ಕರಾವಳಿ

ಮಂಗಳೂರಿನಲ್ಲಿ ಅಮೃತ ಸಂಗಮ – 2019 : ಶ್ರೀ ಮಾತಾ‌ಅಮೃತಾನಂದಮಯಿ ದೇವಿಯವರಿಂದ ಅರ್ಹ ಫಲಾನುಭವಿಗಳಿಗೆ ಕೊಡುಗೆ ವಿತರಣೆ – ವಿಶೇಷ ಸಂದೇಶ

Pinterest LinkedIn Tumblr

ಶ್ರೀ ಮಾತಾ‌ಅಮೃತಾನಂದಮಯಿ ದೇವಿ (ಅಮ್ಮ) ಅವರು ನೀಡಿದ ಸಂದೇಶದಿಂದ ಆಯ್ದಭಾಗಗಳು ಇಲ್ಲಿವೆ.

ಮಂಗಳೂರು. ಮಾರ್ಚ್ 08 : ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ)ಯವರು ಮಾರ್ಚ್ ೮ರಂದು ಬೋಳೂರಿನ ಸುಲ್ತಾನ್ ಬತ್ತೇರಿ ಅಮೃತ ವಿದ್ಯಾಲಯಂ ಮಠದಲ್ಲಿ ಆಯೋಜಿಸಲಾದ ಅಮೃತ ಸಂಗಮ- 2019 ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಸತ್ಸಂಗದಲ್ಲಿ ಭಾಗವಹಿಸಿ ಆಶೀರ್ವಚಿಸಿದರು. ಇದೇ ವೇಳೆ ಅವರು ಮಂಗಳೂರಿನ `ಬ್ರಹ್ಮಸ್ಥಾನ ಮಹೋತ್ಸವ’ದ ಮೊದಲನೇ ದಿನ ಆಗಮಿಸಿದ ಭಕ್ತಾಧಿಗಳಿಗೆ ಸಂದೇಶ ನೀಡಿದರು.

ಕಾರ್ಯಕ್ರಮದ ಪೂರ್ವಭಾವಿಯಗಿ ಇಂದು ಬೆಳಗ್ಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅಮ್ಮ ವಿಕಲ ಚೇತನರಿಗಾಗಿ ಗಾಲಿ ಕುರ್ಚಿಗಳ ವಿತರಣೆ, ಸ್ಕಾಲರ್ ಶಿಪ್ ವಿತರಣೆ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ವಿತರಣೆ, ಅಮಲ ಭಾರತ (ಸ್ವಚ್ಛ ಭಾರತ) ಅಭಿಯಾನದ ಅಂಗವಾಗಿ ಆಧುನಿಕ ಮಾದರಿಯ ಶೌಚಾಲಯ ನಿರ್ಮಾಣಕ್ಕೆ ಚಾಲನೆ, ಅಮೃತ ಸಂಗಮ- ಸ್ಮರಣ ಸಂಚಿಕೆ ಬಿಡುಗಡೆ, ಅಮೃತ ಶ್ರೀ ಯೋಜನೆಯ ಮಹಿಳಾ ಸ್ವಾವಲಂಬಿ, ಸ್ವ ಉದ್ಯೋಗ ಯೋಜನೆಯ ಅಂಗವಾಗಿ ಹೊಲಿಗೆ ಯಂತ್ರ ವಿತರಣೆ, ಅಮೃತ ಶ್ರೀ ಯೋಜನೆಯ ಸದಸ್ಯರಿಗೆ ಸೀರೆ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಶನ್ ಬ್ಯಾಂಕ್ ಆಡಳಿತ ನಿರ್ದೇಶಕಿ ಪಿ.ವಿ.ಭಾರತಿ, ಸಂಸದ ನಳಿನ್ ಕುಮಾರ್ ಕಟೀಲು, ತರಂಗ ವ್ಯವಸ್ಥಾಪಕ ಸಂಪಾದಕಿ ಡಾ. ಸಂಧ್ಯಾ ಎಸ್.ಪೈ, ಶಾಸಕ ವೇದವ್ಯಾಸ ಕಾಮಾತ್, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಪಾಲ್ಗೊಂಡಿದ್ದರು.

ಬೋಳೂರಿನ ಮಾತಾ ಅಮೃತಾನಂದಮಯಿ ಮಠದ ಮಂಗಳಾಮೃತ ಚೈತನ್ಯ, ಸಮಿತಿಯ ಪ್ರಮುಖರಾದ ಡಾ| ಜೀವರಾಜ್‌ ಸೊರಕೆ, ಡಾ| ಸನತ್‌ ಹೆಗ್ಡೆ, ಶ್ರುತಿ ಹೆಗ್ಡೆ, ವಾಮನ್‌ ಕಾಮತ್‌, ಸಂತೋಷ್‌ ಅಮೀನ್‌, ಮಾದವ ಸುವರ್ಣ, ಡಾ. ದೇವದಾಸ್ ಪುತ್ರನ್ ಮುಂತಾದವರು ಉಪಸ್ಥಿತರಿದ್ದರು.

ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಪ್ರಸಾದ್‌ರಾಜ್‌ ಕಾಂಚನ್ ಅಥಿಗಳನ್ನು ಸ್ವಾಗತಿಸಿ, ಅಮ್ಮನ ಕಾರ್ಯಾಕ್ರಮದ ಬಗ್ಗೆ ಮಾಹಿತಿ ನೀಡಿದರು.

ಶ್ರೀ ಮಾತಾ‌ಅಮೃತಾನಂದಮಯಿದೇವಿ ಅವರು ಮಾರ್ಚ್ 8ರಂದು ಮಂಗಳೂರಿನ `ಬ್ರಹ್ಮಸ್ಥಾನ ಮಹೋತ್ಸವ’ದ ಮೊದಲನೇ ದಿನ ನೀಡಿದ ಸಂದೇಶದಿಂದ ಆಯ್ದಭಾಗಗಳು ಇಲ್ಲಿವೆ.

