮ ನೀಡಬಹುದು. ಆದರೆ ಒಂದು ಸಲ ಹಾಲಿನ ತಂಪು ಹಾರಿದ ಬಳಿಕ ಹಾಲು ದೇಹವನ್ನು ಬಿಸಿ ಮಾಡಲು ಆರಂಭಿಸುವುದು. ಬೆಣ್ಣೆ ಮತ್ತು ಚೀಸ್ ಕೂಡ ದೇಹಕ್ಕೆ ಇದೇ ರೀತಿಯ ಪರಿಣಾಮ ಉಂಟು ಮಾಡುವುದು. ಹಾಲಿನ ಉತ್ಪನ್ನಗಳು ನಿಮ್ಮ ಗಂಟಲಿನ ಮೂಲಕ ಹೊಟ್ಟೆಯ ಒಳಗಡೆ ಸಾಗುವುದು. ಇದರ ಬಳಿಕ ದೇಹವನ್ನು ಬಿಸಿ ಮಾಡುವುದು. ಹಾಲಿನ ಉತ್ಪನ್ನಗಳು ದೇಹದಲ್ಲಿ ಉಂಟು ಮಾಡುವಂತಹ ಉಷ್ಣತೆಯು ಬೇರೆ ಮಸಾಲೆಗಳಂತೆ ಇರುವುದಿಲ್ಲ. ನಿಮಗೆ ಅತಿಯಾಗಿ ಬೆವರು ಬರುವುದಿಲ್ಲ. ಆದರೆ ಈ ಉಷ್ಣತೆಯಿಂದಾಗಿ ಹೊಟ್ಟೆಯ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದ ದೀರ್ಘಕಾಲದ ತನಕ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗುವುದು.

ಮಾವಿನ ಹಣ್ಣು
ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನದೆ ಮತ್ತೆ ಇನ್ನು ಯಾವಾಗ ತಿನ್ನಬೇಕು ಎನ್ನುವ ಪ್ರಶ್ನೆ ಇದನ್ನು ನೋಡಿದ ಕೂಡಲೇ ನಿಮ್ಮ ಮನದಲ್ಲಿ ಮೂಡಬಹುದು. ಇದು ಬೇಸಿಗೆಯಲ್ಲಿ ಸಿಗುವಂತಹ ಹಣ್ಣು. ಆದರೆ ನಾವು ತಾಜಾ ಮಾವಿನ ಹಣ್ಣನ್ನು ತಿನ್ನಬೇಡಿ ಎಂದು ಖಂಡಿತವಾಗಿಯೂ ಹೇಳುವುದಿಲ್ಲ. ಆದರೆ ಮಾವಿನ ಹಣ್ಣನ್ನು ಅತಿಯಾಗಿ ಸೇವನೆ ಮಾಡಬೇಡಿ. ಒಂದು ದಿನಕ್ಕೆ ಒಂದು ಮಾವಿನ ಹಣ್ಣು ತಿಂದರೆ ಅದರಿಂದ ದೇಹಕ್ಕೆ ಕೂಡ ಒಳ್ಳೆಯದು. ಆದರೆ ನೀವು ಒಂದಕ್ಕಿಂತ ಹೆಚ್ಚು ಸೇವನೆ ಮಾಡಿದರೆ ಅದರಿಂದ ಹೊಟ್ಟೆಯ ಮೇಲೆ ಪರಿಣಾಮ ಬೀರುವುದು. ಅತಿಯಾಗಿ ಮಾವಿನ ಹಣ್ಣು ಸೇವನೆ ಮಾಡುವುದರಿಂದ ಜುಲಾಬು ಉಂಟಾಗಬಹುದು ಮತ್ತು ದೇಹದಲ್ಲಿ ಉಷ್ಣತೆ ಹೆಚ್ಚಾದ ಪರಿಣಾಮವಾಗಿ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು.

