ಕರಾವಳಿ

ಸೂಟರ್‌ಪೇಟೆ ಶ್ರೀ ಕೋರ್‍ಡಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ : ರಾಜ್ಯ ಪ್ರಶಸ್ತಿ ಪಡೆದ ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್‌‌ರಿಗೆ ಸಮ್ಮಾನ

Pinterest LinkedIn Tumblr

ಮಂಗಳೂರು: ನಗರದ ಸೂಟರ್‌ಪೇಟೆಯಲ್ಲಿರುವ ಪುರಾತನ ಶ್ರೀ ಕೋರ್‍ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವವು ಮಾರ್ಚ್ ೨ ರಿಂದ ೫ ರವರೆಗೆ ಅದ್ದೂರಿಯಾಗಿ ನಡೆಯಿತು. ನೇಮೋತ್ಸವದ ಮೊದಲು ಮಾರ್ಚ್ ೧ರಂದು ಧರ್ಮಾದರ್ಶಿ ಶ್ರೀ ಭಾಸ್ಕರ್ ಐತಾಳ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ನಡೆಯಿತು.

ನಂತರ ಸ್ಥಳದ ಗುಳಿಗ, ಶ್ರೀ ಬಬ್ಬುಸ್ವಾಮಿ-ತನ್ನಿಮಾನಿಗ, ರಾಹುಗುಳಿಗ, ಪಂಜುರ್ಲಿ-ಗುಳಿಗ, ಧರ್ಮದೈವ, ಸುಬ್ಯಮ್ಮ-ಸುಬ್ಬಿಗುಳಿಗ, ಸಂಕಳೆಗುಳಿಗ ಹಾಗೂ ಕೊರಗಜ್ಜ ದೈವಗಳ ನೇಮೋತ್ಸವ ನಾಲ್ಕು ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್, ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀ ಕೆ.ಭಾಸ್ಕರ್ ಮೊಯಿಲಿ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಗಂಧಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಪರವಾಗಿ ಅವರನ್ನು ಗುರಿಕಾರರಾದ ಶ್ರೀ ಎಸ್. ರಾಘವೇಂದ್ರ ಇವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶ್ರೀ ಡಿ.ವೇದವ್ಯಾಸ ಕಾಮತ್ ಶ್ರೀ ಕ್ಷೇತ್ರವು ಸರ್ವಧರ್ಮಿಯರ ಆರಾಧನ ಕೇಂದ್ರವಾಗಿ ಬೆಳಗುತ್ತಿದ್ದು ಇಲ್ಲಿ ಬಬ್ಬುಸ್ವಾಮಿಯ ಕಾರ್ನಿಕದ ಶಕ್ತಿ ಇದೆ ಎಂದರು. ಮೇಯರ್ ಶ್ರೀ ಕೆ.ಭಾಸ್ಕರ್ ಮೊಲಿರವರು ಶ್ರೀ ಕ್ಷೇತ್ರದ ಆರಾಧನಾ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಷೇತ್ರದ ಗುರಿಕಾರರಾದ ಶ್ರೀ ಎಸ್.ರಾಘವೇಂದ್ರ ಅವರು ಮಾತನಾಡಿ, ಶ್ರೀ ಕ್ಷೇತ್ರಕ್ಕೆ ೧೨೫ಕ್ಕೂ ಹೆಚ್ಚಿನ ಇತಿಹಾಸವಿದೆ. ಇಲ್ಲಿ ಪಾರಂಪರಿಕ ಭೂತಾರಾಧನೆಯನ್ನು ವೈಶಿಷ್ಟ್ಯಪೂರ್ಣವಾಗಿ ನಡೆಸಲಾಗುತ್ತಿದೆ. ಶ್ರೀ ಕ್ಷೇತ್ರವು ಸರ್ವ ಧರ್ಮಿಯರ ಶೃದ್ಧಾಭಕ್ತಿಯ ಕೇಂದ್ರವಾಗಿದೆ ಎಂದರು.