ಇಂದು ನಾವಿರುವುದು‌ಅತಿವೇಗದಯುಗದಲ್ಲಿ. `ವೇಗ’ ಎಂಬುದು ನಮ್ಮಕಾಲದ ಮಂತ್ರ. ಇವತ್ತು ನಾವು ಬೇಗ ಬೇಗ ತಿನ್ನಬೇಕು, ಬೇಗ ಬೇಗ ಕುಡಿಯಬೇಕು, ಬೇಗ ಬೇಗ ಮಾತಾಡಬೇಕು, ಬೇಗ ಬೇಗ ಕೆಲಸಮಾಡಬೇಕು-ಆಗ ಮಾತ್ರವೇ ಬದುಕಿ ಉಳಿಯುತ್ತೇವೆ ಎನ್ನುವಂತಾಗಿದೆ. ಜೀವನ ಎಂಬ ಓಟದಲ್ಲಿ‌ಎಲ್ಲರೂ‌ಓಡುತ್ತಿರುವಕಾರಣಯಾರಿಗೂಯಾವುದಕ್ಕೂ ಸಮಯವೇ‌ಇಲ್ಲ. ತಮ್ಮ ಸುತ್ತ‌ಒಮ್ಮೆ ನೋಡಿಕೊಳ್ಳಲು, ಸುತ್ತ‌ಇರುವವರನ್ನು ನೋಡಲು, ಎದುರಿಗಿರುವ ವ್ಯಕ್ತಿಯೊಂದಿಗೆ‌ಒಂದು ನುಡಿ ನುಡಿಯಲು, ಅಥವಾ‌ಇನ್ನೊಬ್ಬ ವ್ಯಕ್ತಿ ಹೇಳುತ್ತಿರುವುದನ್ನು ಕೇಳಿಸಿಕೊಳ್ಳಲು ಸಹ -ಯಾರಿಗೂ ಸಮಯವಿಲ್ಲ.

ಮನುಷ್ಯರು‌ಆಧುನಿಕಕಾಲದ‌ಅತಿವೇಗದಜೀವನ ಶೈಲಿಯಲ್ಲಿಬಾಹ್ಯದಲ್ಲಿ ಮಾತ್ರವಲ್ಲ, ಆಂತರಿಕವಾಗಿಯೂಸಿಲುಕಿಬಿಟ್ಟಿದ್ದಾರೆ. ಮನಸ್ಸಿನ ವೇಗದಲ್ಲಿ ಮಿತಿಯುಳ್ಳ ದೇಹಕ್ಕೆ‌ಓಡಕ್ಕಾಗಲ್ಲ. ಪರಿಣಾಮವಾಗಿ ಸಿಟ್ಟು, ದುಃಖ, ನಿರಾಶೆ, ಆತಂಕ, ಅಸಹನೆ, ದ್ವೇಷ, ಅಸಹಾಯಕತೆ, ಆತ್ಮವಿಶ್ವಾಸದಕೊರತೆ-ಇವು ನಿರಂತರವಾಗಿನಮ್ಮ ಮನಸ್ಸಿನಲ್ಲಿ ಮೆರವಣಿಗೆ ಸಾಗುತ್ತಿರುತ್ತವೆ.”ನಾನು ಯಾರು? ಯಾಕೆ‌ಇಲ್ಲಿದ್ದೀನಿ? ಎತ್ತ ಸಾಗುತ್ತಿದ್ದೀನಿ? ನನ್ನ ಸುತ್ತ ಏನು ನಡೆದಿದೆ?” ಈ ಯಾವ ಪ್ರಶ್ನೆಯೂಜನರನ್ನು ಬಾಧಿಸುತ್ತಲೇ‌ಇಲ್ಲ. ಎಲ್ಲವೂ ನಾಶವಾದಾಗ ಸಹ ಮನುಷ್ಯರುತಮ್ಮಜೀವನದಗತಿಯಲ್ಲಿ ಮುಳುಗಿ, ಮೈಮರೆತಿರುತ್ತಾರೆ.

ಇವತ್ತು ನಾವು ವಿಜ್ಞಾನ ತಂತ್ರಜ್ಞಾನಗಳಿಗೆ ಅತಿಹೆಚ್ಚು ಪ್ರಾಮುಖ್ಯತೆಕೊಡುತ್ತಿದ್ದೇವೆ, ಮಹತ್ವಕೊಡುತ್ತಿದ್ದೇವೆ. ಇದು ನಿಜವಾಗಿ ಮುಖ್ಯವೇ. ಆದರೆ‌ಇದರಜೊತೆಗೆ ನಾವು ಪ್ರಕೃತಿಗೂ, ಸಂಸ್ಕೃತಿಗೂ, ಮತ್ತೆಸಹಜೀವಿಗಳಿಗೂ ಸಮಾನ ಮಹತ್ವಕೊಡಬೇಕು. ಈ ಎಲ್ಲಾ ಅಂಶಗಳಿಗೆ ಮಹತ್ವಕೊಡದಿದ್ದರೆ ಸಮಾಜವು‌ಒಂದು ಕಾಲು ಮುರಿದುಕೊಂಡಮೂರು ಕಾಲಿನ ಕುರ್ಚಿಯಾಗುತ್ತದೆ! ನೋಡಿದರೆಕುರ್ಚಿಯಲ್ಲಿ `ಕುಂದು’ ಇದೆ‌ಎಂದು ತಿಳಿಯುವುದಿಲ್ಲ. ಆದರೆ‌ಅದರಲ್ಲಿ ಕೂತರೆ ಯಾವಾಗ ಬೀಳುವೆವೋ ಗೊತ್ತಿಲ್ಲ.ತಾಳ ಶ್ರುತಿಗಳು ಸರೀಗಿಲ್ಲದ ಹಾಡನ್ನು‌ ಆಸ್ವಾದಿಸಕ್ಕೆ ಆಗದು. ಜೀವನದ ಮೂಲ ಶ್ರುತಿತಾಳಗಳನ್ನು ಪ್ರಕೃತಿಯುರೂಪಿಸುತ್ತದೆ. ಪ್ರಕೃತಿಯ ಆ ನಿಯಮಗಳನ್ನು ಅನುಸರಿಸ ದಿದ್ದರೆ ನಮಗೆ ಜೀವನದಲ್ಲಿ ಶಾಂತಿ ಆನಂದಗಳನ್ನು ಅನುಭವಿಸಲು ಆಗುವುದಿಲ್ಲ. ಮನುಷ್ಯ ನಿರ್ಮಿತ ನಿಯಮಗಳನ್ನು ಪಾಲಿಸುವ ಹಾಗೇ ನಾವು ಪ್ರಕೃತಿಯ ನಿಯಮಗಳನ್ನು, ಹೆಚ್ಚು ಎಚ್ಚರದಿಂದ ಪಾಲಿಸಬೇಕಿದೆ. ಯಾವುದು ಆ ಪ್ರಕೃತಿ ನಿಯಮಗಳು?ಎಂದರೆ, ಅವು, ಐಕ್ಯತೆ, ತ್ಯಾಗ ಮತ್ತು ನಿಸ್ವಾರ್ಥತೆ.