ಮಸಾಲೆ
ಬೇಸಿಗೆ ಕಾಲದಲ್ಲಿ ನಮಗೆ ಹೊರಗಿನ ಬಿಸಿಯನ್ನೇ ತಡೆದುಕೊಳ್ಳಲು ಸಾಧ್ಯ ಆಗುವುದಿಲ್ಲ. ಈ ಕಾರಣದಿಂದಾಗಿ ನಾವು ಸೇವಿಸುವಂತಹ ಆಹಾರ ಕ್ರಮದಲ್ಲಿ ಮಸಾಲೆ ಕಡಿಮೆ ಬಳಕೆ ಮಾಡಬೇಕು. ಹೆಚ್ಚು ಮಸಾಲೆ ಸೇವನೆ ಮಾಡುವುದರಿಂದ ಹೊಟ್ಟೆಗೆ ಇದನ್ನು ಜೀರ್ಣ ಮಾಡಿಕೊಳ್ಳಲು ತುಂಬಾ ಕಷ್ಟ ಆಗುವುದು. ಬೇಸಿಗೆಯಲ್ಲಿ ನೀವು ತುಂಬಾ ಲಘುವಾದ ತಾಜಾ ಆಹಾರ ಸೇವಿಸಿ. ನೀವು ಮಸಾಲೆ ಭರಿತ ಆಹಾರ ಸೇವನೆ ಮಾಡುತ್ತಿದ್ದರೆ ಆಗ ಇದನ್ನು ಮಿತವಾಗಿ ಸೇವಿಸಿ. ಬೇಸಿಗೆಯಲ್ಲಿ ನಿಯಮಿತವಾಗಿ ಮಸಾಲೆ ಭರಿತ ಆಹಾರ ಸೇವನೆ ಮಾಡಬೇಡಿ.

ಚಪಾತಿ
ಕೆಲವೊಂದು ಕಡೆಯಲ್ಲಿ ಪ್ರತಿನಿತ್ಯ ಚಪಾತಿ ಸೇವನೆ ಮಾಡುವರು. ಮೂರು ಹೊತ್ತಿಗೂ ಚಪಾತಿ ಬೇಕೇಬೇಕು. ಆದರೆ ಬೇಸಿಗೆಯಲ್ಲಿ ಚಪಾತಿಯನ್ನು ಕಡೆಗಣಿಸಬೇಕು. ಭಾರತದಲ್ಲಿ ಚಪಾತಿ ಸೇವನೆ ಸಾಮಾನ್ಯ ಆಗಿರುವುದು. ಆದರೆ ಚಪಾತಿಯು ಜೀರ್ಣಕ್ರಿಯೆಗೆ ತುಂಬಾ ಕಠಿಣವಾಗಿರುವುದು ಎಂದು ಅರ್ಥ ಮಾಡಿಕೊಳ್ಳಬೇಕು. ಗೋಧಿಯಿಂದ ಮಾಡಲ್ಪಟ್ಟಿರುವಂತಹ ಚಪಾತಿಯು ದೇಹದಲ್ಲಿ ಉಷ್ಣತೆ ಹೆಚ್ಚು ಮಾಡುವುದು. ಇದರಿಂದಾಗಿ ಜೀರ್ಣಕ್ರಿಯೆ ಕಾರ್ಯವು ತುಂಬಾ ಕಷ್ಟವಾಗುವುದು. ಬೇಸಿಗೆಯಲ್ಲಿ ಚಪಾತಿಗೆ ಬದಲು ಅನ್ನ ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

ಐಸ್ ಕ್ರೀಮ್
ಐಸ್ ಕ್ರೀಮ್ ಜೋರಾಗಿ ಸುರಿಯುವಂತಹ ಮಳೆಯಲ್ಲಿ ತಿನ್ನಲು ಆಗುತ್ತದೆಯಾ? ಬೇಸಿಗೆಯ ಬಿಸಿಗೆ ತಂಪಾದ ಐಸ್ ಕ್ರೀಮ್ ತಿನ್ನುತ್ತಲಿದ್ದರೆ ಆಗ ಹೊಟ್ಟೆಯು ತಣ್ಣಗೆ ಆಗುವುದು ಎಂದು ನಾವು ಭಾವಿಸಿದ್ದೇವೆ. ಆದರೆ ಇದು ತಂಪಾಗಿದ್ದರೂ ಇದರಲ್ಲಿ ಕೆಲವೊಂದು ಅಂಶಗಳು ದೇಹವನ್ನು ಬಿಸಿ ಮಾಡುವಂತಹ ಗುಣ ಹೊಂದಿರುವುದು. ಬೇಸಿಗೆಯಲ್ಲಿ ಹೆಚ್ಚಾಗಿ ಜನರು ಐಸ್ ಕ್ರೀಮ್ ತಿನ್ನುವುದನ್ನು ಇಷ್ಟ ಪಡುವರು. ಯಾಕೆಂದರೆ ರಜಾ ಸಮಯದಲ್ಲಿ ತಿರುಗಾಡಲು ಹೋಗುವುದು ಹೆಚ್ಚು. ಅಲ್ಲಿ ಸೆಕೆ ತಡೆಯಲು ಆಗದೆ ಐಸ್ ಕ್ರೀಮ್ ಸೇವನೆಗೆ ಮೊರೆ ಹೋಗುವರು. ಬೇಸಿಗೆಯಲ್ಲಿ ತಂಪಾದ ಪಾನೀಯ ಸೇವನೆ ಅಧಿಕ ಮಟ್ಟದಲ್ಲಿ ಇರುವುದು. ಅದಾಗ್ಯೂ, ಸತ್ಯ ಏನೆಂದರೆ ತಂಪಾದ ಪಾನೀಯಗಳು ಬೇಗನೆ ದೇಹವನ್ನು ಬಿಸಿ ಮಾಡುವುದು. ಇದರಿಂದ ಈ ರೀತಿಯ ಆಹಾರವನ್ನು ತ್ಯಜಿಸುವುದು ತುಂಬಾ ಒಳ್ಳೆಯದು.

