ಕರಾವಳಿ

ಮರಳಿಗಾಗಿ ಕಟ್ಟಡ ಕಾರ್ಮಿಕರು ನಡೆಸಿದ ಪ್ರತಿಭಟನೆಗೆ ನೀತಿ ಸಂಹಿತೆ ಅಡ್ಡಿ!

Pinterest LinkedIn Tumblr

ಕುಂದಾಪುರ: ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿರುವ ಮರಳು ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಕುಂದಾಪುರ ತಾಲೂಕು ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ ಸಿ‌ಐಟಿಯು ಆಯೋಜಿಸಿರುವ ಪ್ರತಿಭಟನೆಗೆ ಚುನಾವಣಾ ಕರ್ತವ್ಯದ ಅಧಿಕಾರಿಗಳು ಅಡ್ಡಪಡಿಸಿದ ಘಟನೆ ನಡೆದಿದೆ.

ಗುರುವಾರ ಬೆಳಿಗ್ಗೆ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಕಟ್ಟಡ ಕಾರ್ಮಿಕರು ಒಂದೆಡೆ ಸೇರಿ ರ್‍ಯಾಲಿ ಮೂಲಕ ಮಿನಿವಿಧಾನ ಸೌಧದಲ್ಲಿರುವ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ತಯಾರಿ ನಡೆಸುತ್ತಿದ್ದರು. ಆದರೆ ಚುನಾವಣಾ ಕರ್ತವ್ಯದ ಅಧಿಕಾರಿಗಳು ಭೇಟಿ ನೀಡಿ ರ್‍ಯಾಲಿಗೆ ಅನುಮತಿ ಪಡೆದಿಲ್ಲ. ನೀತಿ ಸಂಹಿತೆ ಇರುವಾಗ ಗುಂಪುಕಟ್ಟಿ ಹೋಗಲು ಬಿಡುವುದಲ್ಲಿ. ಮುಖಂಡರಷ್ಟೇ ತೆರಳಿ ಮನವಿ ನೀಡಿ. ಪ್ರತಿಭಟನೆ ಮಾಡಲೂ ಅವಕಾಶ ಕೊಡುವುದಿಲ್ಲ ಎಂದರು.

ಅಧಿಕಾರಿಗಳ ಮಾತಿಗೆ ವಿರೋಧ ವ್ಯಕ್ತಪಡಿಸಿದ ಸಿ‌ಐಟಿಯು ಮುಖಂಡರು, ಕಾರ್ಮಿಕರು ನಡೆಸುವ ಪ್ರತಿಭಟನೆಗೆ ನೀತಿ ಸಂಹಿತೆ ಅಡ್ಡಿ ಬರುವುದುದಿಲ್ಲ. ಪ್ರಜಾಪ್ರಭುತ್ವದಡಿಯಲ್ಲಿ ನಾವೆಲ್ಲರೂ ಪ್ರತಿಭಟನೆ ಮಾಡುತ್ತಿದ್ದೆ. ಚುನಾವಣಾ ಸಮಯದಲ್ಲಿ ಕಾರ್ಮಿಕರಿಗೆ ಅವರ ಸಮಸ್ಯೆ ಹೇಳಿಕೊಳ್ಳಲು ಹಕ್ಕಿಲ್ಲವೆ. ರಾಜಕೀಯ ಪಕ್ಷದ ನೇತೃತ್ವದಲ್ಲಿ ನಾವು ಪ್ರತಿಭಟನೆ ಮಾಡುತ್ತಿಲ್ಲ. ರ್‍ಯಾಲಿ ನಡೆಸಲು ನಮಗೆ ಬಂದೋಬಸ್ತ್ ನೀಡಿ. ಎಲ್ಲಿಯೂ ಗಲಾಟೆ ಆಗದಂತೆ ನಾವು ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ನೀಡುತ್ತೇವೆ. ಇಲ್ಲವಾದರೆ ಸ್ಥಳಕ್ಕೆ ತಹಸೀಲ್ದಾರನ್ನು ಕರೆಸಿ ಎಂದು ಪಟ್ಟು ಹಿಡಿದರು.

ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಹೋರಾಟಗಾರರ ಒತ್ತಡಕ್ಕೆ ಮಣಿದು ಚುನಾವಣಾ ಕರ್ತವ್ಯದ ಅಧಿಕಾರಿ ಪ್ರಭಾರ ತಹಸೀಲ್ದಾರ್ ಅನ್ನು ಸ್ಥಳಕ್ಕೆ ಕರೆಸಲು ಒಪ್ಪಿಗೆ ಸೂಚಿಸಿದ್ದರು. ಪ್ರಭಾರ ತಹಸೀಲ್ದಾರ್ ಬರುವ ತನಕವೂ ಕಾರ್ಮಿಕರು ಸ್ಥಳದಲ್ಲೇ ಮೌನವಾಗಿ ಕುಳಿತು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಪ್ರಭಾರ ತಹಸೀಲ್ದಾ ಪ್ರಕಾಶ್ ಪೂಜಾರಿ ಪ್ರತಿಭಟನಾನಿರತರ ಮನವಿ ಸ್ವೀಕರಿಸಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಈ ವೇಳೆಯಲ್ಲಿ ಸಿ‌ಐಟಿಯು ಮುಖಂಡರಾದ ಯು.ದಾಸ ಭಂಡಾರಿ, ಸುರೇಶ್ ಕಲ್ಲಾಗರ, ಎಚ್. ನರಸಿಂಹ, ವೆಂಕಟೇಶ್ ಕೋಣಿ, ಜಗದೀಶ್ ಆಚಾರ್ಯ, ಸಂತೋಷ್ ಹೆಮ್ಮಾಡಿ, ಕಾಳಾವರ ರಾಮಚಂದ್ರ ನಾವಡ ಮೊದಲಾದವರು ಉಪಸ್ಥಿತರಿದ್ದರು.

Comments are closed.