ಇತ್ತೀಚಿನಪ್ರವಾಹದಸಂದರ್ಭದಲ್ಲಿ‌ಅಮೃತ ವಿಶ್ವವಿದ್ಯಾಪೀಠದ ನೂರಾರುವಿದ್ಯಾರ್ಥಿಗಳು ಎಷ್ಟೋ ದಿನಗಳವರೆಗೆ ಒಗಟ್ಟಿನಿಂದ ಸೇವಾನಿರತರಾಗಿ, ಅನೇಕ ಜಲಾವೃತ ಸ್ಥಳಗಳಲ್ಲಿ ಸಿಕ್ಕಿಕೊಂಡ ಅಮಾಯಕರನ್ನು ರಕ್ಷಿಸಿದರು. ಅವರು‌ಒಂದು `ಹೆಲ್ಪ್ ಲೈನ್’ ಮಾಡಿ, ಊಟ ನಿದ್ದೆ ಬಿಟ್ಟು, ಇಪ್ಪತ್ತುನಾಲ್ಕೂಗಂಟೆಕರೆಗಳನ್ನು ಸ್ವೀಕರಿಸುತ್ತಾ, ಅನೇಕ ಜನರನ್ನುರಕ್ಷಿಸುವಲ್ಲಿ ಸಫಲರಾದರು. ಹಾಗೆ ಅವರು‌ ಒಗ್ಗಟ್ಟಿನಿಂದಶ್ರಮಿಸಲು ಕಾರಣ, ಪ್ರವಾಹದಲ್ಲಿ ಸಿಲುಕಿದ್ದ ಆ ಅಸಹಾಯಕಜನರ ಬಗ್ಗೆ ಅವರಲ್ಲಿ ಮೂಡಿದ ನಿಸ್ವಾರ್ಥ ಪ್ರೇಮ ಮತ್ತು ಕರುಣೆ. ಆ ನಿಸ್ವಾರ್ಥ ಪ್ರೇಮವೇ‌ಅವರ ಶ್ರಮವನ್ನು ಸುಂದರವಾಗಿಯೂ ಯಶಸ್ವಿಯಾಗಿಯೂ, ಮತ್ತು‌ಇತರರಿಗೆ ಸ್ಫೂರ್ತಿದಾಯಕ ವಾಗಿಯೂ ಮಾಡಿತು.ಆ ಸಮಯದಲ್ಲಿ‌ಅವರಿಗೆ `ನಾನು’ ಮತ್ತು `ಅವರು’ ಎಂಬ ಚಿಂತೆಬಾಧಿಸಲಿಲ್ಲ. ಕಾರುಣ್ಯದ ಶಕ್ತಿಯು‌ಅವರನ್ನು `ನಾವು’ ಎಂಬ ಐಕ್ಯಬೋಧಕ್ಕೆ ಏರಿಸಿತ್ತು. ಆ ಬೋಧವೇ‌ಅವರನ್ನು ಮುನ್ನಡೆಸಿತು. ಆ ಅದ್ಭುತ ಶಕ್ತಿಯನ್ನು ಸದಾ ಕಾಲ ನಮ್ಮೊಳಗೆ ಜ್ವಲಿಸುತ್ತಿರುವಂತೆ ಕಾಪಾಡಿಕೊಳ್ಳುವುದು ಸಾಧ್ಯವಾದರೆ ಆಗ ನಮ್ಮ ಜೀವನವು‌ ಒಂದು ಸುಂದರ ನದಿಯಂತೆ‌ ಉಕ್ಕಿಹರಿಯುವುದು. ಅಂದರೆ` ನಮಗಿನ್ನು ಅಡೆತಡೆಗಳು ಇರುವುದಿಲ್ಲ’ಎಂದಲ್ಲ; ಬದಲಿಗೆ, `ಅಡಚಣೆಗಳುಯಾವುದೂ ನಮ್ಮನ್ನುತಡೆದು ನಿಲ್ಲಿಸುವುದಿಲ್ಲ’. ನದಿಯ ಹರಿವಿನ ಹಾಗೆ ಜೀವನವು, ಎಲ್ಲ ಪ್ರತಿಬಂಧಗಳನ್ನು ಮೀರಿ, ಮುಂದೆ ಹಿಗ್ಗಿಹರಿಯುತ್ತದೆ.

