ಕರಾವಳಿ

ಬ್ರಾಯನ್ ಜೀವನ್ ಫರ್ನಾಂಡಿಸ್‌ರಿಗೆ ಡಾಕ್ಟರೇಟ್

Pinterest LinkedIn Tumblr

ಮಂಗಳೂರು: ಬ್ರಾಯನ್ ಜೀವನ್ ಫರ್ನಾಂಡಿಸ್‌ರವರ ಎಲೆಕ್ಟ್ರಕಲ್ ಸ್ವಿಚ್ಚಿಂಗ್ ಕ್ಯಾರೆಕ್ಟರಿಸ್ಟಿಕ್ಸ್ ಆಂಡ್ ಥರ್ಮಲ್ ಪ್ರಾಪರ್ಟಿಸ್ ಆಫ್ ಟೆಲುರಿಯಂ ಬೇಸ್ಡ್ ಚಾಲ್ಕೋಜಿನೈಡ್ ಗ್ಲಾಸ್ಸಿ ಅಲೋಯ್ಸ್ ಎಂಬ ಮಹಾ ಪ್ರಬಂಧಕ್ಕೆ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ (ಎನ್‌ಐಟಿಕೆ) ಸುರತ್ಕಲ್ ಪಿ‌ಎಚ್‌ಡಿ ಪದವಿ ನೀಡಿ ಗೌರವಿಸಿದೆ.

ಇವರು ಭೌತ ಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ. ಎನ್. ಕೆ. ಉದಯಶಂಕರ್‌ರವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿರುತ್ತಾರೆ.

ಬ್ರಾಯನ್ ಜೀವನ್ ಫರ್ನಾಂಡಿಸ್ ಅವರು ಬಂಟ್ವಾಳ ತಾಲೂಕಿನ ಸೋರ್ನಾಡು ಶಾಲೆಯ ಮುಖ್ಯೋಪಾಧ್ಯಾಯರಾದ ಬೆನೆಡಿಕ್ಟ್ ಫರ್ನಾಂಡಿಸ್ ಮತ್ತು ನಿವೃತ್ತ ಶಿಕ್ಷಕಿ ಜೋಸ್ಟಿನ್ ರೊಡ್ರಿಗಸ್‌ರವರ ಪುತ್ರ ಹಾಗೂ ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ ಬೆಂಗಳೂರಿನ ಹಿರಿಯ ಸಹಸಂಶೋಧಕಿ ನೊಲಿಟ ಸಲ್ದಾನ್ಹಾ ರವರ ಪತಿ.

Comments are closed.