ಕರಾವಳಿ

ಹರಿದ್ವಾರದಲ್ಲಿ ಸುಸಜ್ಜಿತ ಹಾಗೂ ಅತ್ಯಾಧುನಿಕ ಶ್ರೀ ಮಾಧವೇಂದ್ರ ಆಸ್ಪತ್ರೆ ಆರಂಭ

Pinterest LinkedIn Tumblr

ಮಂಗಳೂರು : ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ಹರಿದ್ವಾರದಲ್ಲಿ ಈ ಹಿಂದೆ ನಿರ್ಮಾಣಗೊಂಡಿದ್ದ ಶ್ರೀ ಮಾಧವೇಂದ್ರ ಆಸ್ಪತ್ರೆ ಯನ್ನು ಅತ್ಯಾಧುನಿಕವಾಗಿ ಪುನರ್ನಿರ್ಮಾಣಗೊಳಿಸಲಾಗಿದ್ದು, ಭಾನುವಾರ ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಯ್ಯಮಿಂದ್ರ ತೀರ್ಥ ಸ್ವಾಮೀಜಿಯವರು ಉದ್ಘಾಟನೆಗೊಳಿಸಿದರು.

ಮಣಿಪಾಲ್ ಕೆ . ಎಂ . ಸಿ ಆಸ್ಪತ್ರೆಯ ಸಹಯೋಗದೊಂದಿಗೆ ಈ ಆಸ್ಪತ್ರೆಯನ್ನು ಸುಸಜ್ಜಿಗೊಳಿಸಲಾಗಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ , ಸಲಕರಣೆಗಳನ್ನು ಇಲ್ಲಿ ಅಳವಡಿಸಲಾಗಿದೆ.

ಈ ಆಸ್ಪತ್ರೆಯು ವೃಂದಾವನಸ್ಥ ಪರಮ ಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಕನಸಿನ ಕೂಸು.ಹರಿದ್ವಾರದಲ್ಲಿರುವ ಬಡ ಜನರ ಹಾಗೂ ಸಾಧು ಸಂತರ ಉಚಿತ ಸೇವೆ ಕಲ್ಪಿಸಬೇಕೆಂಬುದು ಆವರ ಆಶಯವಾಗಿತ್ತು.ಗುರುವರ್ಯರ ಈ ಕನಸನ್ನು ಅರಿತು ಕೊಂಡ ಶ್ರೀಮದ್ ಸಯ್ಯಮಿಂದ್ರ ತೀರ್ಥ ಸ್ವಾಮೀಜಿಯವರು ಆಸ್ಪತ್ರೆಯ ನವೀಕರಣ ಕಾರ್ಯ ಆರಂಭಿಸಿದ್ದರು. ಈಗ ಆಸ್ಪತ್ರೆಯನ್ನು ಅತ್ಯುಧುನಿಕ ಮಾದರಿಯಲ್ಲಿ ರೂಪಿಸಲಾಗಿದ್ದು , ಎಲ್ಲಾ ವಿಧ ಚಿಕಿತ್ಸೆಯಗಳು ದೊರೆಯುಂತೆ ಮಾಡಲಾಗಿದೆ. ಆಸ್ಪತ್ರೆಯು ಹರಿದ್ವಾರದ ಶ್ರೀ ವೇದವ್ಯಾಸ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕರಾದ ಗಣೇಶ್ ಮಲ್ಯ ಹೊಸದಿಲ್ಲಿ , ಹರಿದ್ವಾರ ವ್ಯವಸ್ಥಾಪಕ ಸಮಿತಿಯ ಸುರೇಶ ಶೆಣೈ , ವಸಂತ್ ಶೆಣೈ , ರಮಾನಂದ ಭಟ್ ಚೇಂಪಿ, ಡಾ . ಅನಂತ್ ಕಿಣಿ , ಡಾ . ನಾಗರಾಜ್ ಕಾಮತ್ , ಮಣಿಪಾಲ್ ಕೆ . ಎಂ . ಸಿ ಆಸ್ಪತ್ರೆಯ ಡಾ . ವಿಕ್ರಾಂತ್ , ಡಾ . ಅಂಕುರ್ , ಸತೀಶ್ ಪೈ , ಜಯಸಿಂಹ ಪೈ ಉಪಸ್ಥಿತರಿದ್ದರು.

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.