ಪ್ರಕೃತಿ ದುರಂತಗಳನ್ನು ತಡೆಯುವುದು ಮನುಷ್ಯನ ಮಿತಿಯುಳ್ಳ ಬುದ್ಧಿಗಾಗಲೀ ಶಕ್ತಿಗಾಗಲೀ ಸಾಧ್ಯವಿಲ್ಲ. ಆದರೆ‌ ಅದರಿಂದಾಗಿ ದುಃಖಕ್ಕೆ‌ ಈಡಾದವರಿಗೆ ಸಹಾಯ ಹಸ್ತ ನೀಡುವುದು, ಅವರ ನೋವಿನ ಶಮನಕ್ಕೆ ಸಹಾಯ ಮಾಡುವುದು- ಇದು ನಮ್ಮಿಂದ ಸಾಧ್ಯವಿದೆ. ಅಂಥಾ ಸಂದರ್ಭಗಳಲ್ಲಿ ಸಹಜೀವಿಗಳ ಮೇಲೆ ಪ್ರೇಮ ಕರುಣೆಗಳನ್ನು ನುಡಿಯಲ್ಲಿಯೂ ನಡೆಯಲ್ಲಿಯೂ ಸ್ವಾಭಾವಿಕವಾಗಿ ಪ್ರಕಟ ಮಾಡಬಹುದು. ಆ ಶಕ್ತಿಯು ಸದಾ ಕಾಲ ನಮ್ಮೊಳಗೇ ಇದೆ. ಹಾಗಾಗಿ ಮಹಾ ವಿಪತ್ತುಗಳು ಎದುರಾದಾಗ‌ಅದು ಹೀಗೆ ಜಾಗೃತವಾಗಿ, ಕಾರ್ಯ ಪ್ರವೃತ್ತ ವಾಗುವುದು. ಮನಸ್ಸಿನಲ್ಲಿ ಈ ಮೊದಲೇ‌ಇರುವುದನ್ನು ಮಾತ್ರವೇ ನಾವು ಹೊರಗೆ ಪ್ರಕಟಿಸಬಹುದು.

ಆದರೆ, ಸಂದಿಗ್ಧ ಪರಿಸ್ಥಿತಿಗಳಲ್ಲಿ ಹೀಗೆ ಭವ್ಯವಾಗಿಬೆಳಗುವ ಕಾರುಣ್ಯದ ಆ ಪ್ರಕಾಶವನ್ನು, ಯಾವ ಸಂದರ್ಭವನ್ನೂ‌ಎದುರಿಸಬಲ್ಲ, ದಾಟಿಮುಂದೆ ಸಾಗಬಲ್ಲ ಆ ಶಕ್ತಿಯನ್ನು, ಸದಾಕಾಲವೂಜ್ವಲಿಸುತ್ತಿರುವಂತೆ ಕಾಪಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಅದು ಬಹುಬೇಗ ಆರಿಹೋಗುತ್ತಿದೆ. ಬಹುಬೇಗ ಜನರುಜಾತಿ ಮತಗಳ ಹೆಸರಿನಲ್ಲಿ,ರಾಜಕೀಯ ಸಮುದಾಯಗಳ ಹೆಸರಿನಲ್ಲಿ ಹರಿದು ಹಂಚಿ ಹೋಗುತ್ತಾರೆ. ಪರಸ್ಪರದೋಷಾರೋಪಣೆ ಮಾಡುತ್ತಾರೆ. ಕಲಹದಲ್ಲಿ ನಿರತರಾಗುತ್ತಾರೆ. ಫಲಪ್ರದವಾಗಿ ಬಳಸಬೇಕಾದ ಅದೆಷ್ಟು ಸಮಯ ಶಕ್ತಿಗಳು‌ಇಂಥ ನಿಷ್ಪ್ರಯೋಜಕ ಸಂಘರ್ಷಗಳಲ್ಲಿ ಹಾಳಾಗುತ್ತದೆ!

ಯಾವುದೇಜನಸಮುದಾಯದ‌ಆರೋಗ್ಯಪೂರ್ಣ ಬೆಳವಣಿಗೆಗೆ ವಿಮರ್ಶೆಗಳೂ, ಟೀಕೆಗಳೂ ಒಳ್ಳೆಯದೇ. ವಿವರಗಳನ್ನು ತಿಳಿಯುವ, ವಿಷಯಗಳನ್ನು ತೆರೆದು ತಿಳಿಸುವ ಹಕ್ಕು ಮತ್ತು ಸ್ವಾತಂತ್ರ್ಯ‌ಎರಡೂ ನಮಗಿದೆ. ಆದರೆ ಅವುಗಳನ್ನು ನಾವು ಸಮೂಹದವಿಕಾಸಕ್ಕೆ ಅಡಚಣೆ‌ಒಡ್ಡುವ‌ಅಸ್ತ್ರವಾಗಿ ಬಳಸಬಾರದು. ಬದಲಿಗೆ‌ಅಡಚಣೆಗಳನ್ನು ನಿವಾರಿಸುವ‌ಉಪಕರಣವಾಗಿ‌ಆ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ಬಳಸಬೇಕು.

