ಕರಾವಳಿ

ವಿದ್ಯುತ್ ತಂತಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಚಲನೆ ಕಳೆದುಕೊಂಡ ಪವರ್‌ಮ್ಯಾನ್‌

Pinterest LinkedIn Tumblr

ಮಂಗಳೂರು : ನಗರದ ಪಳ್ನೀರ್‌ನಲ್ಲಿ ವಿದ್ಯುತ್ ತಂತಿ ದುರಸ್ತಿಯ ವೇಳೆ ವಿದ್ಯುತ್ ಪ್ರವಹಿಸಿದ ಪರಿಣಾಮ ಗಂಭೀರ ಗಾಯಗೊಂಡ ಪವರ್‌ಮ್ಯಾನ್‌ ರನ್ನು ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪವರ್‌ಮ್ಯಾನ್‌ ಕೃಷ್ಣಮೂರ್ತಿ ಎಂಬವರು ನಗರದ ಪಳ್ನೀರ್‌ನಲ್ಲಿ ಕರ್ತವ್ಯ ನಿರ್ವಾಹಿಸುತ್ತಿದ್ದ ವೇಳೆ ವಿದ್ಯುತ್ ತಗಲಿ ಚಲನ ಕಳೆದುಕೊಂಡಿದ್ದರು.

ಮೆಸ್ಕಾಂಗೆ ಸಂಬಂಧಿಸಿದ 7-8 ಮಂದಿ ನಗರದ ಪಳ್ನೀರ್ ಬಳಿ ಕೆಲಸದಲ್ಲಿ ನಿರತರಾಗಿದ್ದರು. ಆ ಪೈಕಿ ಇಬ್ಬರು ಪವರ್‌ಮ್ಯಾನ್‌ಗಳು ವಿದ್ಯುತ್ ಕಂಬವೇರಿದ್ದರು. ದುರಸ್ತಿಯ ಸಂದರ್ಭ ವಿದ್ಯುತ್ ಪ್ರವಹಿಸಿದ ಪರಿಣಾಮ ಕೃಷ್ಣಮೂರ್ತಿ ಅಲ್ಲೇ ಚಲನ ಕಳೆದುಕೊಂಡರು. ತಕ್ಷಣ ಇತರರು ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Comments are closed.