ಕರಾವಳಿ

ಕೆನರಾ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಪೊಳಲಿ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಪಾದಯಾತ್ರೆ

Pinterest LinkedIn Tumblr

ಮಂಗಳೂರು : ಬೆಂಜನಪದವು ಕೆನರಾ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಬೋಧಕ, ಬೋಧಕೇತರರು ಹಾಗೂ ನೌಕರ ವೃಂದದವರಿಂದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಮ್ಮನೆಡೆಗೆ ಹೊರೆಕಾಣಿಕೆ ಪಾದಯಾತ್ರೆ ಕಾರ್ಯಕ್ರಮ ಶನಿವಾರ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳೂ ಪಾಲ್ಗೊಂಡಿದ್ದರು.

ಬೆಳಗ್ಗಿನ ಜಾವ ಕಾಲೇಜಿನಲ್ಲಿ ವಿದ್ಯಾಗಣಪತಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿ ಆರಂಭಗೊಂಡ ಪಾದಯಾತ್ರೆ ಎರಡು ಗಂಟೆಗಳ ಅವಧಿಯಲ್ಲಿ ದೇವಳಕ್ಕೆ ತಲುಪಿತು.

ಕಾಲೇಜಿನ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸಂಗ್ರಹಿಸಲಾದ ಹೊರೆಕಾಣಿಕೆಯನ್ನು ಪಾವತಿಸಿ ಹಿತ್ತಾಳೆಯ ದೊಡ್ಡ ದೀಪ, ಆರತಿ, ರಜತ ಆರತಿಯೊಂದನ್ನು ಶ್ರೀ ಸನ್ನಿಧಿಗೆ ಸಮರ್ಪಿಸಲಾಯಿತು.

ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳೆಪಾಡಿಗುತ್ತು, ಕಾರ್ಯಕ್ರಮ ಸಂಯೋಜಕರಾದ ಸಹಪ್ರಾಧ್ಯಾಪಕ ಆರ್. ನಾರಾಯಣ ಸ್ವಾಮಿ, ವಿದ್ಯಾಥರ್ಿ ಸಂಯೋಜಕರಾದ ಅಕ್ಷಯ್ ಕಾಮತ್, ಸತ್ಯನಾರಾಯಣ ಭಟ್, ಕಾಲೇಜಿನ ಆಡಳಿತಾಧಿಕಾರಿ ಎಂ.ಗಣೇಶ್ ಕಾಮತ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಕೃಷ್ಣಪ್ರಭು, ಸಹಿತ ಸಹಪ್ರಾಧ್ಯಾಪಕರುಗಳು ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Comments are closed.