ಒಂದೊಂದು ಪ್ರಕೃತಿದುರಂತದಲ್ಲಿಯೂ‌ಒಂದೊಂದು ಸಂದೇಶವಿರುತ್ತದೆ. ಅದರಲ್ಲಿ‌ಅತ್ಯಂತ ಮುಖ್ಯವಾದ ಸಂದೇಶ‌ಇದು:ತಾನುನಮಗೆ ಧಾರಾಳವಾಗಿ ನೀಡಿರುವ‌ಎಲ್ಲವನ್ನೂಹಿಂದೆ ತೆಗೆದುಕೊಳ್ಳಲು ಪ್ರಕೃತಿಗೆ‌ಒಂದುಕ್ಷಣ ಸಾಕು.ಈ ವಾಸ್ತವತೆ‌ಅರ್ಥವಾದರೆ ಆಗ ನಮ್ಮ ನಡೆ, ನುಡಿ, ಮತ್ತೆ ಪ್ರಕೃತಿಯ ಬಗೆಗಿನ ದೃಷ್ಟಿಕೋನ, ಪ್ರಕೃತಿಯೊಂದಿಗಿನ‌ಒಡನಾಟದರೀತಿನೀತಿ -ಎಲ್ಲದರಲ್ಲಿ ವಿನಯ ಮೂಡುತ್ತದೆ.ಆಗ “ಪ್ರಕೃತಿಯು ಮನುಷ್ಯನಿಗೆ ವಿರುದ್ಧಳಲ್ಲ. ಮಾನವತೆಗೆಹಿತವನ್ನು ಮಾತ್ರ ಬಯಸುವ `ಉತ್ತಮ ಸ್ನೇಹಿತೆ'” ಎಂದು ನಮಗೆ ಮನದಟ್ಟಾಗುತ್ತದೆ.

ಈ ಲೋಕದಲ್ಲಿ ನೀತಿನಿಯಮಗಳೇ ಇಲ್ಲದದೇಶವಾಗಲೀ ಪ್ರದೇಶವಾಗಲೀ, ಸಂಘಸಂಸ್ಥೆಯಾಗಲೀ‌ಇಲ್ಲ. ಒಂದುದೇಶ ಶಕ್ತವಾ ಗಬೇಕೆಂದರೆ‌ಅಲ್ಲಿ ಶಕ್ತವಾದಕಾನೂನು‌ಇರಬೇಕಾಗುತ್ತದೆ. ದೇಶದ‌ಅಭಿವೃದ್ಧಿಯು, ಪ್ರಜೆಗಳ ಶಿಸ್ತು, ಅವರಜೀವದ ಮತ್ತು ಆಸ್ತಿಪಾಸ್ತಿಯ ಸುರಕ್ಷಿತತೆ -ಇವೆಲ್ಲವೂ ಆ ದೇಶದಲ್ಲಿ ಪ್ರಚಲಿತವಿರುವ ನಿಯಮಗಳನ್ನು, ಹಾಗೂ ಆ ನಿಯಮಗಳನ್ನು ಜನರು ಎಷ್ಟು ಮಾತ್ರ ಪಾಲಿಸುತ್ತಾರೆ‌ ಎನ್ನುವುದನ್ನು ಅವಲಂಬಿಸಿರುತ್ತದೆ.

ಪ್ರತಿಯೊಂದುದೇಶಕ್ಕೂತನ್ನದಾದ ನಿಯಮಗಳಿರುವ ಹಾಗೇ ವಿಶ್ವಕ್ಕೂತನ್ನದಾದ ನಿಯಮಗಳಿವೆ. ಅದನ್ನೇ`ಧರ್ಮ’ಎನ್ನುವುದು. ಈ ನಿಯಮಗಳು ಪ್ರಪಂಚದ‌ಎಲ್ಲಾ ದೇಶಗಳಿಗೂ, ಎಲ್ಲಾಜನರಿಗೂಸಮಾನವಾಗಿ‌ಅನ್ವಯಿಸುತ್ತದೆ. ಉದಾಹರಣೆಗೆಟ್ರಾಫಿಕ್‌ನಿಯಮಗಳಿವೆ. ಈ ನಿಯಮಗಳನ್ನು ಪಾಲಿಸದೆ `ನಾನು ನನ್ನ‌ಇಷ್ಟಬಂದಂತೆ‌ಓಡಿಸುತ್ತೇನೆ’ ಎಂದು ಕೊಂಡರೆನಾವು ಅಪಘಾತಕ್ಕೆ‌ಈಡಾಗುತ್ತೇವೆ.

ಮನುಷ್ಯನ ಬಯಕೆಗಳೂ ಆವಶ್ಯಕತೆಗಳೂ ದಿನದಿನಕ್ಕೂ ಹೆಚ್ಚುತ್ತಲೇ‌ಇದೆ. ಎಷ್ಟೆಂದರೆ, ಕೊಂಚ ಸುಖ ಸಂತೋಷ ಪಡೆಯ ಬೇಕೆಂದರೂ‌ ಅವನು ಹಲವಾರು ಬಯಕೆಗಳನ್ನು ಈಡೇರಿಸಿಕೊಳ್ಳಬೇಕು; ಹಾಗಾಗಿದೆ. ಹಣವಿಲ್ಲದಿದ್ದರೆ ಸುಖಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಆ ಹಣದ ಸಂಪಾದನೆಗಾಗಿ ಈಗ ಎಲ್ಲಾಕಡೆ ಭರಾಟೆ,ನುಗ್ಗಾಟಗಳುನಡೆದಿದೆ. ಇದಕ್ಕೆ‌ಒಂದುಕಾರಣ, ಸಂತೋಷವು ಹೊರಗೆಲ್ಲೋ‌ಇದೆ ಎಂಬ ತಪ್ಪಾದದೃಷ್ಟಿ.

ಜೀವನಕುರಿತ ಸರಿಯಾದದೃಷ್ಟಿ‌ಎಂದರೆ`ಸಂತೋಷವು ಹೊರಗಿನಿಂದ ಬರುವುದಲ್ಲ, ಬದಲಿಗೆ ತನ್ನೊಳಗಿನಿಂದಲೇ ದೊರಕುವಂಥದು’ ಎಂದುತಿ ಳಿಯುವುದು. ಇದಕ್ಕೆ ಪೂರಕವಾದ ಮಾರ್ಗವೇ‌ಆಧ್ಯಾತ್ಮ. ಬಾಹ್ಯದ ಆಡಂಬರಗಳು ಅಲ್ಪಸುಖವನ್ನು ನೀಡಿಯಾವು. ಆದರೆ ಅವು ಮನಸ್ಸಿಗೆ ಶಾಂತಿ ಸಮಾಧಾನಗಳನ್ನು ನೀಡಲಾರವು.