ಸಾಸ್
ಮಕ್ಕಳಿಗೆ ಸಾಸ್ ಅಂದರೆ ತುಂಬಾ ಇಷ್ಟ. ಇದನ್ನು ಅವರನ್ನು ಹೆಚ್ಚಾಗಿ ಪ್ರತಿಯೊಂದು ಆಹಾರದಲ್ಲಿ ಬಳಸಿಕೊಳ್ಳುವರು. ಆದರೆ ಇದು ಒಳ್ಳೆಯದಲ್ಲ. ಬೇಸಿಗೆ ಸಮಯದಲ್ಲಿ ನೀವು ಸಾಸ್ ಗೆ ಗುಡ್ ಬೈ ಹೇಳಬೇಕು. ಯಾಕೆಂದರೆ ಇದರಲ್ಲಿ 360ರಷ್ಟು ಅಧಿಕ ಕ್ಯಾಲರಿ ಇದೆ. ಇದರಿಂದ ನಿಮಗೆ ತುಂಬಾ ಬಳಲಿಕೆ ಆಗಬಹುದು. ನೀವು ಸಾಸ್ ಬದಲಿಗೆ ಕೆಲವೊಂದು ನೈಸರ್ಗಿಕವಾಗಿ ಸಿಗುವ ಹಣ್ಣು ಹಾಗೂ ತರಕಾರಿ ಬಳಕೆ ಮಾಡಿಕೊಳ್ಳಿ. ಸಾಸ್ ಗೆ ಟೊಮೆಟೊವು ಒಳ್ಳೆಯ ಪರ್ಯಾಯ ಎಂದು ಪರಿಗಣಿಸಲಾಗಿದೆ.

ನಾವು ನಿಮಗೆ ಇದುವರೆಗೆ ಬೇಸಿಗೆಯಲ್ಲಿ ಕಡೆಗಣಿಸಬೇಕಾದ ಆಹಾರದ ಬಗ್ಗೆ ತಿಳಿಸಿಕೊಟ್ಟಿದ್ದೇವೆ. ಇನ್ನು ಮುಂದೆ ನೀವು ಬೇಸಿಗೆಯಲ್ಲಿ ಸೇವಿಸಬಹುದಾದ ಉತ್ತಮ ಆಹಾರದ ಬಗ್ಗೆ ತಿಳಿಯಿರಿ. ಲ್ಯುಟೆಯಿನ್ ಮತ್ತು ಜೀಕ್ಸಾಂಥಿನ್ ಎನ್ನುವ ಎರಡು ಆ್ಯಂಟಿಆಕ್ಸಿಡೆಂಟ್ ನ್ನು ಹೊಂದಿರುವಂತಹ ಜೋಳವು ಬೇಸಿಗೆಯಲ್ಲಿ ನಿಮ್ಮ ತುಂಬಾ ತಾಜಾ ಹಾಗೂ ಶಕ್ತಿಯಿಂದ ಇಡುವುದು. ಸಿಹಿ ಜೋಳವು ವಯಸ್ಸು ಆಗುವಂತಹ ಲಕ್ಷಣವನ್ನು ತಡೆಯುವಂತ ಗುಣವನ್ನು ಹೊಂದಿದೆ. ಟೊಮೆಟೊವು ಬೇಸಿಗೆಯಲ್ಲಿ ಸನ್ ಸ್ಕ್ರೀನ್ ನಂತೆ ಕೆಲಸ ಮಾಡುವುದು ಎಂದು ಹೇಳಲಾಗುತ್ತದೆ. ಕ್ಯಾರೊಟಿನಾಯ್ಡ್ ಟೊಮೆಟೊದಲ್ಲಿ ಇರುವ ಕಾರಣ ಮತ್ತು ಇದರ ಬಣ್ಣವು ಕೆಂಪಾಗಿರುವುದರಿಂದಾಗಿ ಇದು ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವಂತಹ ಕಲೆಗಳನ್ನು ನಿವಾರಣೆ ಮಾಡುವುದು.

Comments are closed.