ಕರಾವಳಿ

ಉಡುಪಿ ಡಿ.ಸಿ.ಐ.ಬಿ ಪೊಲೀಸರ ಕಾರ್ಯಾಚರಣೆ: ಅಕ್ರಮ ಅಕ್ಕಿ, ವಾಹನಗಳು, ಆರೋಪಿ ವಶ

Pinterest LinkedIn Tumblr

ಉಡುಪಿ: ಉಡುಪಿ ಡಿ.ಸಿ.ಐ.ಬಿ. ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಕಿರಣ್ ಸಿ,. ರವರಿಗೆ ದೊರೆತ ಖಚಿತ ಮಾಹಿತ ಮೇರೆಗೆ ಸಿಬ್ಬಂದಿಯವರೊಂದಿಗೆ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ರವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಆರ್. ಜೈ ಶಂಕರ್ ರವರ ಮಾರ್ಗದರ್ಶನದಲ್ಲಿ, ಮಾರ್ಚ್ 13 ರಂದು ಹಿರಿಯಡ್ಕ ಪೇಟೆಯ ಬಳಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ, 10 ಟನ್ ಅಕ್ಕಿಯನ್ನು ಪತ್ತೆಮಾಡಿ, ಉಡುಪಿ ತಹಶೀಲ್ದಾರರ ಮುಖಾಂತರ ಆಹಾರ ನಿರೀಕ್ಷಕರು ಸದ್ರಿ ಲಾರಿಯನ್ನು ಸ್ವಾಧೀನ ಪಡಿಸಿಕೊಂಡಿರುತ್ತಾರೆ.

 

ನಂತರ ಪೆರ್ಡೂರು ರಥಬೀದಿಯ ಬಳಿ ರಾಜೇಶ್ ನಾಯಕ್ ಎಂಬುವರ ಗೋದಾಮಿನಲ್ಲಿದ್ದ ಸುಮಾರು 130 ಚೀಲ ಅಕ್ಕಿ, ಸುಮಾರು 400 ಖಾಲಿ ಗೋಣಿ ಚೀಲಗಳಿದ್ದು, ಅದರಲ್ಲಿ ಎಫ್.ಸಿ.ಐ ಪಂಜಾಬ್ ಎಂದು ಬರೆದಿರುತ್ತದೆ. ತೂಕ ಮಾಡುವ ಯಂತ್ರ, ಚೀಲ ಹೊಲಿಯುವ ಯಂತ್ರ ಹಾಗೂ ಸದ್ರಿ ಗೋದಾಮಿನ ಹೊರಗೆ ಬೊಲೆರೋ ಪಿಕಪ್ ಗಾಡಿಯಲ್ಲಿ ಸುಮಾರು 50 ಚೀಲಗಳಲ್ಲಿ ಅಕ್ಕಿ ತುಂಬಿಸಿ ನಿಲ್ಲಿಸಿದ್ದನ್ನು ಸ್ವಾಧೀನಪಡಿಸಿಕೊಂಡಿದ್ದು, ಲಾರಿ ಚಾಲಕ ಆರೋಪಿ ಸಿ.ಪಿ.ಶಫೀಕ್ (36) ಎಂಬುವನನ್ನು ದಸ್ತಗಿರಿ ಮಾಡಲಾಗಿದ್ದು, ಪ್ರಮುಖ ಆರೋಪಿ ರಾಜೇಶ್ ನಾಯಕ್ ಪರಾರಿಯಾಗಿರುತ್ತಾನೆ. ಸದ್ರಿ ಪ್ರಕರಣವು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ದಾಳಿಯಲ್ಲಿ ಡಿ.ಸಿ.ಐ.ಬಿ ಘಟಕದ ಎಎಸ್ಐ ರವಿಚಂದ್ರ ಹಾಗೂ ಸಿಬ್ಬಂದಿಯವರಾದ ಸುರೇಶ್, ಸಂತೋಷ್ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲಕ ರಾಘವೇಂದ್ರ ಭಾಗವಹಿಸಿದ್ದರು.

Comments are closed.