ಇದುಕಂಪ್ಯೂಟರ್ ಮತ್ತು ಇಂಟರ್‌ನೆಟ್‌ಗಳ ಯುಗವಾಗಿದೆ. ತಂತ್ರಜ್ಞಾನದ ಬಗೆಗಿನ ಮಿತಿಮೀರಿದ ಭ್ರಮೆಯಿಂದಾಗಿ, ಮಿಥ್ಯವಾದ ನಂಬಿಕೆಗಳಿಂದಾಗಿ ಮನುಷ್ಯರು‌ಇಂದು‌ಅನುಭವಿಸುತ್ತಿರುವುದು ನಕಲಿ ಸುರಕ್ಷಿತತೆ.

ಇತ್ತೀಚಿನಕೊಡಗು ಮತ್ತು ಕೇರಳದಲ್ಲಾದ ಅತೀವೃಷ್ಟಿಯು, ವಿಜ್ಞಾನವೂತಂತ್ರಜ್ಞಾನ ವಿದ್ಯೆಯೂ ಎಷ್ಟು ಮುಖ್ಯವಾಗಿದ್ದರೂ ಸಹ ಅವು ಎಂದಿಗೂ ಮನುಷ್ಯತ್ವಕ್ಕೆ ಪರ್ಯಾಯವಾಗಿ ನಿಲ್ಲಲಾರವು ಎಂಬ ಪಾಠವನ್ನು ಕಲಿಸುತ್ತಿದೆ. ಎಲ್ಲಾ ಸೌಕರ್ಯಗಳು ಇರುವ ಮನೆಗಳು ಜನರ ಬಳಿ ಇದ್ದವು; ಆದರೆ ಅವು ವಾಸಯೋಗ್ಯವಾಗಿರಲಿಲ್ಲ. ಕಾರು ವಾಹನಗಳಿದ್ದವು, ಆದರೆ ಅವುಗಳನ್ನು ಓಡಿಸಲು‌ಆಗುತ್ತಿರಲಿಲ್ಲ. ಕ್ರೆಡಿಟ್‌ಕಾರ್ಡ್‌ಇದ್ದವು, ಆದರೆ ಹಣ ಪಡೆಯಲು‌ಆಗುತ್ತಿರಲಿಲ್ಲ. ಕೈಫೋನ್‌ಇತ್ತು, ಆದರೆಚಾರ್ಜ್ ಮಾಡಲುಕರೆಂಟ್‌ಇರಲಿಲ್ಲ. ಉಪಕರಣಗಳನ್ನು ಅವಲಂಬಿಸಿ ಮನುಷ್ಯನು ಎಂದಿಗೂ ಪೂರ್ಣ ಸುರಕ್ಷಿತತೆ ಹೊಂದಲಾರ. ನಿಜವಾದ ಸುರಕ್ಷಿತತೆಯನ್ನು ನಾವು ನಮ್ಮೊಳಗೇ ಕಂಡುಕೊಳ್ಳಬೇಕು.

ತಂತ್ರಜ್ಞಾನ ಒಳ್ಳೆಯ ಸೇವಕ ಹೌದು. ನಮ್ಮನ್ನು‌ಅಪಾಯಕ್ಕೆ‌ಈಡುಮಾಡಬಲ್ಲ ಯಜಮಾನನೂ ಹೌದು. `ಲೋಕದೊಂದಿಗಿನ ನಮ್ಮ ಸಂಬಂಧವು ಕೇವಲ ಯಂತ್ರಗಳ ಮೂಲಕವಾಗಿದೆ’ ಎಂದಾದರೆ, `ತಿಳುವಳಿಕೆ ಇರುವ ನಾವು ತಿಳುವಳಿಕೆ ಇಲ್ಲದ ಯಂತ್ರಗಳಿಗಾಗಿ ನಮ್ಮನ್ನೇಮಾರಿಕೊಳ್ಳುತ್ತಿದ್ದೇವೆ,’ ಎಂದಾಯಿತು. ನಾವು ಉಪಕರಣಗಳನ್ನು ಬಳಸಬೇಕು, ಮನುಷ್ಯರನ್ನು ಪ್ರೀತಿಸಬೇಕು; ಮನುಷ್ಯರನ್ನು ಬಳಸಿ, ಯಂತ್ರಗಳನ್ನು ಪ್ರೀತಿಸುವುದು ನಮ್ಮ ಸಮಾಜದ ಮುಖಮುದ್ರೆ‌ ಆಗದಿರಲಿ.