ಸನ್ಮಾನ:

ಈ ಸಂದರ್ಭದಲ್ಲಿ ಜಾನಪದ ಲೋಕ ರಾಜ್ಯ ಪ್ರಶಸ್ತಿ ಪಡೆದ ಕ್ರೀಡಾ ಅಂಕಣಕಾರ ಹಾಗೂ ಕ್ಷೇತ್ರದ ಪ್ರದಾನ ಕಾರ್ಯದರ್ಶಿ ಎಸ್.ಜಗದೀಶ್ಚಂದ್ರ ಅಂಚನ್‌ರವನ್ನು ಶ್ರೀ ಕ್ಷೇತ್ರದ ಪರವಾಗಿ ಸಾರ್ವಜನಿಕವಾಗಿ ಸನ್ಮಾನಿಸಲಾಯಿತು.

ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಕು.ಅಪ್ಪಿ ಎಸ್., ಕ್ಷೇತ್ರದ ಸಲಹೆಗಾರರಾದ ಶ್ರೀ ಕೆ.ಪಾಂಡುರಂಗ, ಶ್ರೀ ಎಸ್.ಬಾಬು, ಪ್ರಧಾನ ಕಾರ್ಯದರ್ಶಿ ಎಸ್ ಜಗದೀಶ್ಚಂದ್ರ. ಖಜಾಂಚಿ ಎಸ್. ನವೀನ್, ಬಬ್ಬುಸ್ವಾ,ಮಿ ಪಾತ್ರಿ ಶ್ರೀ ಎಸ್.ಗಣೇಶ, ಅರ್ಚಕರಾದ ಶ್ರೀ ಜಯ, ಪದಾಧಿಕಾರಿಗಳಾದ ಬಿ.ವಿಶ್ವನಾಥ ಸಾಲ್ಯಾನ್, ಎಸ್. ಪವಿತ್ರ, ಮೋಹನ್, ಮೋಹನ್ ದಾಸ್, ಎಸ್,ಗಣೇಶ್ ಬಿ,ಜನಾರ್ಧನ, ವಸಂತ, ಸುರೇಶ್, ಗುಣವಂತಿ ಗೋಪಾಲ, ಉಪೇಂದ್ರ, ಪ್ರವೀಣ್, ರಂಜಿತ್, ಬೋಜ,ಅನ್ನಪೂರ್ಣ ರಘುರಾಮ್, ಪುರುಷೋತ್ತಮ ಪದಕಣ್ಣಾಯ, ಉಮಾ ಪ್ರಸಾದ್, ಸುನೀಲ್ ರಾಜ್, ಕಿರಣ್ ರಾಜ್,ರಾಹುಲ್, ಸುದೇಶ್ ಕುಮಾರ್, ತಿಲಕ್‌ರಾಜ್, ಸಂತೋಷ ಕುಮಾರಿ, ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.
ವಿಜಯ್ ಫ್ರೆಂಡ್ಸ್ ಸರ್ಕಲ್, ಪ್ರಜ್ವಲ್ ಯುವಕ ಮಂಡಲ(ರಿ), ಸೂಟರ್ ಪೇಟೆ ಫ್ರೆಂಡ್ಸ್ ಸರ್ಕಲ್, ರಾಘವೇಂದ್ರ ಫ್ರೆಂಡ್ಸ್ ಸರ್ಕಲ್, ತುಳುವೆರ್‍ನ ಕೂಟ(ರಿ), ಜ್ವಾಲಿ ಫ್ರೆಂಡ್ಸ್, ವೆಲೆನ್ಸಿಯಾ ಆಟೋ ರಿಕ್ಷಾ ಚಾಲಕರ/ಮಾಲಕರ ಸಂಘ, ಸ್ತ್ರೀ ಶಕ್ತಿ ಮಹಿಳಾ ಮಂಡಲ(ರಿ),ಶ್ರೀ ವರಮಹಾಲಕ್ಷ್ಮೀ ಮಹಿಳಾ ಸಂಘ, ಸರ್ವಮಂಗಳ ಸ್ವಸಹಾಯ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳು, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ನವೋದಯ ಸ್ವಸಹಾಯ ಸಂಘಗಳು ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸರ್ವ ಸದಸ್ಯರುಗಳು ನೇಮೋತ್ಸವದಲ್ಲಿ ಭಾಗಿಯಾಗಿದ್ದರು.

Comments are closed.