ಜೀವನದಲ್ಲಿ ಕೋಪವೇ ನಿಜವಾದ ಸೋಲು; ಸಹನೆಯೆಂಬುದೇ‌ಅತ್ಯಂತದೊಡ್ಡ ವಿಜಯ. ಕೋಪ ತರಿಸುವ ಅನೇಕ ಸಂದರ್ಭಗಳು ಪ್ರತಿದಿನವೂ ಎದುರಾಗಬಹುದು. ಒಂದು ವೇಳೆ ನಾವು ಕೋಪಕ್ಕೆ ಈಡಾದರೆ, ಅದರ‌ಅರ್ಥ, `ಆ ಸಂದರ್ಭಕ್ಕೆ‌ಅಥವಾ ಆ ವ್ಯಕ್ತಿಗೆ ನಮ್ಮ ಮನಸ್ಸನ್ನು ನಿಯಂತ್ರಿಸುವ‌ಅಧಿಕಾರವನ್ನು ನಾವೇ ಕೊಟ್ಟೆವು’ ಎಂದಾಗುತ್ತದೆ. ಇನ್ನೊಬ್ಬನ ಮೇಲೆ ಎಸೆಯಬೇಕು‌ಎಂದು ನಿಗಿನಿಗಿ ಕೆಂಡವನ್ನು ನಾವು ಕೈಗೆತ್ತಿಕೊಂಡ ಹಾಗೆ ಅದು: ಅದರಿಂದ‌ಇನ್ನೊಬ್ಬನಿಗೆತೊಂದರೆ‌ಆದರೂ ನಮ್ಮಕೈಯ್ಯಿ‌ಅದಕ್ಕೂ ಮೊದಲೇ ಸುಟ್ಟಿರುತ್ತದೆ. ಕೋಪವು ನಮ್ಮ ಅಂತರಾಳದಲ್ಲಿ ಉಂಟುಮಾಡುವಕ್ಷೋಭೆಯು ನಮ್ಮದೇಹ ಮನ ಬುದ್ಧಿಗಳನ್ನೂ ಮತ್ತೆ ನಮ್ಮ ಸುತ್ತಲಿನ ಪ್ರಭಾವಲಯವನ್ನೂಕಪ್ಪಾಗಿಸುತ್ತದೆ.ಇದು‌ಈಶ್ವರಕೃಪೆಯು ನಮಗೆ ತಲುಪಲು‌ಅಡಚಣೆಯಾಗುತ್ತದೆ.

ಶರೀರಕ್ಕೆಯಾವರೀತಿ ನಿತ್ಯವೂ ಪೌಷ್ಟಿಕ ಆಹಾರದ‌ಅವಶ್ಯಕತೆ‌ಇರುತ್ತದೋ ಮನಸ್ಸಿಗೂ ಒಳ್ಳೆಯ ಚಿಂತೆಗಳೆಂಬ ಉತ್ತಮ‌ ಆಹಾರದ‌ ಅವಶ್ಯಕತೆ‌ ಇದೆ. ಬರೀ ಜಂಕ್‌ಫುಡ್‌ ತಿನ್ನುತ್ತಿದ್ದರೆ, ಶರೀರ‌ ಅನಾರೋಗ್ಯಕ್ಕೆತುತ್ತಾಗುತ್ತದೆ. ಅದೇರೀತಿ, ಕೆಟ್ಟ ಚಿಂತೆಗಳು ಮನಸ್ಸನ್ನು ರೋಗಿಷ್ಠವಾಗಿಸುತ್ತದೆ, ದುರ್ಬಲವಾಗಿಸುತ್ತದೆ. ನಾವು ಮನಸ್ಸಿಗೆ ಉತ್ತಮ ಚಿಂತೆಗಳನ್ನು ಉಣ್ಣಿಸಿ ಮನಸ್ಸನ್ನು‌ಉನ್ನತ ನೆಲೆಗಳಿಗೆ ಏರಿಸಬೇಕು. ಆಗ ಮಾತ್ರ ನಮಗೆ ಜೀವನದಲ್ಲಿ ಶಾಂತಿಸಮಾಧಾನಗಳು ದೊರಕುವುದು.

ಈ ಅಲ್ಪಜೀವಿತಾವಧಿಯಲ್ಲಿ ನಾವು ಎಷ್ಟು ಹೇಗೆ ಓದಿಕೊಂಡರೂ ಬಾಹ್ಯಜಗತ್ತಿನ ಬಗ್ಗೆ ಕಲಿತದ್ದುಬಹಳ ಕಡಿಮೆಯೇ‌ಆಗಿರುತ್ತದೆ. ಅಂಥ ವಿವರ ಸಂಗ್ರಹವನ್ನು ನಿಜವಾದಜ್ಞಾನ‌ಎನ್ನಲಾಗದು. ಆದರೆಧ್ಯಾನದ ಮೂಲಕ ನಾವು ಜೀವನದ ಆಳ ವಿಶಾಲತೆಗಳನ್ನು ಮತ್ತು ಪೂರ್ಣತೆ ಯನ್ನು‌ಅರಿಯುವುದು ಸಾಧ್ಯವಿದೆ.

ನಮ್ಮ ಮನೆಯ ಮುಂದೆ‌ಅಪರಿಚಿತರ ವಾಹನವೇನಾದರೂ ಪಾರ್ಕ್‌ಆಗಿದ್ದುಕಂಡರೆ ನಾವು ಅದನ್ನು‌ಇರಗೊಡುವುದಿಲ್ಲ. ಆದರೆ ನಮ್ಮ ಮನಸ್ಸಿನ ವಿಷಯದಲ್ಲಿ ಈ ಎಚ್ಚರ ವಹಿಸಲು ನಮಗೆ ಸಾಧ್ಯವಾಗಿದೆಯೆ? ನಮ್ಮ ಮನಸ್ಸಿನಲ್ಲಿ ಬೇಕಾದ ಚಿಂತೆಗಳನ್ನು ವಿವೇಕ ಪೂರ್ವಕವಾಗಿ ಪೋಷಿಸಲು, ಬೇಡವಾದ ಚಿಂತೆಗಳನ್ನು ದೂರಮಾಡಲು ನಮಗೆ ಸಾಧ್ಯವಾಗಬೇಕು.ಮನಸ್ಸನ್ನು ಶಾಂತಗೊಳಿಸುವಲ್ಲಿ ಧ್ಯಾನ ಸಹಾಯಮಾಡುತ್ತದೆ. ಹೀಗೆ ಶಾಂತವಾದ ಮನಸ್ಸಿನಲ್ಲಿ ನಮಗೆ ನಮ್ಮ ನಿಜಾತ್ಮದ ದನಿ ಕೇಳಿಸುತ್ತದೆ.

ಧ್ಯಾನದ ಉದ್ದೇಶವು, ಕ್ಷೋಭೆಗೊಳಗಾದ ನಮ್ಮ ಮನಸ್ಸನ್ನು ಶಾಂತ ಹಾಗೂ ಅಚಲವಾಗಿಸುವುದೇ ಆಗಿದೆ. ಧ್ಯಾನದಿಂದಾಗಿ ಮನಸ್ಸಿನಲ್ಲಿ ಚಿಂತೆಗಳು ಇಲ್ಲವಾದಲ್ಲಿ ಮನಸ್ಸು ಹೆಚ್ಚು ಪರಿಶುದ್ಧವೂ ಸೂಕ್ಷ್ಮವೂ ಆಗುತ್ತದೆ. ಮನಸ್ಸು ಆಗ ವಿಶ್ವದ ತಾಳಲಯಕ್ಕೆ ಹೊಂದಿಕೊಂಡಿರುತ್ತದೆ. ಆನಿಶ್ಚಲತೆಯಲ್ಲಿ ತಿಳಿಯಬೇಕಾದ ಆದರೆ ತಿಳಿದಿಲ್ಲದ ಜ್ಞಾನವು ತಿಳಿಯುತ್ತದೆ.

ಇತರರಿಗಾಗಿ ನಾವು ನಮ್ಮ‌ಅಂತರಂಗದಲ್ಲಿ ಹೆಚ್ಚು ಹೆಚ್ಚು ಅವಕಾಶ ಮಾಡಿದಷ್ಟು ನಮಗೆ ಸಂತೋಷ ಸಮಾಧಾನಗಳು ಹೆಚ್ಚಾಗಿ ಅನುಭವಕ್ಕೆ ಬರುತ್ತದೆ. ನಿಸ್ವಾರ್ಥತೆಯೇ ವಿಶ್ವದ ನಿಯಮವೂ, ನಮ್ಮಜೀವನದ ನಿಯಮವೂ‌ಆಗಿದೆ. ಆದ್ದರಿಂದಲೇ ಸ್ವಾರ್ಥಿಗಳೂ ಅಹಂಕಾರಿಗಳೂ ಜೀವನವನ್ನು ಹೃದಯಪೂರ್ವಕವಾಗಿ‌ ಅನುಭವಿಸಲಾರರು, ಸಂತೋಷವಾಗಿರಲಾರು. ಅವರಜೀವನಕ್ರಮವು ವಿಶ್ವನಿಯಮಕ್ಕೆ ಹೊಂದಿಕೊಂಡಿರುವುದಿಲ್ಲ. ಸೃಷ್ಟಿಯಲ್ಲಿ ಪ್ರತಿಯೊಂದೂ ವಿಶ್ವದ ತಾಳಲಯಕ್ಕೆ ಮಾತ್ರವೇ ಸ್ಪಂದಿಸುವುದು. ಇದನ್ನು‌ ಅರ್ಥಮಾಡಿ ಕೊಂಡು ನಾವು ಈ ನಿಯಮಕ್ಕೆ ಬದ್ಧರಾದರೆ ಶಾಂತಿ ಸಂತೋಷ ಐಶ್ವರ್ಯಗಳೆಲ್ಲವೂ ತಾವಾಗಿ ನಮ್ಮದಾಗುತ್ತವೆ.

ಮನೆಗಳಲ್ಲಿ ನಾವು ಸಾಮಾನ್ಯವಾಗಿ ದಿನಾ ಬೆಳಿಗ್ಗೆ ಅಂಗಳದಲ್ಲಿ ರಂಗೋಲಿ ಹಾಕುತ್ತೇವೆ. ಪ್ರತಿದಿನ ಹೊಸಾ ಡಿಸೈನ್‌ಹಾಕುವ ಮೊದಲು ಹಿಂದಿನ ದಿನದರಂಗೋಲಿಯನ್ನು ಬೇಸರವಿಲ್ಲದೆ ಅಳಿಸುತ್ತೇವೆ. ಅಂದಿನ ರಂಗೋಲಿ ಹಿಂದಿನ ದಿನಕ್ಕಿಂತಲೂಚೆನ್ನಾಗಿ‌ ಆಗಲೆಂದು ಪ್ರಯತ್ನಿಸುತ್ತೇವೆ. ಅದೇ ರೀತಿ, ನಾವು ಗತದ ಅನುಭವಗಳಲ್ಲಿ ಕಳೆದು ಹೋಗಬಾರದು, ವರ್ತಮಾನದ ಪೂರ್ಣಪ್ರಯೋಜನವನ್ನು ಪಡೆದುಕೊಳ್ಳಬೇಕು, ಮತ್ತು ಭಾವಿಯನ್ನು‌ಎದುರುನೋಡಬೇಕು. ಆಗ ಜೀವನದ ಸೌಂದರ್ಯವನ್ನು‌ಅನುಭವಿಸುವುದು ಸಾಧ್ಯ. ನನ್ನ ಮಕ್ಕಳ ಜೀವನಗಳು ಶಾಂತಿ ಮತ್ತು ಸಂತೋಷಗಳಿಂದ ಭರಿತವಾಗಲಿ. ಕೃಪೆ ಎಲ್ಲರನ್ನೂರಕ್ಷಿಸಲಿ.

ಅಮ್ಮನವರ ಎರಡು ದಿನಗಳ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮಹಾ ಅನ್ನ ಸಂತಾರ್ಪಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಮಹಾ ಭೋಜನವನ್ನು ಇಲ್ಲಿನ ಸ್ಥಳೀಯರ ಸಹಕಾರದೊಂದಿಗೆ ವಿದೇಶಿಯರೇ ತಯಾರಿಸಿರುವುದು ಮತ್ತೊಂದು ವಿಶೇಷ.

__ ಸತೀಶ್ ಕಾಪಿಕಾಡ್

Comments are closed.